Home Mangalorean News Kannada News ಮಂಗಳೂರು:  ನಾಗುರಿ ಪಂಪ್‍ಹೌಸ್ ಬಳಿ ರಸ್ತೆ ಅಭಿವೃದ್ಧಿ: ಜೆ. ಆರ್. ಲೋಬೊ

ಮಂಗಳೂರು:  ನಾಗುರಿ ಪಂಪ್‍ಹೌಸ್ ಬಳಿ ರಸ್ತೆ ಅಭಿವೃದ್ಧಿ: ಜೆ. ಆರ್. ಲೋಬೊ

Spread the love

ಮಂಗಳೂರು: ಶಾಸಕ ಜೆ. ಆರ್. ಲೋಬೊರವರ ವಿಶೇಷ ಶಿಫಾರಸಿನ ಮೇರೆಗೆ ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಬಿಡುಗಡೆಯಾದ 29 ಲಕ್ಷ ರೂಪಾಯಿ ಅನುದಾನದಲ್ಲಿ 48ನೇ ವಾರ್ಡಿನ ನಾಗುರಿ ಪಂಪ್ ಹೌಸ್ ಬಳಿಯಿಂದ ಪ್ರೇಮಗುಡ್ಡೆಯವರೆಗೆ ಅಗಲೀಕರಣ ಹಾಗೂ ಕಾಂಕ್ರೀಟಿಕರಣಗೊಂಡ ಕಾಮಗಾರಿಯ ಉದ್ಘಾಟನಾ ಕಾರ್ಯಕ್ರಮ ಇತ್ತೀಚಿಗೆ ನೇರವೆರಿತು.

a

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಹಲವಾರು ವರ್ಷಗಳಿಂದ ಸ್ಥಳಿಯ ನಾಗರಿಕರಿಗೆ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದಿರುವುದರ ಬಗ್ಗೆ ಕಳೆದ ವಿಧಾನಸಭಾ ಚುನವಾಣೆಗೆ ಅಭ್ಯರ್ಥಿಯಾಗಿ ಈ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಸ್ತೆಯ ಬೇಡಿಕೆಯನ್ನು ನನ್ನ ಮುಂದೆ ಇಟ್ಟಿದ್ದರು. ಅವರ ಮನವಿಗೆ ಸ್ಪಂದಿಸಿ, ಈ ಇಕ್ಕಟ್ಟಿನ ಪ್ರದೇಶದಲ್ಲಿ ಸುಮಾರು 29 ಲಕ್ಷ ರೂಪಾಯಿ ವೆಚ್ಚದಲ್ಲಿ 250 ಮೀಟರ್ ಉದ್ದ ರಸ್ತೆಯ ಅಗಲೀಕರಣ ಹಾಗೂ ಕಾಂಕ್ರೀಟಿಕರಣವನ್ನು ಅದ್ಯತೆಯ ಮೇರೆಗೆ ಮಾಡಲಾಗಿದೆ ಎಂದು ಶಾಸಕರು ತಿಳಿಸಿದರು.

ಈ ಆಭಿವೃದ್ಧಿಗೊಂಡ ಒಳರಸ್ತೆಗೆ ಮುಖ್ಯ ರಸ್ತೆಯೊಂದಿಗೆ ಸಂಪರ್ಕ ಕಲ್ಪಿಸುವ ತಡೆಗೊಡೆಯ ಕಾಮಗಾರಿ ಈಗಾಗಲೆ ಅಂತಿಮ ಹಂತದಲ್ಲಿದೆ ಎಂದು ಶಾಸಕರು ತೀಳಿಸಿದರು.

ಈ ಸಂದರ್ಭದಲ್ಲಿ ಸ್ಥಳಿಯ ಕಾರ್ಪೋರೇಟರ್ ಆಶಾ ಡಿ’ಸಿಲ್ವ, ಕೆಪಿಸಿಸಿ ಸದಸ್ಯ ಮೊಹಮದ್ ಬದ್ರುದ್ದೀನ್, ಅರುಣ್ ಕುವೇಲ್ಹೊ, ಜಗನ್ನಾಥ್ ಶೆಟ್ಟಿ, ಟಿ.ಕೆ ಸುಧೀರ್, ರಸ್ತೆ ಅಗಲಿಕರಣಕ್ಕೆ ಸ್ಥಳಕೊಟ್ಟ ಹೋಲಿ ಎಂಜಲ್ಸ್ ಕಾನ್ವೆಂಟಿನ ಸಿಸ್ಟರ್ ಮೆಟಿಲ್ಡಾ ಮುಂತಾದವರು ಉಪಸ್ಥಿತರಿದ್ದರು.

ಉರ್ವಾ ಹೊೈಗೆಬೈಲಿಗೆ 26 ಲಕ್ಷ ರೂಪಾಯಿ ವೆಚ್ಚದಲ್ಲಿ ಒಳಚರಂಡಿ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಅನುದಾನದಿಂದ 26ನೇ ದೇರೆಬೈಲು ನೈರುತ್ಯ ವಾರ್ಡಿನ ಉರ್ವಾ ಹೊೈಗೆಬೈಲಿನ ಬಳಿ ಸುಮಾರು 26 ಲಕ್ಷ ರೂಪಾಯಿ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆಯ ಗುದ್ದಲಿ ಪೂಜೆಯನ್ನು ವಾರ್ಡಿನ ನಗರಪಾಲಿಕೆಯ ಸದಸ್ಯ ರಾಧಕೃಷ್ಣರವರು ನೇರವೆರಿಸಿದರು.

ಈ ಸಂದರ್ಭದಲ್ಲಿ ಮನಪಾ ಸದಸ್ಯರಾದ ನಾಗವೇಣಿ, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ವಿಶ್ವಾಸ್ ದಾಸ್, ವಾರ್ಡ ಅಧ್ಯಕ್ಷ ಉಮೇಶ್ ಕೋಟ್ಯನ್, ನರಸಿಂಹ ಬೋಳೂರು, ಬಿ.ಜಿ. ಸುವರ್ಣ, ದೀಲಿಪ್ ಕುಮಾರ್, ಚೇತನ್ ಕುಮಾರ್, ವಾಮನ ಶೆಟ್ಟಿ, ಟಿ.ಕೆ. ಸುಧೀರ್, ನಿಲೇಶ್, ರವಿ ಉರ್ವಾ, ಗಣೇಶ್ ಮುಂತಾದವರು ಉಪಸ್ಥಿತರಿದ್ದರು.


Spread the love

Exit mobile version