ಉಳ್ಳಾಲದಲ್ಲಿ ಅಕ್ರಮ ಜಾನುವಾರು ಸಾಗಾಟ ದಂಧೆ; ಇಬ್ಬರ ಬಂಧನ
ಮಂಗಳೂರು: ಉಳ್ಳಾಲ ಪೋಲಿಸ್ ಠಾಣಾ ವ್ಯಾಪ್ತಿಯ ಕೊಟೆಕಾರ್ ರಾ.ಹೆ. 66ರಲ್ಲಿ ಬೆಳಗಿನ ಜಾವ ಮಂಗಳೂರು ಕಡೆಯಿಂದ ಕೆರಳ ಕಡೆಗೆ ಅಕ್ರಮವಾಗಿ ಬೃಹತ್ ಸಂಖ್ಯೆಯ ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಎಲ್ಲಿಂದಲೋ ಕಳವು ಮಾಡಿ ಮಾರಾಟ ಮಾಡಲು ಲಾರಿಯಲ್ಲಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದ ಅಕ್ರಮ ಜಾನುವಾರು ಸಾಗಾಟ ದಂಧೆ ನಡೆಸುತ್ತಿದ್ದ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತರನ್ನು ಕಾಸರಗೋಡು ಚೆರ್ಕಲ ನಿವಾಸಿ ದಿವಾಕರನ್ ನಾಯರ್ (47), ಚೆಂಗಳ ನಿವಾಸಿ ಸೈನುಲ್ ಅಬಿದ್, (33) ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಠಾಣಾ ಪೋಲಿಸ್ ನಿರೀಕ್ಷಕರಾದ ಗೋಪಿಕೃಷ್ಣ ಮತ್ತು ಪೊಲೀಸ್ ಉಪ ನಿರೀಕ್ಷಕರಾದ ವಿನಾಯಕ ತೋರಗಲ್ ನೇತೃತ್ವದಲ್ಲಿ ಆರೋಪಿಗಳನ್ನು ಪತ್ತೆ ಮಾಡಿ 20 ಕೋಣ ಹಾಗೂ ಒಂದು ಎಮ್ಮೆಯನ್ನು ಹಾಗೂ ಲಾರಿಯನ್ನು, 2 ಮೊಬೈಲ್, 11000 ನಗದನ್ನು ವಶಪಡಿಸಿಕೊಂಡಿದ್ದು, ಒಟ್ಟು ಮೌಲ್ಯ ರೂ 19 ಲಕ್ಷ ಎಂದು ಅಂದಾಜಿಸಲಾಗಿದೆ.
ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.