ಉಳ್ಳಾಲ ಪೋಲಿಸರಿಂದ ಅಂತರಾಜ್ಯ ಕಳ್ಳನ ಬಂಧನ

Spread the love

ಉಳ್ಳಾಲ ಪೋಲಿಸರಿಂದ ಅಂತರಾಜ್ಯ ಕಳ್ಳನ ಬಂಧನ

ಮಂಗಳೂರು: ಉಳ್ಳಾಲ ಠಾಣಾ ಪೋಲಿಸರು ಅಂತರ್ ರಾಜ್ಯ ಕಳ್ಳತನದ ಆರೋಪಿಯನ್ನು ಬಂಧಿಸಿ 20ಗ್ರಾಂ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದದಾರೆ.

ದಿನಾಂಕ. 02-02-2018 ರಂದು ಉಳ್ಳಾಲ ಪೊಲೀಸ್ ಠಾಣಾ ಮೊ.ನಂ.17/2018 ಕಲಂ 392 ಐಪಿಸಿ ಪ್ರಕರಣದ ಆರೋಪಿತನಾದ ಅಂತರ್‌ರಾಜ್ಯ ಖ್ಯಾತಿಯ ಸರ ಕಳ್ಳತನದ ಆರೋಪಿ ಕಾಸರಗೋಡು ನಿವಾಸಿ ಅಬ್ದುಲ್ ಹ್ಯಾರಿಸ್ (29)   ಎಂಬವರನ್ನು ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಠಾಣಾ ಪೊಲೀಸ್ ನಿರೀಕ್ಷಕರಾದ ಗೋಪಿಕೃಷ್ಣ.ಕೆ.ಆರ್. ಮತ್ತು ಪೊಲೀಸ್ ಉಪ-ನಿರೀಕ್ಷಕರಾದ ಗುರಪ್ಪ ಕಾಂತಿ ಮತ್ತು ಸಿಬ್ಬಂದಿಯವರು ದೇರಳಕಟ್ಟೆ ಎಂಬಲ್ಲಿ ಪತ್ತೆ ಮಾಡಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿತನು ಕೃತ್ಯದಿಂದ ಅಕ್ರಮವಾಗಿ ಗಳಿಸಿದ ಸುಮಾರು 20 ಗ್ರಾಂ ತೂಕದ ಚಿನ್ನದ ಸರವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡ ಚಿನ್ನದ ಸರದ ಅಂದಾಜು ಮೌಲ್ಯ ರೂ.60,000/- ಆಗಿರುತ್ತದೆ.

 ದಿನಾಂಕ. 12-1-2018 ರಂದು ಡೋನಿ ನೋಬರ್ಟ್‌ ಫೆರ್ನಾಂಡೀಸ್ (27) ತಂದೆ. ವೆಲೆರಿಯನ್ ಫೆರ್ನಾಂಡೀಸ್ ವಾಸ. ಗುಡ್ಡೆಅಂಗಡಿ ಹೌಸ್, ಪಾಣೆಮಂಗಳೂರು ಬಂಟ್ವಾಳ ತಾಲೂಕು ಎಂಬವರು ಸೋಮೇಶ್ವರ ಬೀಚ್ ಬಳಿಗೆ ಅವರ ಸ್ನೇಹಿತೆಯೊಂದಿಗೆ ಬಂದಿದ್ದಾಗ ಬೆಳಿಗ್ಗೆ 11-30 ಗಂಟೆಯ ಸಮಯಕ್ಕೆ ಆರೋಪಿತನು ಸದ್ರಿಯವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬಲವಂತವಾಗಿ ಕಸಿದುಕೊಂಡು ಸುಲಿಗೆ ಮಾಡಿಕೊಂಡು ಓಡಿ ಹೋಗಿ ತಪ್ಪಿಸಿಕೊಂಡಿದ್ದ. ಈ ಬಗ್ಗೆ ಸದ್ರಿಯವರು ಉಳ್ಳಾಲ ಠಾಣೆಯಲ್ಲಿ ದೂರು ಸಲ್ಲಿಸಿ ಪ್ರಕರಣವನ್ನು ದಾಖಲಿಸಿರುತ್ತಾರೆ. ಅದರಂತೆ  ದಿನಾಂಕ. 2-2-2018 ರಂದು ಉಳ್ಳಾಲ ಠಾಣೆಯಲ್ಲಿ ಮೊ.ನಂ.17/2018 ಕಲಂ 392 ಐಪಿಸಿ ಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

 ಆರೋಪಿತನನ್ನು ದಸ್ತಗಿರಿ ಮಾಡಿದ್ದು ಆತನ ವಶದಿಂದ ಸುಲಿಗೆಗೆ ಸಂಬಂಧಿಸಿದ ಫಿರ್ಯಾದಿದಾರರ ಚಿನ್ನದ ಸರವನ್ನು ಯಥಾಸ್ಥಿತಿಯಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿ ಆರೋಪಿತನನ್ನು ಅತೀ ಶೀಘ್ರದಲ್ಲಿ ಪತ್ತೆ ಮಾಡಿ ಚಿನ್ನದ ಸರವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿತನಿಗೆ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಕರಣದ ತನಿಖೆಯನ್ನು  ಠಾಣಾ ಪಿ.ಐ ಗೋಪಿಕೃಷ್ಣ. ಕೆ.ಆರ್. ರವರು ಕೈಗೊಂಡಿರುತ್ತಾರೆ.

ಮಂಗಳೂರು ದಕ್ಷಿಣ ಉಪ-ವಿಭಾಗದ ಎ.ಸಿ.ಪಿ. ರವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಗೋಪಿಕೃಷ್ಣ.ಕೆ.ಆರ್. ಹಾಗೂ ಪೊಲೀಸ್ ಉಪ-ನಿರೀಕ್ಷಕರಾದ ಗುರಪ್ಪ ಕಾಂತಿ, ಎ.ಎಸ್.ಐ ವಿಜಯರಾಜ್  ಮತ್ತು ಸಿಬ್ಬಂದಿಗಳಾದ ಸಿಹೆಚ್‌ಸಿ  396 ಜಯಪ್ರಕಾಶ್, ಸಿಪಿಸಿ 559 ಬಸವರಾಜ, ಪ್ರಶಾಂತ್ ಸಿಪಿಸಿ 561, ಚಿದಾನಂದ ಸಿಪಿಸಿ 2288, ಸುರೇಶ ಸಿಪಿಸಿ 2290, ಸಿಪಿಸಿ 2424 ವಾಸುದೇವ ರವರು ಸಹಕರಿಸಿರುತ್ತಾರೆ.


Spread the love