Home Mangalorean News Kannada News ಉಳ್ಳಾಲ ಯುವಕ ಅಸ್ಟಿನ್ ಕೊಲೆ ಯತ್ನ ಪ್ರಕರಣ: 4 ಮಂದಿ ಆರೋಪಿಗಳ ಸೆರೆ

ಉಳ್ಳಾಲ ಯುವಕ ಅಸ್ಟಿನ್ ಕೊಲೆ ಯತ್ನ ಪ್ರಕರಣ: 4 ಮಂದಿ ಆರೋಪಿಗಳ ಸೆರೆ

Spread the love

ಉಳ್ಳಾಲ ಯುವಕ ಅಸ್ಟಿನ್ ಕೊಲೆ ಯತ್ನ ಪ್ರಕರಣ: 4 ಮಂದಿ ಆರೋಪಿಗಳ ಸೆರೆ

ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಅಜಾದ್ ನಗರದಲ್ಲಿ ಯುವಕನೊಬ್ಬನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಬಂಧಿತರನ್ನು ಉಳ್ಳಾಲ ಮೇಲಂಗಡಿ ನಿವಾಸಿ ಜಲಾಲ್ @ ಜಲಾಲುದ್ದೀನ್ (28), ಸೋಮೇಶ್ವರ ನಿವಾಸಿ ಅರ್ಫಾನ್ @ ಅಪ್ಪು (25), ಉಳ್ಳಾಲ ಟಿ.ಸಿ. ರೋಡ್ ನಿವಾಸಿ ಜಾಫರ್ ಸಾದಿಕ್ (20), ತಲಪಾಡಿ ಕೆ.ಸಿ. ರೋಡ್ ನಿವಾಸಿ ಮುಝಂಬಿಲ್ (22) ಎಂದು ಗುರುತಿಸಲಾಗಿದೆ

ಪ್ರಕರಣದ ವಿವರ: ಜುಲೈ 11 ರಂದು ಅಸ್ಟಿಮ್ ನಿತೇಶ್ ಮೊಂತೆರೋ ಎಂಬವರು ಉಳ್ಳಾಲ ಅಜಾದ್ ನಗರದ ಕಿರಿದಾದ ರಸ್ತೆಯಲ್ಲಿ ಅವರ ರಿಕ್ಷಾ ಟೆಂಪೋವನ್ನು ನಿಲ್ಲಿಸಿ ಟೆಂಪೋ ರಿಕ್ಷಾದಿಂದ ಮಣ್ಣಿನ ಲೋಡನ್ನು ಖಾಲಿ ಮಾಡುತ್ತಿದ್ದ ಸಮಯ ಅದೇ ರಸ್ತೆಯಿಂದಾಗಿ ಬಂದ ಕಪ್ಪು ಬಣ್ಣದ ಕಾರೊಂದರಲ್ಲಿ 4 ಮಂದಿ ವ್ಯಕ್ತಿಗಳು ಟೆಂಪೋ ರಿಕ್ಷಾವನ್ನು ರಸ್ತೆಯಿಂದ ತೆಗೆಯುವಂತೆ ಜೋರು ಮಾಡಿ ನಂತರ ರಿಕ್ಷಾಕ್ಕೆ ಅಡ್ಡ ನಿಂತು ಅವರಿಗೆ ಕೈಯಿಂದ ಹಲ್ಲೆ ನಡೆಸಿರುವುದಲ್ಲದೇ ಅವರ ಕಾರಿನ ಸೀಟಿನಲ್ಲಿದ್ದವನು ಕಾರಿನಿಂದ ಚೂರಿಯೊಂದನ್ನು ತೆಗೆದುಕೊಂಡು ಬಂದು ಅಸ್ಟಿಮ್ ನಿತೇಶ್ ಮೊಂತೆರೋ ರವರಿಗೆ ಚೂರಿಯಿಂದ ಕೈಗೆ ಇರಿದು, ನಂತರ ಎದೆಗೆ ಇರಿಯಲು ಪ್ರಯತ್ನಿಸಿದ ಸಮಯ ಅಸ್ಟಿಮ್ ನಿತೇಶ್ ಮೊಂತೆರೋ ರವರು ಅವರಿಂದ ಓಡಿ ತಪ್ಪಿಸಿಕೊಂಡಿದ್ದರು. ಗಾಯಗೊಂಡ ಅಸ್ಟಿಮ್ ನಿತೇಶ್ ಮೊಂತೆರೋ ರವರು ಉಳ್ಳಾಲದ ಸರೋಜ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಈ ಕೃತ್ಯದ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಆರೋಪಿಗಳು ಉಪಯೋಗಿಸಿದ ಕಾರಿನ ಬಗ್ಗೆ ಮಾಹಿತಿ ಪಡೆದು ಈ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳ ತಲಾಷೆಯಲ್ಲಿದ್ದ ಸಮಯ ಆರೋಪಿಗಳು ಈ ಕೊಲೆ ಯತ್ನ ಕೃತ್ಯದಲ್ಲಿ ಭಾಗಿಯಾಗಿ ಮೈಸೂರು ಕಡೆಗೆ ಹೋಗುತ್ತಿದ್ದ ಮಾಹಿತಿಯನ್ನು ಪಡೆದು ಜುಲೈ 12 ರಂದು ಸುಳ್ಯ ಕಲ್ಲುಗುಂಡಿ ಎಂಬಲ್ಲಿಂದ ವಶಪಡೆದುಕೊಳ್ಳಲಾಗಿದೆ.

ಆರೋಪಿಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ KA19 P 2360 ಕಪ್ಪು ಬಣ್ಣದ ಮಾರುತಿ ಅಲ್ಟೋ ಕಾರು ಹಾಗೂ ಪರಾರಿಯಾಗಲು ಉಪಯೋಗಿಸಿದ KA19 MD 5331 ನೇ ಮಾರುತಿ ಅಲ್ಟೋ 800 ಕಾದನ್ನು ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಪೊಲೀಸ್ ಕಮೀಷನರ್ ಟಿ. ಆರ್ ಸುರೇಶ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಕೆ.ಎಂ. ಶಾಂತರಾಜು, ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ ಹನುಮಂತರಾಯ ಮತ್ತು ಎಸಿಪಿ ಸಿಸಿಬಿ ಬಿ ವೆಲೆಂಟೈನ್ ಡಿ ಸೋಜಾ ರವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯ್ಕ್ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.


Spread the love

Exit mobile version