Spread the love
ಉಳ್ಳಾಲ: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
ಮಂಗಳೂರು: ಇಲ್ಲಿನ ಸೋಮೇಶ್ವರ ರುದ್ರ ಬಂಡೆಯಿಂದ ಹಾರಿದ ಯುವತಿಯನ್ನು ಸ್ಥಳೀಯ ಈಜುಗಾರರು ರಕ್ಷಿಸಿದ ಘಟನೆ ಉಳ್ಳಾಲದಲ್ಲಿ ಸಂಭವಿಸಿದೆ.
ಮಾಡೂರು ಬಾಡಿಗೆ ಮನೆಯಲ್ಲಿ ವಾಸಿಸುವ ಯುವತಿ ಸಮುದ್ರಕ್ಕೆ ಹಾರಿದ್ದು ಮಂಗಳೂರಿನ ಕಾಲೇಜು ಒಂದರಲ್ಲಿ ಪದವಿ ಶಿಕ್ಷಣವನ್ನು ಪಡೆಯುತ್ತಿದ್ದಾಳೆ ಎನ್ನಲಾಗಿದೆ.
ಸ್ಥಳದಲ್ಲಿ ಸಿಕ್ಕ ರಕ್ಷಣಾ ಸಾಮಾಗ್ರಿಗಳನ್ನು ಬಳಸಿ ಈಜುಗಾರರು ಯುವತಿಯನ್ನು ರಕ್ಷಿಸಿದ್ದು ಯುವತಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Spread the love