ಎಂಜಿನ್ ದೋಷ: ಮಂಗಳೂರು-ದೋಹಾ ವಿಮಾನ ತುರ್ತು ಭೂಸ್ಪರ್ಶ

Spread the love

ಎಂಜಿನ್ ದೋಷ: ಮಂಗಳೂರು-ದೋಹಾ ವಿಮಾನ ತುರ್ತು ಭೂಸ್ಪರ್ಶ

ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೋಹಾಕ್ಕೆ ಹಾರಾಟ ನಡೆಸಿದ್ದ ವಿಮಾನವು ಕೇಲವೇ ನಿಮಿಷಗಳಲ್ಲಿ ಎಂಜಿನ್ ನಲ್ಲಿ ಉಂಟಾದ ದೋಷದಿಂದ ತುರ್ತು ಭೂಸ್ಪರ್ಶ ಮಾಡಿದ ಘಟನೆ ಗುರುವಾರ ನಡೆದಿದೆ.

ಸುಮಾರು 170 ಮಂದಿ ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಸಂಜೆ 5.30 ಕ್ಕೆ ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಿಂದ ಹೊರಟಿತ್ತು. ಹಾರಾಟದ ಸಮಯದಲ್ಲಿ ಎಂಜಿನ್ ನಡುವೆ ದೋಷ ಕಂಡಿದ್ದರಿಂದ ಪೈಲಟ್ ಮರಳಿ ಬಜ್ಪೆ ವಿಮಾನ ನಿಲ್ದಾಣದಲ್ಲೇ ವಿಮಾನವನ್ನು ಇಳಿಸುವಲ್ಲಿ ಸಫಲರಾದರು.

ಮಂಗಳೂರಿನಿಂದ ಹೊರಟಿದ್ದ ವಿಮಾನವು ಅರ್ಧ ಗಂಟೆಯ ಕಾಲ ಆಕಾಶದಲ್ಲಿ ಹಾರಾಟ ನಡೆಸಿತು. ಇದೇ ಸಂದರ್ಭದಲ್ಲಿ ಬ್ರಹತ್ ಶಬ್ದವೊಂದು ಕೇಳಿಬಂದಿದ್ದು ಅಪಾಯವನ್ನು ಅರಿತ ಪೈಲಟ್ ವಿಮಾನವನ್ನು ಮರಳಿ ನಿಲ್ದಾಣದಲ್ಲಿ ಇಳಿಸುವಲ್ಲಿ ಸಫಲರಾದರು. ಪೈಲಟ್ ಅವರ ಸಮಯ ಪ್ರಜ್ಞೆ ಪ್ರಯಾಣಿಕರ ಪ್ರಶಂಸೆಗೆ ಪಾತ್ರವಾಯಿತು.

ಪ್ರಯಾಣಿಕರಿಗೆ ವಿಮಾನ ಕಂಪನಿಯ ವತಿಯಿಂದ ನಗರದ ಹೋಟೆಲ್ ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದ್ದು ಶುಕ್ರವಾರ ಬೆಳಿಗ್ಗೆ ವಿಮಾನ ಹೊರಡಲಿದೆ.


Spread the love