ಎಂಪಿಎಲ್ ಟ್ರೋಫಿ ಅನಾವರಣ, ತಂಡಗಳ ಘೋಷಣೆ
ಮಂಗಳೂರು : ಬ್ರಾಂಡ್ ವಿಷನ್‍ಈವೆಂಟ್ಸ್, ಮಂಗಳೂರು ಆಕೇಶನಲ್ಸ್‍ಕ್ರೀಡಾ ಸಂಸ್ಥೆ ಮತ್ತು ಸಿ ಬರ್ಡ್‍ಕ್ರಿಕೆಟ್‍ಅಕಾಡಮಿ ಸಂಸ್ಥೆಗಳು ಕರ್ನಾಟಕರಾಜ್ಯಕ್ರಿಕೆಟ್ ಸಂಸ್ಥೆಯಅನುಮೋದನೆಯೊಂದಿಗೆ ಪಣಂಬೂರಿನ ನವಮಂಗಳೂರು ಬಂದರು ಬಿ.ಆರ್. ಅಂಬೇಡ್ಕರ್‍ಕ್ರೀಡಾಂಗಣದಲ್ಲಿ ಮಾರ್ಚ್ 20ರಿಂದ ಎಪ್ರಿಲ್ 1ರವರಗೆ 13 ದಿನಗಳ ಕಾಲ ಆಯೋಜಿಸಿರುವ ಮಂಗಳೂರು ಪ್ರೀಮಿಯರ್ ಲೀಗ್‍ಕ್ರಿಕೆಟ್ ಪಂದ್ಯಾಕೂಟದಟ್ರೋಫಿಅನಾವರಣ ಮತ್ತು ತಂಡUಳ ಘೋಷಣಾಕಾರ್ಯಕ್ರಮವು ಮಂಗಳೂರಿನ ಸಿಟಿ ಸೆಂಟರ್ ಸಭಾಭವನದಲ್ಲಿಜರಗಿತು.
ವರ್ಣರಂಜಿತಕಾರ್ಯಕ್ರಮದಲ್ಲಿಆಕರ್ಷಕಟ್ರೋಫಿಯನ್ನು ಅನಾವರಣಗೊಳಿಸಿ ಮಾತನಾಡಿದ ಮೀನುಗಾರಿಕಾ ಫೆಡರೇಷನಿನ ಅಧ್ಯಕ್ಷ ಹಾಗೂ ನವಮಂಗಳೂರು ಬಂದರಿನ ಟ್ರಸ್ಟಿ ಶ್ರೀ ಯಶ್‍ಪಾಲ್ ಸುವರ್ಣರವರು ಮಾತನಾಡಿಎಂಪಿಎಲ್ ಕಳೆದ ಮೂರು ವರುಷಗಳಿಂದ ಉಡುಪಿ, ದಕ್ಷಿಣಕನ್ನಡ ಮತ್ತುಕೊಡಗು ಜಿಲ್ಲೆಗಳನ್ನೊಳಗೊಂಡ ಮಂಗಳೂರು ವಲಯದಲ್ಲಿಒಂದುಕ್ರಿಕೆಟ್ ಹಬ್ಬವಾಗಿ ಮೂಡಿ ಬಂದಿದೆ ಮಾತ್ರವಲ್ಲದೆಇಲ್ಲಿನ ಎಲೆ ಮರೆಯ ಅರಳುತ್ತಿರುವ ಕ್ರಿಕೆಟ್ ಪ್ರತಿಭೆಗಳಿಗೆ ಮೇಲ್ದರ್ಜೆಗೇರಲು ಮೆಟ್ಟಿಲಾಗಿ ಮೂಡಿಬಂದಿರುವುದು ಸಂತಸಕರಎಂದರು.
ಈ ಸಮಾರಂಭದಲ್ಲಿ ವಿವಿಧ ತಂಡಗಳ ಆಟದ ಉಡುಗೆಗಳನ್ನು ಬಿಡುಗಡೆ ಮಾಡಲಾಯಿತಲ್ಲದೆ ಕ್ಲಾಸಿಕ್ ಬಂಟ್ವಾಳ, ಟಿ4 ಸೂಪರ್‍ಕಿಂಗ್ ಮತ್ತುಯುನೈಟೆಡ್ ಉಲ್ಲಾಳ ತಂಡಗಳನ್ನು ಘೋಷಣೆ ಮಾಡಲಾಯಿತು.ಈ ತಂಡಗಳ ಮಾಲೀಕರು, ತರಬೇತುದಾರರು ಮತ್ತುಆಟಗಾರರು ವೇದಿಕೆಯ ಮೇಲೆ ಬೆಕ್ಕಿನ ನಡೆಯನ್ನು ಪ್ರದರ್ಶಿಸಿದರು.ನೃತ್ಯ ವೈವಿಧ್ಯಕಾರ್ಯಕ್ರಮವುಜನಮನವನ್ನು ರಂಜಿಸಿತು.
ಸಮಾರಂಭದಲ್ಲಿ ಲಾರೆನ್ಸ್‍ಡಿಸೋಜ,ಗಿರಿಧರ್ ಶೆಟ್ಟಿ, ಎಂ.ಹೆಚ್.ಶರೀಫ್, ಮುಸ್ತಾಫ, ಹಂಝಾದೇಂಜಿಪಾಡಿ, ರಾಜೇಶ್, ದಿಜೀಶ್‍ದಾಮೋದರನ್, ನೀಶಾದ್‍ಎಮ್ಮೆಕೆರೆ, ಮ್ಯಾಕ್ನಿಲ್ ನೋರೊನ್ನಾ, ಝಾಕೀರ ಉಲ್ಲಾಳ, ಮಾನಸಜೈನ್, ಶಾವಾಝ್,ಮಮ್ತಾಝ್, ತನುಜಾ, ಜಿನ್ಸ್‍ಜಾನ್, ನೇಹಾ ಮೊದಲಾದವರು ಭಾಗವಹಿಸಿದ್ದರು.
ಮಹ್ಮಮದ್ ಸಿರಾಜುದ್ದೀನ್‍ರವರು ಸ್ವಾಗತಿಸಿದರು.ಇಮ್ತಿಯಾಝರವರು ವಂದಿಸಿದರು.
ದಿನಾಂಕ 20.03.2018 ರಂದು ಬೆಳಿಗ್ಗೆ 9.00 ಗಂಟೆಯಿಂದ ಎಂ.ಪಿ.ಎಲ್. ಪಂದ್ಯಾಟಗಳು ನಡೆಯಲಿದ್ದು ಪ್ರಥಮ ಪಂದ್ಯವು ಹಿಂದಿನ ಎರಡು ವರುಷಗಳ ವಿಜೇತ ತಂಡಗಳಾದ ಬೆದ್ರ ಬುಲ್ಸ್ ಮತ್ತುಕೋಸ್ಟಲ್‍ಡೈಜೆಸ್ಟ್ ನಡುವೆಜರಗಲಿದೆ.ಎರಡನೆಯ ಪಂದ್ಯವು ಕ್ಲಾಸಿಕ್ ಬಂಟ್ವಾಳ ಮತ್ತುಯುನೈಟೆಡ್ ಉಲ್ಲಾಳ ತಂಡಗಳ ನಡುವೆಜರಗಲಿವೆ.ದಿನದಕೊನೆಯ ಪಂದ್ಯವು ಕಾರ್ಕಳ ಗ್ಲೇಡಿಯೇಟರ್ಸ್ ಮತ್ತುಟೀಂಎಲಿಗೆಂಟ್ ನಡುವೆಜರಗಲಿದೆ.ಪ್ರತಿ ದಿನವೂ ಮೂರು ಪಂದ್ಯಗಳು ಬೆಳಿಗ್ಗೆ 9.00 ಗಂಟೆಗೆ, ಅಪರಾಹ್ನ 2.00 ಗಂಟೆಗೆ ಮತ್ತು ಸಂಜೆ 6.00 ಗಂಟೆಗೆಜರಗಲಿರುವುದು.ಈ ಬಾರಿ ಕೆ.ಪಿ.ಎಲ್, ಐಪಿಎಲ್, ರಣಜಿಯಖ್ಯಾತನಾಮಆಟಗಾರರು ಸಹ ವಿವಿಧ ತಂಡಗಳಲ್ಲಿ ಭಾಗವಹಿಸುತ್ತಿದ್ದು ಪಂದ್ಯಗಳು ಪ್ರೇಕ್ಷಕರಿಗೆ ಹೆಚ್ಚಿನ ಮನೋರೊಂಜನೆಯನ್ನು ನೀಡಬಲ್ಲದುಎಂದು ನಿರೀಕ್ಷಿಸಲಾಗಿದೆ.
ಪಂದ್ಯಕೂಟದ ವಿಜೇತತಂಡವುಆಕರ್ಷಕಟ್ರೋಫಿಯೊಂದಿಗೆರೂ.ಆರು ಲಕ್ಷ ನಗದು, ದ್ವಿತೀಯ ಸ್ಥಾನೀ ತಂಡಕ್ಕೆರೂ.ಮೂರು ಲಕ್ಷ ನಗದು ಬಹುಮಾನದೊರೆಯಲಿದೆ.ಸರಣಿ ಶ್ರೇಷ್ಠ ಆಟಗಾರನಿಗೆ ಹೊಚ್ಚ ಹೊಸ ಅಮೇರಿಕನ್‍ಯು.ಎಂ.ಬೈಕನ್ನೇರುವಅವಕಾಶವನ್ನುತೆರೆದಿಡಲಾಗಿದೆಯಲ್ಲದೆಇತರ ಹಲವಾರು ಬಹುಮಾನಗಳು ಆಟಗಾರರಕೈಸೇರಲುಕಾಯುತ್ತಿವೆ.
ಮಾರ್ಚ್ 20ರಂದು ಸಂಜೆ 5.30ರಿಂದ ಆರಂ¨sವಾಗಲಿರುವಉದ್ಘಾಟನಾ ಸಮಾರಂಭದಲ್ಲಿ ಭಾರತಕ್ರಿಕೆಟ್‍ತಂಡದ ಮಾಜಿಆಟಗಾರಭಾರತತಂಡದ ಮಾಜಿಕ್ರಿಕೆಟ್‍ತಾರೆ ವೆಂಕಟೇಶ ಪ್ರಸಾದ್‍ರವರು ಚಾಲನೆ ನೀಡಲಿರುವರು.ಅತಿಥಿಗಳಾಗಿ ಭಾರತದ ಮಾಜೀಆಟಗಾರರಾದರÀಘುರಾಮ್ ಭಟ್ ಮತ್ತು ಶ್ರೀಶಾಂತ್ ರವರು ಭಾಗವಹಿಸಲಿದ್ದು ಶ್ರೀಲಂಕಾದ ಕ್ರಿಕೆಟ್‍ಆಟಗಾರರಾದರೋಷನ್ ಡಿಸಿಲ್ವಾ ಮತ್ತು ಮಿಲಿಂದ್ ಸಿರಿವರ್ಧನರವರು ಸಹ ವಿಶೇಷ ಅತಿಥಿಗಳಾಗಿ ಜತೆಗೂಡಿ ಸಮಾರಂಭಕ್ಕೆ ಮೆರುಗು ನೀಡಲಿರುವರು. ಅದ್ದೂರಿಯ ವರ್ಣರಂಜಿತ ಸಮಾರಂಭವು ಹೊನಲು ಬೆಳಕಿನಲ್ಲಿ ಜರಗಲಿದ್ದು, ಪಂದ್ಯಕೂಟದಲ್ಲಿ ಭಾಗವಹಿಸಲಿರುವಎಲ್ಲಾ 12 ತಂಡಗಳ ಆಟಗಾರರುಎಲ್ಲ ತಂಡಗಳ ಮಾಲೀಕರು, ತರಬೇತುದಾರರು ವರ್ಣರಂಜಿತತೊಡುಗೆಯೊಂದಿಗೆ ಭಾಗವಹಿಸಲಿರುವರು.ವಿವಿzs À ರೀತಿಯ ಮನೋರಂಜನಾ ಕಾರ್ಯಕ್ರಮಗಳು ಈ ಮಹಾ ಕ್ರೀಡಾ ಹಬ್ಬಕ್ಕೆ ಮೆರುಗನ್ನು ನೀಡಲಿದೆ.ಪಂದ್ಯಾಟಗಳ ಆರಂಭದ ಬಳಿಕ ಆಸ್ಟ್ರೇಲಿಯಾದ ಮಾಜಿಕ್ರಿಕೆಟಿಗ ಶ್ರೀಲಂಕಾ ಸಂಜಾತದೇವ್‍ವಾಟ್‍ಮೋರ್‍ರವರು ಸಹ ಆಗಮಿಸಿ ಆಟಗಾರರನ್ನು ಹುರಿದುಂಬಿಸಲಿರುವರು.
ಪಂದ್ಯಗಳು ಡೆನ್‍ಟಿವಿ ಚಾನಲ್‍ಮೂಲಕ ರಾಜ್ಯದಾದ್ಯಂತ ಮತ್ತುಇತರ ಪ್ರಾದೇಶಿಕ ಚಾನಲ್‍ಗಳ ಮೂಲಕ ಹಾಗೂ ಫೇಸ್ ಬುಕ್ ಮೂಲಕವೂ ನೇರ ಪ್ರಸಾರವನ್ನುಕಾಣಲಿದೆ.
ಮಹ್ಮಮದ್ ಸಿರಾಜುದ್ದೀನ್‍ರವರು ಸ್ವಾಗತಿಸಿದರು.ಇಮ್ತಿಯಾಝರವರು ವಂದಿಸಿದರು.