Home Mangalorean News Kannada News ಎಂ.ಐ.ಟಿ ಕುಂದಾಪುರ ಹತ್ತನೇ ಪದವಿ ಪ್ರದಾನ ಸಮಾರಂಭ

ಎಂ.ಐ.ಟಿ ಕುಂದಾಪುರ ಹತ್ತನೇ ಪದವಿ ಪ್ರದಾನ ಸಮಾರಂಭ

Spread the love

ಎಂ.ಐ.ಟಿ ಕುಂದಾಪುರ ಹತ್ತನೇ ಪದವಿ ಪ್ರದಾನ ಸಮಾರಂಭ

ಕುಂದಾಪುರ: ಹತ್ತನೇ ಪದವಿ ಪ್ರಧಾನ ಸಮಾರಂಭವನ್ನು ಅಕ್ಟೋಬರ್ 23 ರಂದು ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಮುಖ್ಯ ಅತಿಥಗಳಾಗಿ ಭಾಗವಹಿಸಿದ ಕಾಂಕ್ರೆಟ್ ಟೆಕ್ನಾಲಜಿಯ ಪಿತಾಮಹ ಎನಿಸಿಕೊಂಡಂತಹ ಪ್ರೊ. ಎಂ.ಎಸ್. ಶೆಟ್ಟಿ ತಮ್ಮ ಭಾಷಣದಲ್ಲಿ ದೇಶದ ಬೆಳವಣಿಗೆಯಲ್ಲಿ ಇಂಜಿನಿಯರಿಂಗ್ ಪಾತ್ರ ಮಹತ್ವವಾದದ್ದು ಎಂದು ಹೇಳಿ, ಹೊಚ್ಚ ಹೊಸ ಇಂಜಿನಿಯರಿಗಳು ದೇಶದ ಪ್ರಗತಿಗಾಗಿ ದುಡಿದರೆ ದೇಶಕ್ಕೆ “ಒಳ್ಳೆಯ ದಿನಗಳು ಖಂಡಿತಾ ಬರುತ್ತದೆ” ಎಂದು ಕಿವಿ ಮಾತು ಹೇಳಿದರು. ಭಾರತವನ್ನು ಸೂಪರ್ ಶಕ್ತಿಯಾಗಿ ಮಾರ್ಪಡಿಸಲು ಇಂಜಿನಿಯರಿಗಳಿಗೆ ಅವಕಾಶವಿದ್ದು ಅದನ್ನು ಸದುಪಯೋಗಿಸಕೊಳ್ಳಬೇಕು. ಹಾಗೂ ಪದವೀದರರ ಪ್ರಾರಂಭಿಕ ವೃತ್ತಿ ಜೀವನವು ಬರಿ ಹೂವಿನ ಹಾಸಿಗೆಯಾಗಿ ಇರುವುದಿಲ್ಲ.ಹೆಚ್ಚಿನ ಉನ್ನತಿಗಾಗಿ ಅನೇಕ ತ್ಯಾಗಗಳನ್ನು ಮಾಡಬೇಕಾಗುತ್ತದೆ. ಪ್ರಾಮಾಣಿಕತೆಂಯಿಂದ, ಉತ್ನಾಹದಿಂದ ದುಡಿದು ಜೀವನದಲ್ಲಿ ಮುಂದೆ ಬನ್ನಿ ಎಂದು ಹಾರೈಸಿದರು “ ಕನ್ನಡವನ್ನ ಉಳಿದೆನಗೆ ಅನ್ಯ ಜೀವನವಿಲ್ಲ, ಭಾರತದ ಸನ್ಮಾನ ಎನಗದುವೇ ವರಮಾನ” ಎಂಬುದು ಪದವೀಧರರ ಧ್ಯೇಯವಾಗಲಿ ಎಂದು ಹಿತವಚನ ನೀಡಿದರು.

ಅತಿಥಿ ಡಾ. ಜಿ.ಪಿ. ಶೆಟ್ಟಿ ಪ್ರಾಮಾಣಿಕತೆಯಿಂದ ಬಾಳಿ, ಅವಕಾಶಗಳಿಗಾಗಿ ಕಾದು ಕುಳಿತುಕೊಳ್ಳದೇ ಬಂದ ಅವಕಾಶಗಳನ್ನು ಬಳಸಿ, ಯಶಸ್ವಿಗಳಾಗಿ ಎಂದು ಆಶಿಸಿದರು, ಕಷ್ಟ ಪಟ್ಟು ದುಡಿದು ತಮ್ಮ ಕುಶಲತೆಯನ್ನು ವೃದ್ಧಿಸಿಕೊಳ್ಳುವತ್ತ ಗಮನಹರಿಸಿ ಎಂದು ಹಾರೈಸಿದರು.

ಪ್ರಾಂಶುಪಾಲರಾದ ಡಾ. ಕಾಟಯ್ಯ ಪದವೀಧರರಿಗೆ ಪ್ರಮಾಣ ವಚನ ಭೋದಿಸಿದರು ಹಾಗೂ ಪದವೀಧರರು ಇಂದಿನ ಸ್ಪರ್ಧಾಯುಗದಲ್ಲಿ ಬಾಳಲು ಹೆಚ್ಚು ಜವಬ್ದಾರಿ ಹಾಗೂ ಪ್ರಯತ್ನಶೀಲರಾಗಿ ಬಾಳಬೇಕು ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷರಾದ ಸಿದ್ಧಾರ್ಥ ಶೆಟ್ಟಿ ಹೊಸ ಪದವಿಧರರಿಗೆ ಶುಭ ಹಾರೈಸಿ ಎಲ್ಲರೂ ತಮ್ಮ ತಮ್ಮ ವೃತ್ತಿಗೆ ಗೌರವನ್ನು ತುಂಬಲೆಂದು ಆಶಿಸಿದರು.

2016-17ನೇ ವರ್ಷದಲ್ಲಿ ತೇರ್ಗಡೆಗೊಂಡ ಪದವೀಧರರಿಗೆ ಪದವಿ ಪತ್ರವನ್ನು ಪ್ರಧಾನ ಮಾಡಲಾಯಿತು. ಹೆಚ್ಚು ಅಂಕಗಳಿಸಿದ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಚಿನ್ನದ ಹಾಗೂ ಬೆಳ್ಳಿಯ ಪದಕಗಳನ್ನು ವಿತರಿಸಲಾಯಿತು. ಈ ಸಮಯದಲ್ಲಿ ವಿವಿಧ ವಿಭಾಗದ ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬ್ಬಂಧಿ ಉಪಸ್ಥಿತರಿದ್ದರು. ಪ್ರೊ. ಸತೀಶ್ ಅಂಸಾಡಿ ಅವರ ಮುಂದಾಳತ್ವದಲ್ಲಿ ಈ ಕಾರ್ಯಕ್ರಮವನ್ನು ಸಂಯೋಜಿಸಲಾಗಿತ್ತು. ಕು. ಪೂರ್ಣಿಮಾ ಸಭೆಯನ್ನು ಸ್ವಾಗತಿಸಿದರು ಹಾಗೂ ಕು. ಧನ್ಯಾಶ್ರೀ ಬಲ್ಲಾಳ್ ವಂದಾನಾರ್ಪಣೆ ಮಾಡಿದರು. ಕು.ರೋಲೆಟಾ ಹಾಗೂ ಶ್ರಿ ರಿಧಾನ ಕಾರ್ಯಕ್ರಮವನ್ನು ನಿರ್ವಹಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.


Spread the love

Exit mobile version