ಎಂ.ಫ್ರೆಂಡ್ಸ್, ಮೈ ಕಮ್ಯೂನಿಟಿ ವತಿಯಿಂದ ಫ್ಲೈ ದುಬೈ ವಿಮಾನ ಮಂಗಳೂರಿಗೆ 166 ಅತಂತ್ರ ಪ್ರಯಾಣಿಕರ ಆಗಮನ
ಮಂಗಳೂರು: ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಹಾಗೂ ಮೈ ಕಮ್ಯೂನಿಟಿ ಫೌಂಡೇಶನ್ ನೇತೃತ್ವದಲ್ಲಿ ದುಬೈಯಿಂದ ಮಂಗಳೂರಿಗೆ ಹೊರಟ ಫ್ಲೈ ದುಬೈ FZ 4617 ವಿಮಾನವು ಮಂಗಳವಾರ ಸಂಜೆ 07:20ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಿತು.
ಒಟ್ಟು 187 ಪ್ರಯಾಣಿಕರನ್ನು ಹೊತ್ತುಕೊಂಡು ಬರಬೇಕಾಗಿದ್ದ ವಿಮಾನವು ದುಬೈ ವಿಮಾನ ನಿಲ್ದಾಣದ ತಾಂತ್ರಿಕ ತೊಂದರೆಯಿಂದ 21 ಸದಸ್ಯರನ್ನು ಕೈಬಿಡಲಾಯಿತು. ಒಟ್ಟು 166 ಸದಸ್ಯರು ಆಗಮಿಸಿದರು. ಇದರಲ್ಲಿ 128 ಪುರುಷರು ಹಾಗೂ 38 ಮಹಿಳೆಯರು.
ಯುಎಇ ಸಮಯ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ದುಬೈ ವಿಮಾನ ನಿಲ್ದಾಣ ಟರ್ಮಿನಲ್ 2 ರಿಂದ ಮಂಗಳೂರಿಗೆ ಹೊರಟಿತ್ತು. ವಿಮಾನದಲ್ಲಿ ಗರ್ಭಿಣಿಯರು, ವಯಸ್ಕರು, ಆನಾರೋಗ್ಯ ಪೀಡಿತರು, ಅತಂತ್ರ ಕಾರ್ಮಿಕರು ಇದ್ದರು.
ದುಬೈಯಲ್ಲಿ ಮೈ ಕಮ್ಯೂನಿಟಿ ಫೌಂಡೇಶನ್ ಮುಖ್ಯಸ್ಥರಾದ ಅಶ್ರಫ್ ಅಬ್ಬಾಸ್, ಎಂ.ಫ್ರೆಂಡ್ಸ್ ಎನ್ನಾರೈ ಸದಸ್ಯರಾದ ಹನೀಫ್ ಪುತ್ತೂರು ಹಾಗೂ ನವಾಝ್ ಕಾನತ್ತಡ್ಕ ಬೀಳ್ಕೊಟ್ಟರು. ಮಂಗಳೂರಿನಲ್ಲಿ ಅಂತರಾಷ್ಟ್ರ ಪ್ರಯಾಣಿಕರ ನೋಡಲ್ ಅಧಿಕಾರಿ ಯತೀಶ್ ಉಳ್ಳಾಲ್, ಎಂ.ಫ್ರೆಂಡ್ಸ್ ಸ್ಥಾಪಕರಾದ ರಶೀದ್ ವಿಟ್ಲ, ಜೊತೆ ಕಾರ್ಯದರ್ಶಿ ಹನೀಫ್ ಕುದ್ದುಪದವು, ಸದಸ್ಯರಾದ ತುಫೈಲ್ ಅಹ್ಮದ್, ಮಹಮ್ಮದ್ ಟೋಪ್ಕೋ, ಆಶಿಕ್ ಕುಕ್ಕಾಜೆ, ಸೌಹಾನ್ ಎಸ್.ಕೆ., ಅಶ್ಫಾಕ್ ವಿಲಾಯತ್, ಇಂತಿಯಾಝ್ ಐ ಫ್ರೇಮ್, ಸಿರಾಜ್ ಮದಕ ಮೊದಲಾದವರು ಬರಮಾಡಿಕೊಂಡರು.