ಎನ್‍ಡಿಆರ್‍ಎಫ್‍ರವರಿಂದ ಅಣಕು ಪ್ರದರ್ಶನ
ಮಂಗಳೂರು: ಮಂಗಳೂರು ಪೊಲೀಸ್ ಪೆರೇಡ್ ಮೈದಾನದಲ್ಲಿ ಆಂಧ್ರಪ್ರದೇಶ ರಾಜ್ಯದಿಂದ ಒಟ್ಟು 35 ಜನರ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಓಆಖಈ) ಆಗಮಿಸಿದ್ದು ತಂಡದ ಟೀಮ್ ಕಮಾಂಡರ್ ರಸೂಲ್‍ರವರ ನೇತೃತ್ವದಲ್ಲಿ ಎನ್‍ಡಿಆರ್‍ಎಫ್‍ನ
ಸಬ್ ಇನ್ಸ್‍ಪೆಕ್ಟರುಗಳಾದ ಮನೋಹರ್ ಹಾಗೂ ಜಾವೇದ್ ಅವರ ನೇತೃತ್ವದಲ್ಲಿ ವಾಹನಗಳ ಅಪಘಾತ ಸಮಯದಲ್ಲಿ ರಕ್ಷಣೆ, ಪ್ರಕೃತಿ ವಿಕೋಪ, ಬಾಂಬ್ ಸಿಡಿತ, ಬೆಂಕಿ ಅಪಘಾತದ ಮತ್ತು ಬಿಲ್ಡಿಂಗ್ ಕುಸಿತದ ಸಂದರ್ಭದಲ್ಲಿ ಜನರನ್ನು ರಕ್ಷಿಸುವ ಬಗ್ಗೆ ಅಣಕು ಪ್ರದರ್ಶನವನ್ನು ಜಿಲ್ಲಾ ಗೃಹರಕ್ಷಕ ದಳದ 100 ಸದಸ್ಯರಿಗೆ ಮತ್ತು ಜಿಲ್ಲಾ ಪೊಲೀಸ್ ತರಬೇತಿ ಪಡೆಯುತ್ತಿರುವ ಸದಸ್ಯರಿಗೆ ನೀಡಿದರು.
ಈ ಸಂದರ್ಭದಲ್ಲಿ ಆಂದ್ರಪ್ರದೇಶದ ಎನ್‍ಡಿಆರ್‍ಎಫ್‍ನ ಕಮಾಂಡೆಂಟ್ ಸಾರ್ವಜನಿಕರ ರಕ್ಷಣೆಯ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷರಾದ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಮುರಲಿ ಮೋಹನ್ ಚೂಂತಾರುರವರು ಎನ್‍ಡಿಆರ್‍ಎಫ್ ಬಗ್ಗೆ ಮಾಹಿತಿ ಒದಗಿಸಿ ಎಲ್ಲಾ ಸಾರ್ವಜನಿಕರ ರಕ್ಷಣೆ ಗೃಹರಕ್ಷಕರ ಕರ್ತವ್ಯವೆಂದು ತಿಳಿಸಿದರು.
ಉಪಸಮಾದೇಷ್ಟರಾದ ರಮೇಶ್ ಸ್ವಾಗತಿಸಿದರು. ಸ್ಟಾಫ್ ಆಫೀಸರ್ ಉಷಾ, ಸಶಸ್ತ್ರ ಮೀಸಲು ಪಡೆಯ ಪೊಲೀಸ್ ನಿರೀಕ್ಷಕರಾದ ಗಣೇಶ್ ಮತ್ತು ಮಂಗಳೂರು ಘಟಕದ ಅಧಿಕಾರಿಗಳು, ಗೃಹರಕ್ಷಕರು ಉಪಸ್ಥಿತರಿದ್ದರು.