ಎನ್‍ಸಿಪಿ ಉಪಾಧ್ಯಕ್ಷರಾಗಿ ಆಗಿ ಲಕ್ಷ ್ಮಣ್ ಸಿ.ಪೂಜಾರಿ ಚಿತ್ರಾಪುರ ಪುನಾರಾಯ್ಕೆ

Spread the love

ಎನ್‍ಸಿಪಿ ಉಪಾಧ್ಯಕ್ಷರಾಗಿ ಆಗಿ ಲಕ್ಷ ್ಮಣ್ ಸಿ.ಪೂಜಾರಿ ಚಿತ್ರಾಪುರ ಪುನಾರಾಯ್ಕೆ

ಮುಂಬಯಿ: ಮಹಾನಗರದಲ್ಲಿನ ಹಿರಿಯ ರಾಜಕಾರಣಿ ಲಕ್ಷ ್ಮಣ್ ಸಿ.ಪೂಜಾರಿ ಅವರನ್ನು ರಾಷ್ಟ್ರವಾದಿ ಕಾಂಗ್ರೇಸ್ ಪಾರ್ಟಿ (ಎನ್‍ಸಿಪಿ) ಇದರ ಮುಂಬಯಿ ಪ್ರದೇಶ ಸಮಿತಿಯ ಹಿರಿಯ ಉಪಾಧ್ಯಕ್ಷರಾಗಿ ಪಕ್ಷದ ಪಾರ್ಲಿಮೆಂಟ್ ಬೋರ್ಡ್ ಪುನಾರಯ್ಕೆ ಗೊಳಿಸಿದೆ ಹಾಗೂ ಸುಮಾರು ಆರು ತಾಲೂಕುಗಳ ಅಧೀನದ ದಕ್ಷಿಣ ಮುಂಬಯಿ ಜಿಲ್ಲಾ (ಪ್ರಶಾಸನ)ದ ನಿರೀಕ್ಷಕ ಹುದ್ದೆಯನ್ನೂ ಪ್ರದಾನಿಸಲಾಗಿದೆ ಎಂದು ಎನ್‍ಸಿಪಿ ಮುಂಬಯಿ ಪ್ರದೇಶ ಸಮಿತಿ ಅಧ್ಯಕ್ಷ ಸಚಿನ್ ಅಹಿರೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಷ್ಟ್ರವಾದಿ ಕಾಂಗ್ರೇಸ್ ಪಾರ್ಟಿಯ ಸರ್ವೋಚ್ಛ ನಾಯಕ, ಮಾಜಿ ಕೇಂದ್ರ ಸಚಿವ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ನಿಕಟವರ್ತಿ ಆಗಿರುವ ಲಕ್ಷ್ಮಣ್ ಪೂಜಾರಿ ಅವರು ಎನ್‍ಸಿಪಿ ಸ್ಥಾಪನೆಯ ದಿನದಿಂದಲೇ ಪಕ್ಷದಲ್ಲಿ ಸಕ್ರೀಯರಾಗಿದ್ದು, ಪಕ್ಷದ ಪದಾಧಿಕಾರಿಗಳ ಪ್ರಥಮ ಅವಧಿಯಲ್ಲೇ ಪ್ರಧಾನ ಕಾರ್ಯದರ್ಶಿ ಆಗಿ, ನಂತರ ಸತತ ಐದು ಅವಧಿಗಳಲ್ಲಿ ಉಪಾಧ್ಯಕ್ಷರಾಗಿಯೇ ನೇಮಕ ಗೊಂಡಿರುವರು. ಸದ್ಯ ಎನ್‍ಸಿಪಿಯಲ್ಲಿ ಉನ್ನತ ಹುದ್ದೆಯನ್ನು ಹೊಂದಿದ ತುಳು ಕನ್ನಡಿಗರಲ್ಲಿ ಲಕ್ಷ ್ಮಣ್ ಪೂಜಾರಿ ಓರ್ವರು.

ದಕ್ಷಿಣ ಕನ್ನಡ ಜಿಲ್ಲೆಯ ಮಂಗ¼ರು ಮೂಲ್ಕಿ ಚಿತ್ರಾಪುರ ಮೂಲತಃ ಚೆನ್ನಪ್ಪ ಪೂಜಾರಿ ಮತ್ತು ಜಾನಕಿ ಪೂಜಾರಿ ದಂಪತಿ ಸುಪುತ್ರರಾದ ಲಕ್ಷ್ಮಣ್ ಪೂಜಾರಿ ಓರ್ವ ಸರಳ ಸಜ್ಜನಿಕೆಯ ಅನುಭವೀ ರಾಜರಣಿ ಆಗಿರುವ ಇವರು ಸದ್ದಿಲ್ಲದೆ ಜನಸೇವೆಯಲ್ಲಿ ತೊಡಗಿಸಿ ಕೊಂಡಿರುವರು. ಮೂಲತಃ ಕಾಂಗ್ರೇಸ್ ಪಕ್ಷದಲ್ಲಿದ್ದು 1997ರ ಬಿಎಂಸಿ ಚುನಾವಣೆಯಲ್ಲಿ ನಗರ ಸೇವಕ ಸ್ಥಾನಕ್ಕೆ ಅಭ್ಯಥಿರ್ü ಆಗಿದ್ದರು. ಮಾಡಾ ಸದಸ್ಯರಾಗಿ, ಪಶ್ಚಿಮ ಪ್ರಾದೇಶಿಕ ರೈಲ್ವೇ ಮಂಡಳಿ ಸದಸ್ಯರಾಗಿ, ಚಿತ್ರಾಪು ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾಗಿ, ಮೂಲ್ಕಿ ಬಿಲ್ಲವ ಸಂಘ ಮುಂಬಯಿ ಸಮಿತಿ ಉಪಾಧ್ಯಕ್ಷರಾಗಿ ಶ್ರಮಿಸಿರುವರು.


Spread the love