Home Mangalorean News Kannada News ಎನ್.ಎಸ್.ಯು.ಐ. ದೇಶ ವಿರೋಧಿ ಸಂಘಟನೆಯೆಂಬ ಎ.ಬಿ.ವಿ.ಪಿ. ಹೇಳಿಕೆಗೆ ದ.ಕ.ಜಿಲ್ಲಾ ಎನ್.ಎಸ್.ಯು.ಐ.ಆಕ್ಷೇಪ 

ಎನ್.ಎಸ್.ಯು.ಐ. ದೇಶ ವಿರೋಧಿ ಸಂಘಟನೆಯೆಂಬ ಎ.ಬಿ.ವಿ.ಪಿ. ಹೇಳಿಕೆಗೆ ದ.ಕ.ಜಿಲ್ಲಾ ಎನ್.ಎಸ್.ಯು.ಐ.ಆಕ್ಷೇಪ 

Spread the love

ಎನ್.ಎಸ್.ಯು.ಐ. ದೇಶ ವಿರೋಧಿ ಸಂಘಟನೆಯೆಂಬ ಎ.ಬಿ.ವಿ.ಪಿ. ಹೇಳಿಕೆಗೆ ದ.ಕ.ಜಿಲ್ಲಾ ಎನ್.ಎಸ್.ಯು.ಐ.ಆಕ್ಷೇಪ

ಮಂಗಳೂರು ವಿಶ್ವವಿದ್ಯಾನಿಲಯವು ನೂತನ ಶಿಕ್ಷಣ ನೀತಿಯ ಕಾರ್ಯಕ್ರಮವನ್ನು ಎ.ಬಿ.ವಿ.ಪಿ.ಸಹಯೋಗದೊಂದಿಗೆ ನಡೆಸಿ ಇತರೆ ವಿದ್ಯಾರ್ಥಿ ಸಂಘಟನೆಗಳನ್ನು ಕಡೆಗಣನೆ ಮಾಡಿರುವುದನ್ನು ವಿರೋಧಿಸಿ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿಗೆ ಜಿಲ್ಲಾ ಎನ್.ಎಸ್.ಯ.ಐ.ವತಿಯಿಂದ ಸೋಮವಾರ ಮುತ್ತಿಗೆಯನ್ನು ಹಾಕಲಾಗಿತ್ತು. ಇದನ್ನು ಖಂಡಿಸಿ ಹೇಳಿಕೆಯನ್ನು ನೀಡಿರುವ ಎ.ಪಿ.ವಿ.ಪಿ.ಮಂಗಳೂರು ವಿಭಾಗ ಪ್ರಮುಖರಾದ ಕೇಶವ ಬಂಗೇರರವರು ಎನ್.ಎಸ್.ಯು.ಐ.ಯನ್ನು ದೇಶವಿರೋಧಿ ಸಂಘಟನೆಯೆಂದು ಹೇಳಿರುವುದಕ್ಕೆ ದ.ಕ.ಜಿಲ್ಲಾ ಎನ್.ಎಸ್.ಯು.ಐ.ಸಮಿತಿಯ ಉಪಾಧ್ಯಕ್ಷರಾದ ಶೌವಾದ್ ಗೂನಡ್ಕರವರು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.

ಎ.ಬಿ.ವಿ.ಪಿ.ಯವರಿಗೆ ಕೇಂದ್ರ ಸರ್ಕಾರದ ಬಳಿ ಯುವಕರಿಗೆ ಉದ್ಯೋಗವನ್ನು ಕೇಳುವ ಧೈರ್ಯವಿಲ್ಲ, ದೇಶದಾದ್ಯಂತ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವ ತಾಕತ್ತು ಅವರಿಗಿಲ್ಲ ಅದು ಬಿಟ್ಟು ವಿದ್ಯಾರ್ಥಿಗಳ ಹಿತಕ್ಕಾಗಿ ಹೋರಾಡುವ ಎನ್.ಎಸ್.ಯು.ಐ.ಯನ್ನು ದೇಶವಿರೋಧಿ ಸಂಘಟನೆಯೆಂದು ಹೇಳುವ ಯಾವ ನೈತಿಕತೆಯು ಎ.ಬಿ.ವಿ.ಪಿ.ಗೆ ಇಲ್ಲವೆಂದು ಅವರು ಹೇಳಿದ್ದಾರೆ.

ವಿದ್ಯಾರ್ಥಿಗಳಲ್ಲಿ ಕೋಮುವಿಷ ಬೀಜವನ್ನು ಬಿತ್ತುವ ಕೆಲಸ ಎ.ಬಿ.ವಿ.ಪಿ.ಮಾಡುತ್ತಿದೆ. ಧರ್ಮದ ಹೆಸರಲ್ಲಿ ದೇಶವನ್ನು ಒಡೆಯುವರು ದೇಶವಿರೋಧಿಗಳೇ ಹೊರತು ಎಲ್ಲರನ್ನು ಸೇರಿಸಿ ಒಗ್ಗಟ್ಟಾಗಿ ದೇಶ ಕಟ್ಟುವ ನಾವಲ್ಲ ಎಂದು ಶೌವಾದ್ ಗೂನಡ್ಕರವರು ತಿಳಿಸಿದ್ದಾರೆ. ಪ್ರತಿಭಟನಾಕಾರರನ್ನು ಪುಂಡರು, ಮಾನಸಿಕ ವಿಕಲಾಂಗರು ಎಂದು ಹೇಳುವ ಎ.ಬಿ.ವಿ.ಪಿ.ನಾಯಕರ ಭಾಷಾ ಬಳಕೆಯೇ ಅವರ ಸಂಸ್ಕ್ರತಿಯನ್ನು ಬಿಂಬಿಸುತ್ತದೆ ಎಂದವರು ಹೇಳಿದ್ದಾರೆ.


Spread the love

Exit mobile version