ಎನ್.ಎಸ್.ಯು.ಐ ಮಾದಕ ದ್ರವ್ಯ ವಿರೋಧಿ ಅಭಿಯಾನ ಕಾರ್ಯಕ್ರಮ
ದ.ಕ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ 15ದಿನಗಳ ಕಾಲ ನಡೆಯುವ “ಮಾದಕ ದ್ರವ್ಯ ವಿರೋಧಿ_ ಅಭಿಯಾನ”ದ ಐದನೇ ದಿನವಾದ ಇಂದು ಪದ್ವ ಪಿ.ಯು ಕಾಲೇಜಿನಲ್ಲಿ ನಡೆಯಿತು.
ಮಾದಕ ದ್ರವ್ಯದ ದುಷ್ಪರಿಣಾಮದ ಕುರಿತು ವಿದ್ಯಾರ್ಥಿಗಳಿಗೆ ಆಹಾರ ಮತ್ತು ನಾಗರಿಕ ಸರಭರಾಜು ಸಚಿವರಾದ ಯು.ಟಿ ಖಾದರ್ ಮಾಹಿತಿ ನೀಡಿದರು ಶಾಸಕರಾದ ಜೆ.ಆರ್.ಲೋಬೊ,ಕದ್ರಿ ಸರ್ಕಲ್ ಇನ್ಸ್ಪೆಕ್ಟರ್ ಮಾರುತಿ ನಾಯಕ್ ಮಾದಕ ದ್ರವ್ಯದ ತೊಂದರೆಗಳ ಕುರಿತು ಮಾತನಾಡಿದರು.
ಕಾಲೇಜ್ ಪ್ರಿನ್ಸಿಪಾಲ್ ಗ್ಲಾಢಿಸ್ ಆಲೋಶಿಯಸ್,ಎನ್.ಎಸ್.ಯು.ಐ ಅದ್ಯಕ್ಷರಾದ ಅಬ್ದುಲ್ ಬಿನ್, ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಮಹಮದ್ ಸವಾದ್ ಸುಳ್ಯ,ರಹಮಾನ್ಔಫ್ ರಾಜ್ಯಪ್ರಧಾನ ಕಾರ್ಯದರ್ಶಿ ರೂಪೇಶ್ ರೈ,ಮಂಜುನಾಥ್,ಗ್ಲೇನ್ ಡಿಸೋಜ ಉಪಸ್ಥಿತರಿದ್ದರು.
ಎನ್.ಎಸ್.ಯು.ಐ ಜಿಲ್ಲಾ ಕಾರ್ಯದರ್ಶಿ ಅಸ್ಟೆನ್ ಸಿಕ್ವೇರಾ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು.