ಎಪ್ರಿಲ್‌ 28 ರಂದು ಪಕ್ಕಲಡ್ಕದಲ್ಲಿ ಭಗತ್ ಸಿಂಗ್ ಭವನ ಉದ್ಘಾಟನಾ ಕಾರ್ಯಕ್ರಮ

Spread the love

ಎಪ್ರಿಲ್‌ 28 ರಂದು ಪಕ್ಕಲಡ್ಕದಲ್ಲಿ ಭಗತ್ ಸಿಂಗ್ ಭವನ ಉದ್ಘಾಟನಾ ಕಾರ್ಯಕ್ರಮ

1953 ರಲ್ಲಿ ಸ್ಥಾಪನೆಗೊಂಡ ಪಕ್ಕಲಡ್ಕ ಯುವಕ ಮಂಡಲವು ಈವರೆಗೂ ಸ್ಥಳೀಯ ಸುತ್ತಮುತ್ತಲ ಪ್ರದೇಶದ ಯುವಜನರನ್ನು ಒಂದು ಸರಿಯಾದ ದಾರಿಯಲ್ಲಿ ಕೊಂಡೊಯ್ಯುವ, ಅವರ ಅಭಿರುಚಿಗೆ ತಕ್ಕಂತೆ ವೇದಿಕೆ ಕಲ್ಪಿಸುವ, ಮತ್ತವರ ನೋವು ನಲಿವುಗಳಿಗೆ ಸ್ಪಂದಿಸುವ ಹಾಗು ಜಾತ್ಯಾತೀತ ಮೌಲ್ಯಗಳನ್ನು ಪ್ರತಿಪಾದಿಸುವಂತಹ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಅಸಂದರ್ಭದಲ್ಲೇ ಸಾಕ್ಷರತೆಗೆ ಹೆಚ್ಚಿನ ಪ್ರಾಶಸ್ತ್ಯ ವನ್ನು ನೀಡಿ ರಾತ್ರಿ ಶಾಲೆಯನ್ನು ಪ್ರಾರಂಭಿಸುವ ಮೂಲಕ ಮುನ್ನಡೆದ ಯುವಕ ಮಂಡಲವು ಈವರೆಗೂ ಶಿಕ್ಷಣದ ಮಹತ್ವವನ್ನು ಸಾರುತ್ತಾ ಬಂದಿದೆ‌. ಶ್ರಮದಾನ, ಉಚಿತ ವೈದ್ಯಕೀಯ ಶಿಬಿರ, ಉಚಿತ ಕಾನೂನು ಶಿಬಿರ, ಪುಸ್ತಕ ವಿತರಣೆ, ಚಿಣ್ಣರಮೇಳ, ರಕ್ತದಾನ ಶಿಬಿರ ಮಾತ್ರವಲ್ಲ ಕೀಡಾ, ಸಾಂಸ್ಕೃತಿಕ ರಂಗದಲ್ಲೂ ಸ್ಥಳೀಯ ಪ್ರತಿಭೆಯನ್ನು ಓರೆ ಹಚ್ಚುವ, ಮತ್ತವರಿಗೆ ವೇದಿಕೆ ಕಲ್ಪಿಸುವ ಮೂಲಕ ಕೀಡಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲೂ ತನ್ನದೇ ಆದ ಹಿರಿಮೆಯನ್ನು ಸಾಧಿಸಲು ಯುವಕ ಮಂಡಲಕ್ಕೆ ಸಾದ್ಯವಾಗಿದೆ.

ಮಾತ್ರವಲ್ಲ ಸ್ಥಳೀಯ ಸಮಸ್ಯೆಗಳಿಗೆದುರಾಗಿ ಚಳುವಳಿಯನ್ನು ರೂಪಿಸುವ, ಅನ್ಯಾಯಗೊಳಗಾಗಿ ಆಸರೆಗೆ ಬಂದಿರುವ ಹೃದಯಗಳಿಗೆ ಮಿಡಿಯುವ, ಅವರ ನೋವಿಗೆ ದ್ವನಿಯಾಗುವ ಕೆಲಸದ ಮೂಲಕ ಜನಸಾಮಾನ್ಯರ ಪ್ರೀತಿ ವಿಶ್ವಾಸವನ್ನು ಗಳಿಸಲು ಸಾದ್ಯವಾಗಿದೆ. ಹೀಗೆ ಜನಪರ ಕಾರ್ಯಕ್ರಮಗಳ ಮೂಲಕ ಊರಿನ ಜನತೆಯ ಪ್ರೀತಿ ವಿಶ್ವಾಸವನ್ನು ಗಳಿಸಿದ ಪಕ್ಕಲಡ್ಕ ಯುವಕ ಮಂಡಲವು 65 ವರುಷದ ಸಂಭ್ರಮದಲ್ಲಿದೆ. ಊರಿನ ಅಭಿವೃದ್ಧಿಯಲ್ಲಿ ಯುವಜನತೆಯನ್ನು ಕ್ರೀಯಾಶೀಲವಾಗಿ ತೊಡಗಿಸಿಕೊಳ್ಳುವಿಕೆ, ಕೋಮು ಸೌಹಾರ್ಧತೆಗಾಗಿ ತ್ಯಾಗ ಬಲಿದಾನದ ಪರಂಪರೆ, ದೇಶದ ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ಉಳಿವಿಗಾಗಿ ಶಕ್ತಿಮೀರಿ ಪ್ರಯತ್ನ ವನ್ನು ಪಕ್ಕಲಡ್ಕ ಯುವಕ ಮಂಡಲವು ಮಾಡುತ್ತಾ ಬಂದಿದೆ.

ಈ ಬಾರಿ 65ನೇ ವಾರ್ಷಿಕೋತ್ಸವ ದ ಅಂಗವಾಗಿ ಎಪ್ರಿಲ್ 28, 2019 ರಂದು ಊರಿನ ಜನತೆಗಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು, ಹಾಗು ನಮ್ಮ ಕನಸಿನ ಕೂಸಾದ ಭಗತ್ ಸಿಂಗ್ ಭವನದ ಉದ್ಘಾಟನಾ ಸಮಾರಂಭವು ನಡೆಯಲಿರುವುದು. ಈ ಭಗತ್ ಸಿಂಗ್ ಭವನವನ್ನು ಸಿಪಿಐಎಂ ನ ಜಿಲ್ಲಾ ಮುಖಂಡರಾದ ಕೆ ಯಾದವ ಶೆಟ್ಟಿ ಉದ್ಘಾಟಿಸಲಿರುವರು.ಈ ವೇಳೆ ಮುಖ್ಯ ಅತಿಥಿಗಳಾಗಿ ಡಿವೈಎಫ್ಐ ರಾಜ್ಯಾದ್ಯಕ್ಷರಾದ ಮುನೀರ್ ಕಾಟಿಪಳ್ಳ, ಸ್ಥಳೀಯ ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ, ವಿದ್ಯಾದರ್ ಶೆಟ್ಟಿ, ಸುಶಾಂತ್ ಭಂಡಾರಿ, ಮನೋಜ್ ಡಿ ಮಾಣೈ, ಜೀವನ್ ಶೆಟ್ಟಿ ಕುಂದೋಡಿ, ರಾಮಚಂದ್ರ ಆಳ್ವ, ಸದಾಶಿವ ದಾಸ್, ಶ್ರೀಮತಿ ಸಜಿತಾ ಕೃಷ್ಣನ್, ವಿಜಯ ಬಜಾಲ್ ಭಾಗವಹಿಸಲಿರುವರು. ಸಭಾ ಕಾರ್ಯಕ್ರಮದ ಅದ್ಯಕ್ಷತೆಯನ್ನು ಕಟ್ಟಡ ಸಮಿತಿಯ ಗೌರವಾದ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ವಹಿಸಲಿರುವರು..ಸಭಾ ಕಾರ್ಯಕ್ರಮದ ನಂತರ ಯುವಕ ಮಂಡಲದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಕೋರ್ದಬ್ಬು ತನ್ನಿಮಾನಿಗ ತುಳು ಜನಪದ ನಾಟಕ ನಡೆಯಲಿರುವುದು ಎಂದು ಪಕ್ಕಲಡ್ಕ ಯುವಕ ಮಂಡಲದ ಕಾರ್ಯದರ್ಶಿ ನಾಗರಾಜ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love