ಎಬಿವಿಪಿ ಮಂಗಳೂರು ಮಹಾನಗರ ಅಭ್ಯಾಸ ವರ್ಗ – 2019 ಉದ್ಘಾಟನೆ
ಮಂಗಳೂರು: ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರ ನಿರ್ಮಾಣದಲ್ಲಿ ಹಾಗೂ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಮಹತ್ವವಾದದ್ದು ಅಭ್ಯಾಸ ವರ್ಗಗಳು. ಮಂಗಳೂರು ನಗರ ಅಭ್ಯಾಸ ವರ್ಗವು ದಿನಾಂಕ 28 ರ ಸಂಜೆ 5 ಗಂಟೆಯಿಂದ 29 ಸೆಪ್ಟಂಬರ್ 2019ರ ವರೆಗೆ, ಮಂಗಳೂರಿನ ಶಾರಾದ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆಯಲಿದೆ.
ಈ ಅಭ್ಯಾಸ ವರ್ಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾರಾದ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕ ಆಡಳಿತ ಸಲಹೆಗಾರರಾದ ಡಾ. ಲೀಲಾ ಉಪದ್ಯಾಯ, ವಿಭಾಗ ಪ್ರಮುಖರಾದ ಶ್ರೀ ಕೇಶವ ಬಂಗೇರಾ, ಜಿಲ್ಲಾ ಸಂಚಾಲಕರಾದ ಶ್ರೀ ಸಂದೇಶ್ ರೈ ಮಜೇಕರ್ ಮತ್ತು ನಗರ ಕಾರ್ಯದರ್ಶಿಯಾದ ಶ್ರೀ ವಿಕಾಸ್ ಕಾಟಿಪಳ್ಳ ಅವರು ಉಪಸ್ಥಿತರಿದ್ದರು.
ಈ ವರ್ಗದಲ್ಲಿ ವಿದ್ಯಾರ್ಥಿ ಪರಿಷತ್ತಿನ “ಸೈದ್ದಾಂತಿಕ ಭೂಮಿಕೆ” “ನಮ್ಮ ಕಾರ್ಯಪದ್ದತಿ” “ಕ್ಯಾಂಪಸ್ ಕಾರ್ಯ” “ಭಾಷಣ ಕಲೆ” “ಪ್ರಶಿಕ್ಷಣ” “ಪ್ರಸಕ್ತ ಭಾರತದ ಸ್ಥಿತಿಗತಿ” ವಿಷಯಗಳ ಸೇರಿದಂತೆ ಹಲವು ಸಂಘಟನಾತ್ಮಕ , ವ್ಯಕ್ತಿತ್ವ ವಿಕಸನ ಪೂರಕ ವಿಷಯಗಳ ಮಂಡನೆ, ಚರ್ಚೆ, ಸಂವಾದಗಳು ನಡೆಯಲಿವೆ. ಈ ವರ್ಗದಲ್ಲಿ ವಿದ್ಯಾರ್ಥಿ ಪರಿಷತ್ತಿನ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಲಿದ್ದಾರೆ.
ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ಪುನರ್ ನಿರ್ಮಾಣ ಎಂಬ ಉದಾತ್ತ ಚಿಂತನೆಯಲ್ಲಿ ಕಳೆದ 70 ವರ್ಷಗಳಿಂದ ಕಾಲೇಜು ಕ್ಯಾಂಪಸ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಯೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್. ವಿದ್ಯಾರ್ಥಿಗಳನ್ನು ರಾಷ್ಟ್ರ ವಾಹಿನಿಯ ಕಾರ್ಯಕ್ರಮಗಳ ಮೂಲಕ ಸಂಘಟಿಸಿ ಶೈಕ್ಷಣಿಕ ಮತ್ತು ಸಾಮಾಜಿಕ ಸಮಸ್ಯೆಗಳ ವಿರುದ್ಧ ಆಂದೋಲನಗಳ ಮೂಲಕ ಈಡೀ ವಿದ್ಯಾರ್ಥಿ ಮತ್ತು ಯುವ ಸಮೂದಾಯಕ್ಕೆ ನಾಯಕತ್ವ ನೀಡುತ್ತಿರುವದು ಎಬಿವಿಪಿ.