ಎಬಿವಿಪಿ ರಾಜ್ಯ ಅಧ್ಯಕ್ಷರಾಗಿ ಡಾ|| ಅಲ್ಲಮಪ್ರಭು ಗುಡ್ಡ ಹಾಗೂ ಕಾರ್ಯದರ್ಶಿಯಾಗಿ ರಾಜೇಶ್ ಗುರಾಣಿ

Spread the love

ಎಬಿವಿಪಿ ರಾಜ್ಯ ಅಧ್ಯಕ್ಷರಾಗಿ ಡಾ|| ಅಲ್ಲಮಪ್ರಭು ಗುಡ್ಡ ಹಾಗೂ ಕಾರ್ಯದರ್ಶಿಯಾಗಿ ರಾಜೇಶ್ ಗುರಾಣಿ 

ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯು ಹುಬ್ಬಳ್ಳಿಯಲ್ಲಿ ನಡೆಯಿತು. ಈ ಸಭೆಯಲ್ಲಿ ಅಭಾವಿಪದ 2016-17 ನೇ ಸಾಲಿನ ರಾಜ್ಯ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಆಯ್ಕೆಗಾಗಿ ಚುನಾವಣಾ ಪ್ರಕ್ರಿಯೆ ನಡೆಯಿತು. ಈ ಚುಣಾವಣೆಯಲ್ಲಿ ಕರ್ನಾಟಕ ರಾಜ್ಯ ಎಬಿವಿಪಿ ರಾಜ್ಯ ಅಧ್ಯಕ್ಷರಾಗಿ ಕಲ್ಬುರ್ಗಿಯ ಡಾ|| ಅಲ್ಲಮಪ್ರಭು ಗುಡ್ಡದ ಹಾಗೂ ರಾಜ್ಯ ಕಾರ್ಯದರ್ಶಿಯಾಗಿ ಬಾಗಲಕೋಟೆಯ ರಾಜೇಶ್ ಗುರಾಣಿ ಅವರು ಆಯ್ಕೆಯಾಗಿದ್ದಾರೆ.

abvp-new-conviner

ಡಾ|| ಅಲ್ಲಮಪ್ರಭು ಗುಡ್ಡದ ಅವರು ಮೂಲತಃ ಕಲಬುರ್ಗಿ ಜಿಲ್ಲೆಯವರು, ವಿದ್ಯಾರ್ಥಿ ದೆಸೆಯಿಂದಲೆ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು. ಕಲಬುರ್ಗಿ ನಗರದಲ್ಲಿರುವ ಹಿಂಗುಲಾಬಿಂಕ ಆಯುರ್ವೇದ ಕಾಲೇಜು ಆಸ್ಪತ್ರೆ ಮತ್ತು ಸಂಶೋದನಾ ಕೇಂದ್ರದ ಪ್ರಾಂಶುಪಾಲರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಲಬುರ್ಗಿ ನಗರ ಶಾಖೆಯ ಅಧ್ಯಕ್ಷರಾಗಿ, ಕಲಬುರ್ಗಿ ಜಿಲ್ಲಾ ಪ್ರಮುಖರಾಗಿ, ವಿಭಾಗ ಪ್ರಮುಖರಾಗಿ ಮತ್ತು ರಾಜ್ಯ ಉಪಾಧ್ಯಕ್ಷರಾಗಿ ಜವಬ್ದಾರಿಗಳನ್ನು ನಿರ್ವಹಿಸಿರುತ್ತಾರೆ ಪ್ರಸ್ತುತ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬಿಎಎಮ್‍ಎಸ್ ಶಿಕ್ಷಣದ ನಂತರ ರಸ ಶಾಸ್ತ್ರದಲ್ಲಿ ಎಮ್‍ಡಿ ಪದವಿಯನ್ನೂ ಪಡೆದಿರುತ್ತಾರೆ. 2002ರಲ್ಲಿ ಆಯುರ್ವೇದ ಗರ್ಭನಿರೋಧಕÀ ವಿಷಯದಲ್ಲಿ ಪಿ.ಎಚ್‍ಡಿಯನ್ನು ಪಡೆದಿರುತ್ತಾರೆ, ಅಲ್ಲದೇ ಈ ವಿಷಯದಲ್ಲಿ ಪಿ.ಎಚ್‍ಡಿಯನ್ನು ಪಡೆದ ದೇಶದ ಎರಡನೇ ವ್ಯಕ್ತಿ ಎಂಬ ಸಾದನೆಯನ್ನು ಮಾಡಿದ್ದಾರೆ. ಇಲ್ಲಿಯವರೆಗೂ 30ಕ್ಕೂ ಹೆಚ್ಚೂ ಪ್ರಬಂದಗಳನ್ನು ಮಂಡಿಸಿರುತ್ತಾರೆ. ಅಪ್ಪ ಆಯರ್ವೇದಿಕ್ ಆಸ್ವತ್ರೆಯ ಮುಖ್ಯ ಚಿಕಿತ್ಸಕರು, ವಿಕಾಸ ಅಕಾಡೆಮಿಯ ವಿಶ್ವಸ್ಥರು ಅಲ್ಲದೇ ಭಾರತೀಯ ವಿದ್ಯಾ ಮಂದಿರ, ಕಲುಬುರ್ಗಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಇಲ್ಲಿಯವರೆಗೂ 30ಕ್ಕೂ ಹೆಚ್ಚೂ ಪ್ರಬಂದಗಳನ್ನು ಮಂಡಿಸಿರುತ್ತಾರೆ.

ರಾಜೇಶ್ ಗುರಾಣಿ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಬೀಳಗಿ ಗ್ರಾಮದವರು, ವಿದ್ಯಾರ್ಥಿ ಪರಿಷತ್ತಿನ ಬಾಗಲಕೋಟೆ ಜಿಲ್ಲೆಯ ಜಿಲ್ಲಾ ಸಂಚಾಲಕರಾಗಿ, ವಿಜಯಪುರ ವಿಭಾಗದ ವಿಭಾಗ ಸಂಚಾಲಕರಾಗಿ ಕಳೆದ ವರ್ಷದಲ್ಲಿ ರಾಜ್ಯ ಕಾರ್ಯದರ್ಶಿಯಾಗಿ ಕಾರ್ಯವನ್ನು ನಿರ್ವಹಿಸಿದ್ದು 2016-17ನೇ ಸಾಲಿನ ರಾಜ್ಯ ಕಾರ್ಯದರ್ಶಿಯಾಗಿ ಮರು ಆಯ್ಕೆಯಾಗಿದ್ದಾರೆ. ಇವರು ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ವಿಷಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ.
ಎಬಿವಿಪಿ ಕರ್ನಾಟಕ ರಾಜ್ಯದ ನೂತನ ಅಧ್ಯಕ್ಷರಾಗಿ ಕಲ್ಬುರ್ಗಿಯ ಡಾ|| ಅಲ್ಲಮಪ್ರಭು ಗುಡ್ಡದ ಹಾಗೂ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಬಾಗಲಕೋಟೆಯ ಶ್ರೀ ರಾಜೇಶ್ ಗುರಾಣಿ ಅವರಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಅಭಿನಂದನೆ ಸಲ್ಲಿಸುತ್ತದೆ.


Spread the love