Home Mangalorean News Kannada News ಎಮಿರೇಟ್ಸ್ ಇಂಡಿಯಾ ಫ್ರೆಟರ್ನಿಟಿ ಫಾರಂ ಕರ್ನಾಟಕ ಯು ಏ ಇ ವತಿಯಿಂದ ವಾರ್ಷಿಕ ಕ್ರೀಡಾ ಕೂಟ

ಎಮಿರೇಟ್ಸ್ ಇಂಡಿಯಾ ಫ್ರೆಟರ್ನಿಟಿ ಫಾರಂ ಕರ್ನಾಟಕ ಯು ಏ ಇ ವತಿಯಿಂದ ವಾರ್ಷಿಕ ಕ್ರೀಡಾ ಕೂಟ

Spread the love

ಅಲ್ ಐನ್ : ಎಮಿರೇಟ್ಸ್ ಇಂಡಿಯಾ ಫ್ರೆಟರ್ನಿಟಿ ಫಾರಂ ಕರ್ನಾಟಕ ಯು ಏ ಇ ವತಿಯಿಂದ ವಾರ್ಷಿಕ ಕ್ರೀಡಾ ಕೂಟ ಪ್ರಯುಕ್ತ ಅಲ್ ಐನ್ ನ, ಯು ಏ ಇ ಯುನಿವರ್ಸಿಟಿ ಕ್ಯಾಂಪಸ್ ಮೈದಾನದಲ್ಲಿ ವಾರ್ಷಿಕ ಕ್ರೀಡಾಕೂಟವು ಜನವರಿ 1 ರಂದು ಜರುಗಿತು. ಕ್ರೀಡಾಕೂಟವನ್ನು ಜನಾಬ್ ಜಾವೇದ್ ಸುರತ್ಕಲ್  ಉದ್ಘಾಟಿಸಿದರು, ಕ್ರೀಡೆಯು ಶಾಂತಿ, ಸೌಹಾರ್ದತೆ ಮತ್ತು ಮನಸ್ಸಿನ ನೆಮ್ಮದಿಯನ್ನು ವೃದ್ಧಿಸುತ್ತದೆ ಮತ್ತು ತಮ್ಮ ತಮ್ಮಲಿರುವ ಸೂಕ್ತ ಪ್ರತಿಭೆಯನ್ನು ತೋರ್ಪಡಿಸಲು ಒಂದು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರಲ್ಲದೆ ಸಾಮಾಜಿಕ ಸಹಬಾಳ್ವೆ ಮತ್ತು ಐಕ್ಯತೆಗೆ ಕ್ರೀಡೆಯು ಸಹಾಯವಾಗಲಿ ಎಂದು ಹಾರೈಸಿದರು. ಜನಾಬ್‌‌‌ ಶಫಿ ಮುಕ್ಕರವರು ಕ್ರೀಡಾಳುಗಳಿಗೆ ಕ್ರೀಡೆಯ ಪ್ರತಿಜ್ಞಾ ವಿಧಿ ಭೋದಿಸಿದರು.

        ಕ್ರೀಡಾಕೂಟದಲ್ಲಿ ದೇರ ದುಬೈ,ಬರ್ದುಬೈ, ಶಾರ್ಜಾ ಮತ್ತು ಅಬುಧಾಬಿ ತಂಡಗಳು ಭಾಗವಹಿಸಿದವು.ಕ್ರೀಡಾಕೂಟದಲ್ಲಿ ವಿವಿದ ತರದ ಕ್ರೀಡೆಗಳಾದ  ಓಟ ಸ್ಪರ್ಧೆ,ಉದ್ದ ಜಿಗಿತ, ಕಬಡ್ಡಿ,ವಾಲಿಬಾಲ್,ಹಗ್ಗ ಜಗ್ಗಾಟ ಹಾಗು ಫುಟ್ ಬಾಲ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಫುಟ್ಬಾಲ್ ಪಂದ್ಯಾಟದಲ್ಲಿ ಶಾರ್ಜಾ ಪ್ರಥಮ ಸ್ಥಾನ ಪಡೆದುಕೊಂಡರೆ ಹಗ್ಗ ಜಗ್ಗಾಟದಲ್ಲಿ ದೇರ ದುಬೈ ಪ್ರಥಮ ಸ್ಥಾನ ಗೆದ್ದುಕೊಂಡಿತು. ಕಬಡ್ಡಿಯಲ್ಲಿ ಅಬುಧಾಬಿ ಪರಾಕ್ರಮ ಮೆರೆದರೆ 100ಮೀ,200ಮೀ,4×100ಮೀ ರಿಲೇ  ಹಾಗು ವಾಲಿಬಾಲ್ ಪಂದ್ಯಗಳಲ್ಲಿ  ಬರ್ದುಬೈ ತಂಡ ಪ್ರಥಮ ಸ್ಥಾನ ಗಿಟ್ಟಿಸಿ ಕೊಳ್ಳುವುದರ ಮೂಲಕ ಸತತ ಮೂರನೆಯ ಬಾರಿಗೆ  ಕೂಟದ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು. ಮಕ್ಕಳಿಗೆ ಹಾಗು ಮಹಿಳೆಯರಿಗೆ ಪ್ರತ್ಯೇೕ ಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಉದ್ಯಮಿ ಜನಾಬ್ ನಾಸಿರ್ ಕೆ. ಕೆ,  ಎಮಿರೇಟ್ಸ್ ಇಂಡಿಯಾ ಫ್ರೆಟರ್ನಿಟಿ ಫಾರಂ ಇದರ ಕಾರ್ಯಕಾರಿ ಸಮಿತಿ ಸದಸ್ಯರಾದ ಜನಾಬ್ ರಶೀದ್ ಬಿಜೈ, ಸರ್ಫರಾಝ್ ಕಾಪು, ಫಿರೋಝ್ ಕಾರ್ನಾಡ್ ಮೊದಲಾದವರು ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಜೇತ ತಂಡಗಳಿಗೆ ಪ್ರಶಸ್ತಿ ಫಲಕಗಳನ್ನು ವಿತರಿಸಲಾಯಿತು.
ಕ್ರೀಡಾಪಟುಗಳು ಶಿಸ್ತಿನಿಂದ ಮತ್ತು ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಭಾಗವಹಿಸುವುದರ ಮೂಲಕ ಕ್ರೀಡಾ ಕೂಟದ ಯಶಸ್ಸಿಗೆ ಕಾರಣರಾದರು.ಜನಾಬ್ ಇರ್ಫಾನ್ ಎರ್ಮಾಲ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.


Spread the love

Exit mobile version