Home Mangalorean News Kannada News ಎರ್ಮಾಳು ಬಡಾದಲ್ಲಿ ತೀವ್ರಗೊಂಡ ಕಡಲ್ಕೊರೆತ

ಎರ್ಮಾಳು ಬಡಾದಲ್ಲಿ ತೀವ್ರಗೊಂಡ ಕಡಲ್ಕೊರೆತ

Spread the love

ಎರ್ಮಾಳು ಬಡಾದಲ್ಲಿ ತೀವ್ರಗೊಂಡ ಕಡಲ್ಕೊರೆತ

ಕಾಪು:ಉಚ್ಚಿಲ ಬಡಾಗ್ರಾಮ ಪಂಚಾಯತ್ ವ್ಯಾಪ್ತಿಯ ಎರ್ಮಾಳು ಬಡಾದಲ್ಲಿ ತೀವ್ರಗೊಂಡಿದ್ದ ಕಡಲ್ಕೊರೆತದ ಪ್ರದೇಶಕ್ಕೆ ಕಾಪು ತಹಶಿಲ್ದಾರ್ ಮಹಮ್ಮದ್ ಇಸಾಕ್ ಶುಕ್ರವಾರ ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ ನಾಲ್ಕಯದು ದಿನಗಳಿಂದ ಈ ಭಾಗದಲ್ಲಿ ಕಡಲ್ಕೊರೆತವು ತೀವ್ರಗೊಂಡಿದ್ದು ಸುರಕ್ಷತೆಗಾಗಿ ಹಾಕಲಾಗಿದ್ದ ಬೃಹತ್ ಗಾತ್ರದ ಕಲ್ಲುಗಳೂ ಕಡಲ ತೆಕ್ಕೆಗೆ ಸೆಳೆದುಕೊಂಡಿದ್ದವು. ಅದರೊಂದಿಗೆ ಈ ಭಾಗದಲ್ಲಿನ ಹಲವು ತೆಂಗಿನ ಮರಗಳು ಕಡಲ ಪಾಲಾಗಿತ್ತು.

ಈ ಸಂದರ್ಭ ಕಾಪು ತಹಶಿಲ್ದಾರ್ ಮಹಮ್ಮದ್ ಇಸಾಕ್ ಮಾತನಾಡಿ, ಈ ಭಾಗದ ಕಡಲಿನ ಕೊರೆತ, ಜನಪ್ರತಿನಿಧಿಗಳಿಂದ, ಸ್ಥಳೀಯರಿಂದ ಸಮಸ್ಯೆಗಳನ್ನು ಆಲಿಸಿ ಪರಿಶೀಲಿಸಲಾಗಿದೆ. ಕಳೆದ ಒಂದು ವಾರಗಳಿಂದ ಕಡಲ್ಕೊರೆತ ಉಂಟಾಗಿದೆ. ಹಲವಾರು ತೆಂಗಿನ ಮರಗಳು ಕಡಲ್ಕೊರೆತಕ್ಕೆ ಸಮುದ್ರ ಸೇರಿದೆ. ದೈವದ ಗುಡಿಯೊಂದು ಸಮುದ್ರ ಪಾಲಾಗಲಿದ್ದುದರಿಂದ ಆ ದೈವದ ಕಲ್ಲುಗಳನ್ನು ಸ್ಥಳಾಂತರಿಸಲಾಗಿದೆ.

ಈಗಾಗಲೇ ಶಾಶ್ವತ ತಡೆಗೋಡೆ ನಿರ್ಮಾಣ ಕ್ಕಾಗಿ 36 ಕೋಟಿ ರುಪಾಯಿ ಮಂಜೂರಾತಿ ಆಗಿದೆ ಎಂದು ಅಭ್ಯಂತರರು ದೂರವಾಣಿ ಮೂಲಕ ತಿಳಿಸಿದ್ದಾರೆ. ಮಳೆಗಾಲ ಮುಗಿದ ತಕ್ಷಣ ಶಾಶ್ವತ ತಡೆಗೋಡೆ ಕಾಮಗಾರಿ ಕೆಲಸ ಪ್ರಾರಂಭ ಆಗಲಿದೆ. ಈಗಾಗಲೇ ನಾನು ಉಡುಪಿ ಜಿಲ್ಲಾಧಿಕಾರಿಯವರಿಗೆ ಸಮರ್ಪಕ ಮಾಹಿತಿ ನೀಡಿದ್ದೇವೆ. ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆಯನ್ನು ನಡೆಸಿದ್ದಾರೆ ಎಂದೂ ತಹಶಿಲ್ದಾರ್ ಪ್ರತಿಕ್ರಯಿಸಿದರು.

ಸ್ಥಳೀಯರಾದ ಶಿವಕುಮಾರ್ ಎಂಬವರು ಮಾತನಾಡಿ, ಕಳೆದ ಹಲವಾರು ದಿನಗಳಿಂದ ಈ ಪರಿಸರದಲ್ಲಿ ಕಡಲ್‍ಕೊರೆತ ಉಂಟಾಗಿದೆ. ಹಲವಾರು ತೆಂಗಿನ ಮರಗಳು ಸಮುದ್ರ ಪಾಲಾಗಿದೆ. ಜಿಲ್ಲಾಧಿಕಾರಿಯವರು ಸ್ಥಳಕ್ಕೆ ಭೇಟಿ ತುರ್ತು ಕ್ರಮಕೈಗೊಳ್ಳುವಂತೆ ಆಶ್ವಾಸನೆ ನೀಡಿದ್ದಾರೆ ಎಂದರು.

ಈ ಸಂದರ್ಬ ತಹಶಿಲ್ದಾರ್ ಅವರೊಂದಿಗೆ ಆರ್ ಐ ರವಿಶಂಕರ್, ಗ್ರಾಮ ಕರಣಿಕ ಜಗಧೀಶ್ ಉಪಸ್ತಿತರಿದ್ದರು.


Spread the love

Exit mobile version