Home Mangalorean News Kannada News ಎಲ್ಲರೂ ಮತದಾನ ಮಾಡುವಂತಾದಾಗ ಮಾತ್ರ ಜನಪ್ರಿಯ ಸರಕಾರ ರಚನೆ ಸಾಧ್ಯ : ಗಾಯತ್ರಿ ಎಸ್ ನಾಯಕ್

ಎಲ್ಲರೂ ಮತದಾನ ಮಾಡುವಂತಾದಾಗ ಮಾತ್ರ ಜನಪ್ರಿಯ ಸರಕಾರ ರಚನೆ ಸಾಧ್ಯ : ಗಾಯತ್ರಿ ಎಸ್ ನಾಯಕ್

Spread the love

ಎಲ್ಲರೂ ಮತದಾನ ಮಾಡುವಂತಾದಾಗ ಮಾತ್ರ ಜನಪ್ರಿಯ ಸರಕಾರ ರಚನೆ ಸಾಧ್ಯ : ಗಾಯತ್ರಿ ಎಸ್ ನಾಯಕ್ 

ಮಂಗಳೂರು :ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಮತದಾನದ ಅರಿವು ಕಾರ್ಯಕ್ರಮವನ್ನು ಕನ್ನಡ/ಇಂಗ್ಲೀಷ್ ಪ್ರಬಂಧ ಮತ್ತು ರಸಪ್ರಶ್ನೆ ಕಾರ್ಯಕ್ರಮದ ಮುಖಾಂತರ ಡಾ.ಪಿ.ದಯಾನಂದ ಪೈ-ಪಿ.ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿ ಇಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಕಾಲೇಜು ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 10 ರಂದು ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಗಾಯತ್ರಿ ಎಸ್.ನಾಯಕ್, ಪ್ರಜಾಪ್ರಭತ್ವದಲ್ಲಿ ಮತದಾನದ ಮಹತ್ವ ಹಾಗೂ ಜವಾಬ್ದಾರಿಯನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಭಾರತವು ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾಗಿದ್ದು ದೇಶದ ಪ್ರತಿಯೊಬ್ಬ ಪ್ರಜೆಯು ಮತದಾನ ಮಾಡುವಂತಾಗಿ ನಿಜವಾದ ಅರ್ಥದಲ್ಲಿ ಜನಪ್ರಿಯ ಸರಕಾರವನ್ನು ತರುವಲ್ಲಿ ಯುವಕರು ಕೈ ಜೋಡಿಸಲು ಕರೆ ನೀಡಿದರು. ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿಯ ವಿಶೇಷಾಧಿಕಾರಿ ಡಾ. ಶ್ರೀಧರ್ ಮಣಿಯಾಣಿ, ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ, ಭಾರತದ ಪ್ರತಿಯೊಬ್ಬ ಪ್ರಜೆಯು ಮತದಾನ ಮಾಡುವ ಮೂಲಕ ತನ್ನ ನೈತಿಕ ಪ್ರಜ್ಞೆಯನ್ನು ಮೆರೆಯಬೇಕೆಂದು ಕಾರ್ಯಕ್ರಮದಲ್ಲಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ.ರಾಜಶೇಖರ್ ಹೆಬ್ಬಾರ್ ಸಿ. ಇವರು ಮಾತನಾಡಿ ಮತದಾನದಂತ ದೊಡ್ಡ ದಾನ ಬೇರೇನಿಲ್ಲ. ಏಕೆಂದರೆ ಅದು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹೀಗಾಗಿ ಯುವಕರು ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಿ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುವಂತೆ ಕರೆ ನೀಡಿದರು. ವೇದಿಕೆಯಲ್ಲಿ ಸ್ಪರ್ಧೆಗಳ ಸಂಚಾಲಕರಾದ ಡಾ.ನಾಗಪ್ಪ ಗೌಡ ಕೆ.ಉಪಸ್ಥಿತರಿದ್ದು ಸ್ಪರ್ಧೆಗಳನ್ನು ಯಶಸ್ವಿಯಾಗಿ ನೇರವೇರಿಸಿ ಕೊಟ್ಟರು. ಕಾರ್ಯಕ್ರಮದ ಅಂಗವಾಗಿ ದ.ಕ ಜಿಲ್ಲಾ ಮಟ್ಟದ ಪದವಿ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಲಾಯಿತು. ಒಟ್ಟು ವಿವಿಧ ಕಾಲೇಜುಗಳಿಂದ 110ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಮೊನಿಷಾ ನಿರೂಪಿಸಿ, ವಿದ್ಯಾರ್ಥಿನಿ ಭವಿಷ್ಯ ಸ್ವಾಗತ ಮಾಡಿ, ಸುಲಾಫತ್ ನಫೀಲಾ ವಂದನಾರ್ಪಣೆಗೈದರು.


Spread the love

Exit mobile version