ಎಲ್ಲರೊಂದಿಗೂ ಪ್ರೀತಿಸಿ ಸಹಬಾಳ್ವೆ ನಡೆಸಿ – ನಿಯೋಜಿತ ಬಿಷಪ್ ಪೀಟರ್ ಪೌಲ್ ಸಲ್ಡಾನ
ಮಂಗಳೂರು: ಎಲ್ಲರೂ ದೇವರ ಮಕ್ಕಳು. ಜಾತಿ ಮತ ಧರ್ಮ ಬೇಧವಿಲ್ಲದೇ ಎಲ್ಲರೊಡನೆ ಬೆರೆತು ಸಹ ಬಾಳ್ವೆ ನಡೆಸಬೇಕೆಂದು, ಮಂಗಳೂರು ಧರ್ಮ ಪ್ರಾಂತ್ಯದ ಪಾಲನ ಪರಿಷತ್ ಸಭೆಯನ್ನು ಉದ್ದೇಶಿಸಿ ನಿಯೋಜಿತ ಬಿಷಪ್ ಅತೀ ವಂದನಿಯ ಪೀಟರ್ ಪೌಲ ಸಲ್ಡಾನರವರು ಸೂಚಿಸಿದರು.
ಮಂಗಳೂರು ಧರ್ಮ ಪ್ರಾಂತ್ಯದ ಪಾಲನ ಪರಿಷತ್ ಸಭೆಯು ದ.ಕ ಜಿಲ್ಲೆ ಹಾಗೂ ಕಾಸರಗೋಡು ತಾಲೂಕು ಒಳಗೊಂಡತಹ ಸುಮಾರು 3 ಲಕ್ಷದಷ್ಟು ಇರುವ ಕಥೋಲಿಕ್ ಸದಸ್ಯರ, ಧರ್ಮಕೇಂದ್ರಗಳ ಹಾಗೂ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಮುಖಂಡರ ಸಭೆಯಾಗಿದ್ದು, ತಮ್ಮ ಚೊಚ್ಚಲ ಭಾಷಣದಲ್ಲಿ ಎಲ್ಲರನ್ನು ಒಗ್ಗೂಡಿಸುವುದು ದೇವರು ಮೆಚ್ಚುವಂತಹ ಕೆಲಸ. ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದು ನಮ್ಮ ಕೆಲಸ ಆದರೆ ಯಶಸ್ಸು ಕೊಡುವುದು ದೇವರ ಕ್ರಪೆ. ಎಲ್ಲರಿಗೂ ಪ್ರೀತಿ ತೋರಿಸುವುದು ಮಾನವ ಧರ್ಮ. ಆದುದರಿಂದ ಸಮಾಜದಲ್ಲಿ ಎಲ್ಲಾ ಸಮೂದಾಯದವರು ಒಗ್ಗೂಡಿ ಬಾಳುವಂತೆ, ಕ್ರೃಸ್ತ ಮುಖಂಡರು ಹಾಗೂ ಪ್ರತಿನಿಧಿಗಳು, ಅವಿರತ ಶ್ರಮಿಸಬೇಕೆಂದು ಕರೆಕೊಟ್ಟರು.
ಪ್ರಸ್ತುತ ಧರ್ಮದಕ್ಷರಾದ ಅತೀ ವಂದನೀಯ ಅಲೋಶಿಯಸ್ ಪೌಲ್ ಡಿಸೋಜರವರ ಸಹೋದರ ಮೈಕಲ್ ಡಿಸೋಜ ನಿನ್ನೆಯ ದಿನ ದೈವಧೀನರಾಗಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ನಿಯೋಜಿತ ಬಿಷಪ್‍ರವರು ಪ್ರಾಥನೆಯನ್ನು ಸಲ್ಲಿಸಿದರು.
ಶಿವಮೊಗ್ಗ ಧರ್ಮ ಪ್ರಾಂತ್ಯದ ಬಿಷಪ್ ಅತಿ ವಂದನಿಯಾ ಪ್ರಾನ್ಸಿಸ್ ಸರಾವೋ ಮಾತನಾಡಿ, ನಾವು ಜೀವನದಲ್ಲಿ ಸೌಹಾರ್ದಯುತಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಮತ್ತು ಈ ನಿಟ್ಟಿನಲ್ಲಿ ಸೌಹಾರ್ದತೆಗೆ ಪ್ರೋತ್ಸಾಹ ನೀಡುವ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಭಾಗವಹಿಸಬೇಕು ಹಾಗೂ ಇತರ ಧರ್ಮದವರ ಎಲ್ಲಾ ಕಷ್ಟ ಸುಖಗಳಲ್ಲಿ ಭಾಗಿಯಾಗಿ ನಮ್ಮ ಪ್ರೀತಿಯನ್ನು ಎಲ್ಲಾ ವರ್ಗದ ಜನರಿಗೂ ತೋರಿಸಬೇಕೆಂದು ತಿಳಿಸಿದರು.
ಧರ್ಮ ಪ್ರಾಂತ್ಯದ ಶ್ರೇಷ್ಠ ಗುರುಗಳಾಗಿದ್ದ ಅತೀ ವಂದನೀಯ ಡೆನ್ನಿಸ್ ಮೊರಸ್ ಪ್ರಭುರವರು ನಿಯೋಜಿತ ಬಿಷಪ್‍ರವರನ್ನು ಸಭೆಗೆ ಸ್ವಾಗತಿಸಿದರು, ವಂದನೀಯ ಜೋಕಿಂ ಫೆರ್ನಾಂಡಿಸ್‍ರವರು ಸಭೆಯ ಸಂಯೋಜಕರಾಗಿದ್ದರು.
ರ್ಮ ಪ್ರಾಂತ್ಯದ ಕಾರ್ಯದಶಿ ಎಂ.ಪಿ. ನೊರೊನ್ಹಾರವರು ನಿಯೋಜಿತ ಧರ್ಮಧಕ್ಷರ ಪ್ರತಿಸ್ಥಾಪನೆ ಕಾರ್ಯಕ್ರಮವು ಸಪ್ಟೆಂಬರ್ 15ನೇ ತಾರೀಕು ಶನಿವಾರ ಬೆಳಗ್ಗೆ 9.30 ಗಂಟೆಗೆ ರೊಜಾರಿಯೋ ಕೆಥಾಡ್ರಲ್ ಚರ್ಚಿನಲ್ಲಿ ನಡೆಯಲಿದೆ ತದನಂತರ ಸಭಾ ಕಾರ್ಯಕ್ರಮ ನಡೆಲಿರುವುದು ಎಂಬ ಮಾಹಿತಿಯನ್ನು ಸಭೆಗೆ ನೀಡಿದರು ಹಾಗೂ ಎಲ್ಲರೂ ಭಾಗವಹಿಸ ಬೇಕಾಗಿ ನಿವೇದಿಸಿದರು.