Home Mangalorean News Kannada News ಎಲ್ಲಾ ಕ್ಷೇತ್ರಗಳಲ್ಲೂ ಕಂಗೊಳಿಸುವ ಬಂಟ ಸಮುದಾಯ: ಪ್ರಕಾಶ್ ಶೆಟ್ಟಿ

ಎಲ್ಲಾ ಕ್ಷೇತ್ರಗಳಲ್ಲೂ ಕಂಗೊಳಿಸುವ ಬಂಟ ಸಮುದಾಯ: ಪ್ರಕಾಶ್ ಶೆಟ್ಟಿ

Spread the love

ಎಲ್ಲಾ ಕ್ಷೇತ್ರಗಳಲ್ಲೂ ಕಂಗೊಳಿಸುವ ಬಂಟ ಸಮುದಾಯ: ಪ್ರಕಾಶ್ ಶೆಟ್ಟಿ

ಉಡುಪಿ: ಬಂಟರು ಹಲವು ಸಾಧನೆಗಳನ್ನು ಮಾಡಿ ಜಾಗತಿಕವಾಗಿ ಗುರುತಿಸಲ್ಪಟ್ಟರೂ ಕೂಡ ಜನ್ಮಭೂಮಿಯನ್ನು ಮರೆಯದೆ ಕೊಡುಗೆ ಕೊಟ್ಟಿದ್ದು ಸಾಮಾಜಿಕ ಕ್ಷೇತ್ರ ಸೇರಿದಂತೆ ದೇಶದ ಎಲ್ಲ ಕ್ಷೇತ್ರಗಳಲ್ಲೂ ಬಂಟ ಸಮುದಾಯದವರು ಕಂಗೊಳಿಸುತ್ತಿದ್ದಾರೆ ಎಂದು ಎಮ್ ಜಿ ಆರ್ ಗ್ರೂಪ್ ಅಧ್ಯಕ್ಷ ಕೆ ಪ್ರಕಾಶ್ ಶೆಟ್ಟಿ ಹೇಳಿದರು.


ಅವರು ಭಾನುವಾರ ಬಂಟರ ಸಂಘ ಪೆರ್ಡೂರು ಮಂಡಲದಿಂದ ನಿರ್ಮಾಣಗೊಂಡ ಶ್ರೀಮತಿ ಸರ್ವಾಣಿ ಪಳ್ಳಿ ಶ್ರೀನಿವಾಸ ಹೆಗ್ಡೆ ಬಂಟರ ಸಮುದಾಯ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗ್ಡೆ ಮಾತನಾಡಿ ರಾಜ್ಯದಲ್ಲಿ ಬಂಟರ ಸಂಖ್ಯೆಯು ಕಡಿಮೆಯಾಗುತ್ತಿದ್ದು ಉದ್ಯೋಗಕ್ಕಾಗಿ ವಿದೇಶಗಳಿಗೆ ಸಾಗುತ್ತಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಉದ್ದಿಮೆಗಳನ್ನು ಕಟ್ಟಿ ಮುಂದಿನ ಪೀಳಿಗೆಗೆ ಉದ್ಯೋಗವಕಾಶಗಳನ್ನು ಕಲ್ಪಿಸಿ ಎಂದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ ಶ್ರೀಮತಿ ಸರ್ವಾಣಿ ಪಳ್ಳಿ ಶ್ರೀನಿವಾಸ ಹೆಗ್ಡೆಯ ಮಾರ್ಗದರ್ಶನ ನನ್ನ ಬದುಕಿಗೆ ಅಪಾರವಾಗಿದೆ. ಸಂಘದ ಅಧ್ಯಕ್ಷ ಶಾಂತಾರಾಂ ಸೂಡ ಅವರ ನಾಯಕತ್ವ ಶ್ಲಾಘನಾರ್ಹ ಎಂದರು.

ಸಭಾಭವನವನ್ನು ಉದ್ಘಾಟಿಸಿದ ಮಣಿಪಾಲ ಮಾಹೆಯ ಸಹಕುಲಾಧಿಪತಿ ಡಾ| ಎಚ್. ಎಸ್. ಬಲ್ಲಾಳ್ ಮಾತನಾಡಿ ಈ ಭವನ ಕೇವಲ ಬಂಟ ಸಮಾಜಕ್ಕೆ ಮಾತ್ರ ಸೀಮಿತವಾಗಿರದೆ ಎಲ್ಲ ಸಮುದಾಯದವರಿಗೂ ಅವಕಾಶ ನೀಡಿರುವುದು ಶ್ಲಾಘನೀಯ ಎಂದರು.

ಪೆರ್ಡೂರು ಬಂಟರ ಸಂಘದ ಅಧ್ಯಕ್ಷ ಕೆ.ಶಾಂತರಾಮ ಸೂಡ ಮಾತನಾಡಿ ಮಂಡಲದ ಸುಮಾರು 650ಕ್ಕೂ ಮಿಕ್ಕಿ ಬಂಟ ಸಮಾಜ ಬಾಂಧವರು ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಿರುವುದರಿಂದ ಬಂಟ ಸಮಾಜದ ಕಟ್ಟಡ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಸಾಧ್ಯವಾಗಿದೆ ಎಂದರು.

ಶ್ರೀಮತಿ ಪ್ರಪುಲ್ಲ ಬೇಳಂಜೆ ಸಂಜೀವ ಹೆಗ್ಡೆ ಡೈನಿಂಗ್ ಹಾಲ್ ಅನ್ನು ಬಂಟರ ಮಾತೃಸಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಉದ್ಘಾಟಿಸಿದರು. ಸಭಾ ಕಾರ್ಯಕ್ರಮವನ್ನು ಪಳ್ಳಿ ಪೆಜಕೊಡಂಗೆ ಲೀಲಾವತಿ ಎಸ್. ಹೆಗ್ಡೆ ಉದ್ಘಾಟಿಸಿದರು. ಶ್ರೀಮತಿ ಅಶಾ ಪ್ರಕಾಶ್ ಶೆಟ್ಟಿ ಸಹಕಾರಿ ಭವನವನ್ನು ಉದ್ಯಮಿ ಸುಧಾಕರ ಶೆಟ್ಟಿ ಉದ್ಘಾಟಿಸಿದರು. ಶ್ರೀಮತಿ ಲೀಲಾವತಿ ಕುಕ್ಕೂಂಜಾರು ಸುಧಾಕರ ಶೆಟ್ಟಿ ಸಭಾವೇದಿಕೆಯನ್ನು ಶೇಡಿಕೊಡ್ಲು ವಿಠuಲ ಶೆಟ್ಟಿ ಉದ್ಘಾಟಿಸಿದರು. ಅದಾನಿ ಗ್ರೂಪ್ನ ಅಧ್ಯಕ್ಷ ಕಿಶೋರ್ ಆಳ್ವ ಅವರು ಪೆರ್ಡೂರಿನ ಬಂಟರು ಸ್ಮರಣಸಂಚಿಕೆ ಬಿಡುಗಡೆಗೊಳಿಸಿದರು.

ಮುಂಬಯಿ ವಿಲೇಪಾರ್ಲೆಯ ರಾಮಕೃಷ್ಣ ಗ್ರೂಪ್ ಆಫ್ ಹೊಟೇಲ್ನ ಚಂದ್ರಶೇಖರ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉದ್ಯಮಿ ಡಾ| ಕೈಲ್ಕೆರೆ ಭಾಸ್ಕರ ಶೆಟ್ಟಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಗಣ್ಯರಾದ ಉಪೇಂದ್ರ ಶೆಟ್ಟಿ, ಶಿವಪ್ರಸಾದ್ ಹೆಗ್ಡೆ, ದಿನೇಶ್ ಹೆಗ್ಡೆ, ಕೆ. ರಾಜರಾಮ ಹೆಗ್ಡೆ, ಉದಯಕೃಷ್ಣ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಸಂಚಾಲಕಿ ನಮಿತಾ ಉದಯಕುಮಾರ್ ಶೆಟ್ಟಿ, ಡಾ| ರಮಾನಂದ ಸೂಡ, ಪ್ರಮೋದ್ ರೈ ಪಳಜೆ, ಮಹೇಶ್ ಶೆಟ್ಟಿ ಪೈಬೆಟ್ಟು, ಸುಧಾಕರ ಶೆಟ್ಟಿ, ಸುರೇಶ್ ಹೆಗ್ಡೆ, ಪ್ರಕಾಶ್ ಶೆಟ್ಟಿ, ದಿನೇಶ್ಚಂದ್ರ ಶೆಟ್ಟಿ, ರಾಜ್ಕುಮಾರ್ ಶೆಟ್ಟಿ, ಶಿವರಾಮ ಶೆಟ್ಟಿ, ಸರಳ ಎಸ್. ಹೆಗ್ಡೆ, ಹರೀಶ್ ಶೆಟ್ಟಿ ವಾಂಟ್ಯಾಳ ಮೊದಲಾದವರು ಉಪಸ್ಥಿತರಿದ್ದರು.

ಕಟ್ಟಡದ ವಿನ್ಯಾಸಕಾರರಾದ ಸುಷ್ಮಾ ಎನ್ ಹೆಗ್ಡೆ, ಹರೀಶ್ ಶೆಟ್ಟಿ, ರಾಘವೇಂದ್ರ ಶೆಟ್ಟಿ ಅವರನ್ನು ಹಾಗೂ ಕಟ್ಟಡ ನಿರ್ಮಾಣಕ್ಕೆ ಕೊಡುಗೆ ನೀಡಿದ ದಾನಿಗಳನ್ನು ಸಮ್ಮಾನಿಸಲಾಯಿತು.

ಸತೀಶ್ ಶೆಟ್ಟಿ ಕುತ್ಯಾರುಬೀಡು ಸ್ವಾಗತಿಸಿ, ವಿಜಯಕುಮಾರ್ ಶೆಟ್ಟಿ ಸಿದ್ದಾಪುರ ನಿರೂಪಿಸಿ, ಶ್ರೀಧರ ಕೆ. ಶೆಟ್ಟಿ ಕುತ್ಯಾರು ಬೀಡು ವಂದಿಸಿದರು.


Spread the love

Exit mobile version