ಎಸ್ಪೆಶಿಯ ಸಂಸ್ಥೆಯ ವತಿಯಿಂದ ಸಂಜೆ ಸ್ಟಾರ್ ನೈಟ್ ಕಾರ್ಯಕ್ರಮ
ಮಂಗಳೂರು: ಮಂಗಳಾದೇವಿ ದೇವಸ್ಥಾನದ ಜಾತ್ರೆ ಅಂಗವಾಗಿ ಮಾರ್ಚ್ 9ರಂದು ಜೆಪ್ಪು ಬಪ್ಪಾಲ್ ನಲ್ಲಿ ಎಸ್ಪೆಶಿಯ ಸಂಸ್ಥೆಯ ವತಿಯಿಂದ ಸಂಜೆ ಸ್ಟಾರ್ ನೈಟ್ ಕಾರ್ಯಕ್ರಮ ಜರುಗಿತು.
ಸಿನಿಮಾ ನಟ ನಟಿಯರು, ಹಾಸ್ಯನಟರು ಮತ್ತು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ 300 ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಅಕ್ಕಿ ವಿತರಣೆ, 100 ವಿದ್ಯಾರ್ಥಿಗಳಿಗೆ ಸಮವಸ್ತ್ರ, 200 ಮಂದಿಗೆ ಹೆಲ್ತ್ ಕಾರ್ಡ್, 44 ವಿದ್ಯಾರ್ಥಿ ವೇತನ ವಿತರಣೆ, 83 ಜನ ಪೌರಕಾರ್ಮಿಕರಿಗೆ ಸಮ್ಮಾನ, ಸ್ಮಶಾನ ಸೇವಕರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮವನ್ನು ರಾಘವೇಂದ್ರ ರಾವ್ ನ್ಯಾಯವಾದಿ ಎಸ್ಪೇಶಿಯಾದ ಕಾನೂನು ಸಲಹೆಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮವನ್ನು ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಉದ್ಘಾಟಿಸಿದರು. ಅಕ್ಕಿ ವಿತರಣೆಯನ್ನು ಶಾಸಕರಾದ ಜೆ ಆರ್ ಲೋಬೊ ವಿತರಿಸಿದದರೆ, ಹೆಲ್ತ್ ಕಾರ್ಡ್ ನ್ನು ಒಮೇಗಾ ಆಸ್ಪತ್ರೆಯ ಡಾ ಮುಕುಂದ್ ವಿತರಿಸಿದರು. ಚಿತ್ರನಟ ಅರ್ಜುನ್ ಕಾಪಿಕಾಡ್, ನವೀನ್ ಡಿ ಪಡೀಲ್, ವಿಸ್ಮಯ ವಿನಾಯಕ್, ಸೌರಭ್ ಭಂಡಾರಿ, ಪ್ರಥ್ವಿ ಅಂಬರ್, ಆರಾಧ್ಯ ಶೆಟ್ಟಿ, ಕೀಶೋರ್ ಶೆಟ್ಟಿ, ರಮಾನಾಥ್ ಹೆಗಡೆ, ಯಶ್ ಪಾಲ್ ಸುವರ್ಣ, ಸಂದೀಪ್ ಶೆಟ್ಟಿ, ಪಿಪಿ ಹೆಗಡೆ, ವಕೀಲರಾದ ರವಿಂದ್ರನಾಥ್ ರೈ, ರಾಜ್ ಗೋಪಾಲ್ ರೈ, ಆರ್ ಜೆ ವಿಜಯ್ ಪಿಳ್ಳೆ, ನಮ್ಮ ಟಿವಿಯ ಶಿವಶರಣ್ ಶೆಟ್ಟಿ, ಜಿತೇಂದ್ರ ಕೊಠಾರಿ ಉಪಸ್ಥಿತರಿದ್ದರು.
ರಸಮಂಜರಿಯನ್ನು ರಾಜೇಶ್ ಎಮ್ ತಂಡ, ನೃತ್ಯವನ್ನು ವೆಲೋಸಿಟಿ ತಂಡ ನೆರವೇರಿಸಿದರು.