ಎಸ್.ಎಸ್.ಎಲ್.ಸಿ ಫಲಿತಾಂಶ: ಸಾಸ್ತಾನ ಸಂತ ಅಂತೋನಿ ಆಂಗ್ಲ ಮಾಧ್ಯಮ ಶಾಲೆ 100% ಫಲಿತಾಂಶ ದಾಖಲು

Spread the love

ಎಸ್.ಎಸ್.ಎಲ್.ಸಿ ಫಲಿತಾಂಶ: ಸಾಸ್ತಾನ ಸಂತ ಅಂತೋನಿ ಆಂಗ್ಲ ಮಾಧ್ಯಮ ಶಾಲೆ 100% ಫಲಿತಾಂಶ ದಾಖಲು

ಬ್ರಹ್ಮಾವರ: 2023-24 ರ ಎಸ್ ಎಸ್ ಎಲ್ ಸಿ ಪರೀಕ್ಷೆಯಯಲ್ಲಿ ಸೈಂಟ್ ಆಂಟನಿ ಆಂಗ್ಲ ಮಾಧ್ಯಮ ಶಾಲೆ ಸಾಸ್ತಾನ ಸತತ 6ನೇ ವರ್ಷವೂ ಕೂಡ ಶೇ 100 ಫಲಿತಾಂಶ ದಾಖಲಿಸಿದೆ.

ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾದ ಒಟ್ಟು 39 ವಿದ್ಯಾರ್ಥಿಗಳಲ್ಲಿ 11 ವಿಶಿಷ್ಠ ಶ್ರೇಣಿಯಲ್ಲಿ ಹಾಗೂ 22 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಪ್ರೌಢ ಶಾಲೆ ಪ್ರಾರಂಭವಾಗಿ ಕೇವಲ 8 ವರ್ಷಗಳಲ್ಲಿ ಸತತ 6 ವರ್ಷಗಳಲ್ಲಿ ಶೇ.100 ಫಲಿತಾಂಶವನ್ನು ಪಡೆದಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ. ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿರುವ ವಿದ್ಯಾರ್ಥಿಗಳನ್ನು ಶಾಲೆಯ ಸಂಚಾಲಕರಾದ ವಂ|ಸುನೀಲ್ ಡಿಸಿಲ್ವ, ಮುಖ್ಯೋಪಾಧ್ಯಾಯಿನಿ ಅನಿತಾ ಆಲ್ಮೇಡಾ ಹಾಗೂ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಚಂದ್ರಕಾಂತ್ ಬಿ ಮತ್ತು ಸದಸ್ಯರು, ಶಾಲಾ ಸಿಬ್ಬಂದಿ ವರ್ಗ ಹಾಗೂ ಪೋಷಕರು ಅಭಿನಂದಿಸಿದ್ದಾರೆ


Spread the love