ಎಸ್ ಐ ಓ ದ.ಕ. ನೂತನ ಜಿಲ್ಲಾಧ್ಯಕ್ಷರಾಗಿ ರಿಝ್ವಾನ್ ಅಝ್ಹರಿ ಆಯ್ಕೆ

Spread the love

ಎಸ್ ಐ ಓ ದ.ಕ. ನೂತನ ಜಿಲ್ಲಾಧ್ಯಕ್ಷರಾಗಿ ರಿಝ್ವಾನ್ ಅಝ್ಹರಿ ಆಯ್ಕೆ

ಮಂಗಳೂರು: 2019 ನೇ ಅವಧಿಗೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್.ಐ.ಓ)ದ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಅಧ್ಯಕ್ಷರಾಗಿ ರಿಝ್ವಾನ್ ಅಝ್ಹರಿ ಬೋಳಂಗಡಿ ಆಯ್ಕೆಯಾಗಿದ್ದಾರೆ.

ಮಂಗಳೂರಿನ ಬಂದರ್ ನಲ್ಲಿರುವ ಹಿದಾಯತ್ ಸೆಂಟರ್ ನಲ್ಲಿ ಎಸ್ ಐ ಓ ಕರ್ನಾಟಕ ರಾಜ್ಯಾಧ್ಯಕ್ಷರಾದ ನಿಹಾಲ್ ಕಿದಿಯೂರು ಹಾಗೂ ರಾಜ್ಯ ಕಾರ್ಯದರ್ಶಿ ಯಾಸೀನ್ ಕೋಡಿಬೆಂಗ್ರೆಯವರ ಉಪಸ್ಥಿತಿಯಲ್ಲಿ ನಡೆದ ನೂತನ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ರಿಝ್ವಾನ್ ಅಝ್ಹರಿ ಬೋಳಂಗಡಿಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಕೇರಳದ ಆಲುವಾ ದಲ್ಲಿರುವ ಅಝ್ಹರುಲ್ ಉಲೂಂ ಕಾಲೇಜಿನಲ್ಲಿ ಅರೇಬಿಕ್ ನಲ್ಲಿ ಪದವಿ ಪಡೆದಿರುವ ರಿಝ್ವಾನ್ ರವರು, ಪ್ರಸ್ತುತ ಪಾಣೆಮಂಗಳೂರಿನಲ್ಲಿರುವ ಅಲ್ ಮದ್ರಸತುಲ್ ಇಸ್ಲಾಮಿಯಾದಲ್ಲಿ ಮದ್ರಸಾ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾ, ಮಂಗಳೂರು ವಿಶ್ವವಿದ್ಯಾನಿಲಯದಿಂದ ಪದವಿಯಲ್ಲಿ ದೂರಶಿಕ್ಷಣ ಪಡೆಯುತ್ತಿದ್ದಾರೆ.

ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಯಾಗಿ ಆಶಿಕ್ ಹಶಾಶ್ ರವರನ್ನು ಆಯ್ಕೆ ಮಾಡಲಾಯಿತು.

ಎಸ್ ಐ ಓ ಪಾಣೆಮಂಗಳೂರು ಶಾಖೆಯ ಅಧ್ಯಕ್ಷರಾಗಿ ತಮೀಝ್ ಅಲಿ ಕಾರಾಜೆ, ಉಪ್ಪಿನಂಗಡಿ ಶಾಖೆಯ ಅಧ್ಯಕ್ಷರಾಗಿ ಇರ್ಫಾನ್ ಉಪ್ಪಿನಂಗಡಿ, ಉಳ್ಳಾಲ ಶಾಖೆಯ ಅಧ್ಯಕ್ಷರಾಗಿ ನಿಝಾಮ್ ಉಳ್ಳಾಲ, ಮಂಗಳೂರು ನಗರ ಶಾಖೆಯ ಅಧ್ಯಕ್ಷರಾಗಿ ಇರ್ಷಾದ್ ವೇಣೂರು, ಕಾರ್ಯದರ್ಶಿಯಾಗಿ ಮುಂಝಿರ್ ಅಹ್ಸನ್ ರವರನ್ನು ಹಾಗೂ ಬಂದರ್ ಶಾಖೆಯ ಅಧ್ಯಕ್ಷರಾಗಿ ಅಮ್ಮಾರ್ ಅಹ್ಸನ್ ರವರನ್ನು ಇದೇ ವೇಳೆ ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಸ್.ಐ.ಓ ಮಾಜಿ ರಾಷ್ಟ್ರೀಯ ಅಧ್ಯಕ್ಷರಾದ ಅಶ್ಫಾಕ್ ಅಹ್ಮದ್ ಶರೀಫ್ ಹಾಗೂ ಮಾಜಿ ರಾಜ್ಯಾಧ್ಯಕ್ಷರಾದ ಶೌಕತ್ ಅಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಸೋಲಿಡಾರಿಟಿ ಯೂತ್ ಮೂಮೆಂಟ್ ನ ಮಂಗಳೂರು ನಗರಾಧ್ಯಕ್ಷ ಫರ್ವೇಝ್ ಮಂಗಳೂರು, ಎಸ್.ಐ.ಓ ರಾಜ್ಯ ಸಲಹಾ ಸಮಿತಿಯ ಸದಸ್ಯರಾದ ತಲ್ಹಾ ಇಸ್ಮಾಯೀಲ್ ಕೆ.ಪಿ, ದಾನಿಶ್ ಪಾಣೆಮಂಗಳೂರು, ಡಾ. ಮಿಸ್ ಅಬ್ ಇಸ್ಮಾಯೀಲ್, ಎಸ್.ಐ.ಓ ನಿರ್ಗಮನ ಜಿಲ್ಲಾಧ್ಯಕ್ಷರಾದ ಅಹ್ಮದ್ ಮುಬೀನ್ ಬೆಂಗ್ರೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Spread the love