ಉಡುಪಿ: ಉಡುಪಿ ಜಿಲ್ಲಾ ಎಸ್ ಪಿ ಕೆ. ಅಣ್ಣಾಮಲೈ ಇವರ ವರ್ಗಾವಣೆಯ ಕುರಿತು ಕೆಲವೊಂದು ಮಾಧ್ಯಮ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ತಮ್ಮ ಸ್ಪಷ್ಟೀಕರಣ ನೀಡಿದ್ದು, ವರ್ಗಾವಣೆಯ ಸುದ್ದಿ ಕೇವಲ ವದಂತಿ ಎಂದಿದ್ದಾರೆ.
ಈ ಕುರಿತು ಸ್ಪಷ್ಟೀಕರಣ ನೀಡಿದ ಜಿಲ್ಲಾ ಎಸ್ ಪಿ ತಾನು ಸರಕಾರದ ಆದೇಶದಂತೆ ಪೋಲಿಸ್ ವರಿಷ್ಠಾಧಿಕಾರಿಯಾಗಿ ಭಡ್ತಿ ಹೊಂದಿದ್ದು, ಒಂದು ವರ್ಷದ ಅವಧಿಯಲ್ಲಿ ನನ್ನಿಂದಾದ ಉತ್ತಮ ಕೆಲಸಗಳನ್ನು ಜಿಲ್ಲೆಯಲ್ಲಿ ಮಾಡಲು ಪ್ರಯತ್ನ ಮಾಡಿದ್ದು, ನನ್ನ ಸೇವೆಯನ್ನು ಕಂಡು ಇಂತಹ ಸೇವೆ ಇತರ ಜಿಲ್ಲೆಗಳಲ್ಲಿ ಸರಕಾರ ಬೇಕು ಎಂದು ಅಪೇಕ್ಷೆ ಪಟ್ಟರೆ ತಪ್ಪೇನು? ಉಡುಪಿ ಜಿಲ್ಲೆ ತನಗೆ ಅತೀವ ಪ್ರೀಯವಾದ ಜಿಲ್ಲೆಯಾಗಿದ್ದು, ಇದೇ ರೀತಿಯ ಸೇವೆ ಮುಂದೆ ಸರಕಾರದ ಆದೇಶದಂತೆ ವರ್ಗಾವಣೆಯಾದ ಜಿಲ್ಲೆಯಲ್ಲೂ ಮಾಡಲು ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ. ಆದರೆ ಈ ವರೆಗೆ ತನ್ನ ವರ್ಗಾವಣೆಯ ಕುರಿತು ಸರಕಾರ ಯಾವುದೇ ರೀತಿಯ ಅಧಿಕೃತ ಆದೇಶ ಹೊರ ಬಿದ್ದಿಲ್ಲ.
ಜನವರಿ ತಿಂಗಳಲ್ಲಿ ಪೋಲಿಸ್ ಅಧಿಕಾರಿಗಳ ವರ್ಗಾವಣೆಯ ಆದೇಶದ ತನಕ ಕಾದು ನೋಡಬೇಕಾಗಿದೆ ಆದರೆ ಸಾರ್ವಜನಿಕ ಜಾಲ ತಾಣ ಹಾಗೂ ಕೆಲವೊಂದು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಸುದ್ದಿ ಸಂಪೂರ್ಣ ಸುಳ್ಳಾಗಿದ್ದು, ಸರಕಾರದ ಸ್ಪಷ್ಟ ಆದೇಶ ಬರದೆ ಸಾರ್ವಜನಿಕರು ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ನಂಬದಂತೆ ಮನವಿ ಮಾಡಿದ್ದಾರೆ. ಅಲ್ಲದೆ ವರ್ಗಾವಣೆ ಎನ್ನುವುದು ಸರಕಾರದ ಆದೇಶದಂತೆ ನಡೆಯುವ ಪ್ರಕ್ರಿಯೆ ಆಗಿದ್ದು ಇದರ ಬಗ್ಗೆ ಸಾರ್ವಜನಿಕರು ಯಾವುದೇ ಊಹಾಪೋಹಾಗಳಿಗೆ ಹಾಗೂ ವದಂತಿಗಳಿಗೆ ಕಿವಿಗೊಡದಂತೆ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಸಂಘಟನೆಗಳು, ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರೆ ಇದು ತನಗೆ ನೋವುಂಟು ಮಾಡಿದಂತೆ ಆದ್ದರಿಂದ ದಯವಿಟ್ಟು ಪ್ರತಿಭಟನೆ ಮಾಡದಂತೆ ವಿನಂತಿಸಿದ್ದಾರೆ.