ಎ.ಜೆ. ಆಸ್ಪತ್ರೆಯಲ್ಲಿ “ಮೂತ್ರಪಿಂಡ (ಕಿಡ್ನಿ) ತಪಾಸಣಾ ಶಿಬಿರ
ಎ. ಜೆ. ಆಸ್ಪತ್ರೆಯು ಕಳೆದ ಹಲವು ವರ್ಷಗಳಿಂದ ಹಲವಾರು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿದೆ. ಸಾವಿರಾರು ರೋಗಿಗಳು ಇದರಿಂದ ಪ್ರಯೋಜನ ಪಡೆದುಕೊಂಡಿದ್ದಾರೆ.
ವಿಶ್ವ ಕಿಡ್ನಿ ದಿನದ (14/3/2019) ಪ್ರಯುಕ್ತ ಮಾರ್ಚ್ 11 ರಿಂದ 16, 2019 ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.30 ರವರೆಗೆ ಎ.ಜೆ. ಆಸ್ಪತ್ರೆಯಲ್ಲಿ “ಮೂತ್ರಪಿಂಡ (ಕಿಡ್ನಿ) ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಮೂತ್ರಪಿಂಡ (ಕಿಡ್ನಿ) ತೊಂದರೆಗಳಿದ್ದವರು ಈ ಶಿಬಿರದ ಉಪಯೋಗ ಪಡೆದುಕೊಳ್ಳಬಹುದು. ಈ ಶಿಬಿರದಲ್ಲಿ ಖ್ಯಾತ ಮತ್ತು ಅನುಭವೀ ತಜ್ಞವೈದ್ಯರುಗಳು ರೋಗಿಗಳ ತಪಾಸಣೆ ಮಾಡಲಿದ್ದು ಚಿಕಿತ್ಸೆ ನೀಡಲಿದ್ದಾರೆ.
ಈ ಕೆಳಗಿನ ಮೂತ್ರರೋಗ ಮತ್ತು ಮೂತ್ರಪಿಂಡ ಸಮಸ್ಯೆಗಳಿರುವವರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದು.
- ಮೂತ್ರಪಿಂಡದಲ್ಲಿ ಕಲ್ಲು.
- ಪ್ರೋಸ್ಟೇಟ್ ಗ್ರಂಥಿಗೆ ಸಂಬಂಧಪಟ್ಟಂತೆ ತೊಂದರೆಗಳು.
- ಮೂತ್ರಪಿಂಡ ವೈಫಲ್ಯ.
- ಇತರ ಮೂತ್ರ ಸಂಬಂಧಿ ಸಮಸ್ಯೆಗಳು.
ಕ್ಯಾತ ಹಾಗೂ ತಜ್ಞ ವೈದ್ಯರುಗಳಾದ ಡಾ. ಪ್ರಾಶಂತ್ ಮಾರ್ಲ, ಡಾ. ಸುನಿಲ್ ಪಿ. ಶೆಣೈ, ಡಾ. ಪ್ರೀತಮ್ ಶರ್ಮ ಮತ್ತು ಡಾ. ರಾಘವೇಂದ್ರ ನಾಯಕ್ ಶಿಬಿರದಲ್ಲಿ ಸಂದರ್ಶನಕ್ಕೆ ಲಬ್ಯರಿರುತ್ತಾರೆ.
ಶಿಬಿರದಲ್ಲಿ ಭಾಗವಹಿಸುವವರಿಗೆ ನೋಂದಾವಣೆ, ಸಂದರ್ಶನ ಹಾಗೂ ಅಲ್ಟ್ರಾಸೌಂಡ್ ಸ್ಕ್ಯಾನ್ ಉಚಿತ.
ತಪಾಸಣೆಗಳ ದರದಲ್ಲಿ ಶೇಕಡಾ 25 ರಿಯಾಯಿತಿ ನೀಡಲಾಗುವುದು.
ಮೂತ್ರ ಪಿಂಡದ ಕಲ್ಲು ತೆಗೆಯುವುದು, ಪ್ರಾಸ್ಟೇಟ್ ಗ್ರಂಥಿ ಮತ್ತು ಇತರ ಮೂತ್ರ ಸಂಬಂಧಿ ಚಿಕಿತ್ಸೆಗಳನ್ನು ರಿಯಾಯಿತಿ ದರದಲ್ಲಿ ನಡೆಸಲಾಗುವುದು.
ಶಿಬಿರದಲ್ಲಿ ಭಾಗವಹಿಸಲಿಚ್ಛಿಸುವವರು ತಮ್ಮ ಹೆಸರನ್ನು ಮುಂಚಿತವಾಗಿ ನೊಂದಾಯಿಸಿಕೊಳ್ಳಬೇಕು. ನೊಂದಾವಣಿಗಾಗಿ ಸಂಪರ್ಕಿಸಿ. 0824-6613252 / 7848022333