ಎ ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಅಗ್ನಿ ಅವಘಡ ಅಣಕು ಪ್ರದರ್ಶನ

Spread the love

ಎ ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಅಗ್ನಿ ಅವಘಡ ಅಣಕು ಪ್ರದರ್ಶನ

ಮಂಗಳೂರು: ಕರ್ನಾಟಕ ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆ, ಮಂಗಳೂರು ವಿಭಾಗದ ಸಹಯೋಗದೊಂದಿಗೆ, ಎ ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಅಗ್ನಿ ಅವಘಡ ಅಣಕು ಪ್ರದರ್ಶನ ದಿನಾಂಕ 15 ಡಿಸೆಂಬರ್, 2018 ರಂದು ನಡೆಯಿತು.

ಸಿ.ಎಫ್ ಓ (ಚೀಫ್ ಪೈರ್ ಆಫಿಸರ್ ) ಶ್ರೀ ಟಿ.ಎನ್ ಶಿವಶಂಕರ್ ಅವರ ನೇತೃತ್ವದಲ್ಲಿ ನಡೆದ ಈ ಅಣಕುಪ್ರದರ್ಶನದಲ್ಲಿ ರೋಗಿಗಳ ಸಂದರ್ಶಕರಿಗೆ, ಡಾಕ್ಟರ್ ಹಾಗೂ ಸಿಬ್ಬಂದಿ ವರ್ಗದವರಿಗೆ ಅಗ್ನಿ ಅನಾಹುತದ ಬಗ್ಗೆ ಮಾಹಿತಿ ಹಾಗೂ ರೋಗಿಗಳನ್ನು ಹಾಗೂ ಸಿಬ್ಬದಿಗಳನ್ನು ಕ್ಷಿಪ್ರ ಸ್ಥಳಾಂತರಿಸುವಿಕೆ ವಿಧಾನವನ್ನು ಕಲಿಸಿಕೊಡಲಾಯಿತು. ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಎದ್ದ ದಟ್ಟ ಹೊಗೆಯನ್ನು ಕಂಡ ಪೈರ್ ಮ್ಯಾನ್ ಗಳು ಡಿ.ಎಪ್.ಓ ಮೊಹಮ್ಮದ್ ನವಾಜ್ ಹಾಗೂ ಶೇಖರ್ ಅವರ ನಿರ್ದೇಶನದೊಂದಿಗೆ ಮೂರನೇ ಮಹಡಿಯಲ್ಲಿದ್ದ ಸಿಬ್ಬಂದಿಗಳನ್ನು ಸ್ಕೈಲಿಪ್ಟ್ ಯಂತ್ರದಿಂದ ನೆಲ ಮಹಡಿಗೆ ಸ್ಥಳಾಂತರಿಸಿದ ಕಾರ್ಯವೈಖರಿ ಎಲ್ಲರನ್ನು ಅಚ್ಚರಿಗೊಳಿಸಿತು. ಅಗ್ನಿದುರಂತದ ಸಮಯದಲ್ಲಿ ಬಳಸುವ ಎಲ್ಲಾ ತರದ ಉಪಕರಣಗಳನ್ನು ಪ್ರಾಯೋಗಿಕ ತರಬೇತು ಪ್ರದರ್ಶನದಲ್ಲಿ ಉಪಯೋಗಿಸಲಾಯಿತು. ಸುಮಾರು ಮಧ್ಯಾಹ್ನ 3.00 ಗಂಟೆಯಿಂದ 5.30 ಗಂಟೆಯವರೆಗೆ ನಡೆದ ಈ ಅಣುಕು ಪ್ರದರ್ಶನ ನೆರೆದ ಎಲ್ಲರಲ್ಲಿ ಜಾಗೃತಿಯನ್ನು ಮೂಡಿಸಿತಲ್ಲದೆ, ರೋಗಿಗಳ ಸರ್ದಶಕರಿಂದ ಶ್ಲಾಘನೆಗೆ ಪಾತ್ರವಾಯಿತು.

ಎ ಜೆ ಆಸ್ಪತ್ರೆಯ, ಸಿ.ಓ.ಓ ಮತ್ತು ಹೆಚ್ ಆರ್ ಹೆಡ್ ಶ್ರೀ ಲಕ್ಷೀಶ್ ರೈ, ಕ್ಲಿನಿಕಲ್ ಎಡ್‍ಮಿನಿಸ್ಟ್ರೇಟರ್ ಡಾ/ ಶಾಶ್ವತ್, ಕ್ವಾಲಿಟಿ ವಿಭಾಗದ ಶ್ರೀಮತಿ ನಿರ್ಮಲಾ ಕುಮಾರಿ, ಡಾ. ರಶ್ಮಿ, ಹೆಚ್ ಆರ್ ಡಿ ವಿಭಾಗದ ಶಶಿಧರ್, ಫೆಸಿಲಿಟಿ ಹಾಗೂ ಸೇಪ್ಟಿ ವಿಭಾಗದ ಹರ್ಷೇಂದ್ರ ಶೆಟ್ಟಿ, ನವೀನ್ ಫ್ರಭು ಹಾಗೂ ಟಿ.ಹರಿ ಮತ್ತಿತರು ಸಕ್ರಿಯವಾಗಿ ಭಾಗವಹಿಸಿದ್ದರು.


Spread the love