ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ರಕ್ತದಾನ ಸಪ್ತಾಹ
ಮಂಗಳೂರು: ವಿಶ್ವ ರಕ್ತದಾನಿ ದಿನ (ಜೂನ್14) ರ ಅಂಗವಾಗಿ ಎ.ಜೆ. ರಕ್ತನಿಧಿಯು ಜೂನ್ 13 ರಿಂದ ಜೂನ್ 20, 2017 ರವರೆಗೆ ಸ್ವಯಂಪ್ರೇರಿತ ರಕ್ತದಾನ ಸಪ್ತಾಹವನ್ನು ಆಯೋಜಿಸಿದೆ.
ಈ ಕಾರ್ಯಕ್ರಮವನ್ನು ದಕ್ಷಿಣಕನ್ನಡ ಜಿಲ್ಲೆಯ ರೆಡ್‍ಕ್ರಾಸ್ ಸೊಸೈಟಿಯ ಚೇರ್‍ಮ್ಯಾನ್‍ರಾದ ಶಾಂತರಾಮ್ ಶೆಟ್ಟಿಯವರು ಉದ್ಘಾಟಿಸಿದರು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್. ಸಂಯೋಜಕರಾದ ವಿನೀತಾ ರೈಯವರು ಗೌರವ ಅತಿಥಿಗಳಾಗಿದ್ದರು.
ಡಾ. ಶಾಂತರಾಮ್ ಶೆಟ್ಟಿಯವರು ಹಿಂದುಳಿದ ಮತ್ತುಅರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಗುಣಮಟ್ಟದ ಮತ್ತು ಒಳ್ಳೆಯ ಆರೋಗ್ಯ ರಕ್ಷಣೆ ನೀಡುವ ಕೆಲಸಗಳನ್ನು ಮಾಡುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.
3 ಅನುಕರಣೀಯ ಸ್ವಯಂಪ್ರೇರಿತ ರಕ್ತದಾನಿಗಳನ್ನು ಮತ್ತು 10 ವಿಶೇಷ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಸಂಘಟಕರನ್ನು ಸನ್ಮಾನಿಸಲಾಯಿತು.
ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ಆಡಳಿತ ನಿರ್ದೇಶಕಿ ಡಾ. ಅಮಿತಾ ಪಿ. ಮಾರ್ಲರವರು ಎನ್.ಎ.ಬಿ.ಎಚ್. ಮಾನ್ಯತೆ ಪ್ರಮಾಣ ಪತ್ರವನ್ನು ಎ.ಜೆ. ರಕ್ತನಿಧಿಗೆ ಹಸ್ತಾಂತರಿಸಿದರು. ಎ.ಜೆ. ರಕ್ತನಿಧಿಯು ಈ ಮಾನ್ಯತೆಯನ್ನು ಪಡೆದುಕೊಂಡ ಕರ್ನಾಟಕದ 6ನೇ ರಕ್ತನಿಧಿ ಆಗಿದೆ.
ರಕ್ತನಿಧಿ ತಂತ್ರಜ್ಞರಿಗಾಗಿ ನಿರಂತರ ವೈದ್ಯಕೀಯ ಶಿಕ್ಷಣ (ಸಿ.ಎಂ.ಇ.)ವನ್ನುಜೂನ್ 10, 2017ರಂದು ಆಯೋಜಿಸಲಾಗಿತ್ತು ಹಾಗೂ ಇದರಲ್ಲಿ ದಕ್ಷಿಣಕನ್ನಡ, ಉಡುಪಿ, ಕೊಡಗು ಮತ್ತು ಉತ್ತರಕನ್ನಡ ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.