ಎ.ಪಿ.ಯಂ.ಸಿ ಭಾ.ಜ.ಪಾ ಕ್ಷೇತ್ರಗಳನ್ನು ಬೆಂಬಲಿಸಿ – ಸಂಜೀವ ಮಠಂದೂರು

Spread the love

ಎ.ಪಿ.ಯಂ.ಸಿ ಭಾ.ಜ.ಪಾ ಕ್ಷೇತ್ರಗಳನ್ನು ಬೆಂಬಲಿಸಿ – ಸಂಜೀವ ಮಠಂದೂರು
ಮಂಗಳೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ, ರೈತರ ಕ್ಷೇತ್ರ, ಸಹಕಾರಿ ಕ್ಷೇತ್ರ ಮತ್ತು ವರ್ತಕರ ಕ್ಷೇತ್ರಕ್ಕೆ ತಾ-12/01/2017 ರಂದು ಚುನಾವಣೆ ಘೋಷಣೆಯಾಗಿರುತ್ತದೆ. ಭಾರತೀಯ ಜನತಾ ಪಾರ್ಟಿ ಯು ಕಂದಾಯ ತಾಲೂಕುಗಳಾದ ಮಂಗಳೂರು, ಬಂಟ್ವಾಳ ಮತ್ತು ಬೆಳ್ತಂಗಡಿಯಲ್ಲಿ ಈ ಎಲ್ಲಾ ಕ್ಷೇತ್ರಗಳಿಗೆ ತನ್ನ ಬೆಂಬಲಿತ ಅಭ್ಯರ್ಥಿಗಳನ್ನು ಚುನಾವಣಾ ಕಣದಲ್ಲಿ ಸ್ಪÀÀರ್ದಿಸುತ್ತಿರುವ ಎಲ್ಲಾ ಅಭ್ಯರ್ಥಿಗಳು ಪ್ರಚಾರ ಕಾರ್ಯಗಳನ್ನು ಕೈಗೊಂಡಿರುತ್ತಾರೆ.
ಭಾ.ಜ.ಪಾದ ನೇತ್ರತ್ವÀದ ಕೇಂದ್ರ ಸರಕಾರ ನೀಡಿರುವ ಸುಮಾರು 160 ಕೋಟಿ ರೂಪಾಯಿಗಳಷ್ಟು ಅಡಿಕೆ ಬೆಂಬಲ ಬೆಲೆ, ಕೃಷಿ ಸಂಚಯ ಯೋಜನೆ, ಫಸಲು ಭೀಮಾ ಯೋಜನೆ,ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ, ರಾಷ್ಡ್ರೀಕೃತ ಮತ್ತು ಸಹಕಾರಿ ಬ್ಯಾಂಕ್‍ಗಳಲ್ಲಿ ರೈತರಿಗೆ 2 ತಿಂಗಳ ಬಡ್ಡಿ ಮನ್ನಾ ಮತ್ತು ಕಿಸಾನ್ ಕಾರ್ಡ್ ನಂತಹ ಅನೇಕ ಯೋಜನೆಗಳನ್ನು ಕೃಷಿ ಸಮುದಾಯಗಳಿಗೆ ಒದಗಿಸಿರುತ್ತದೆÉ ಅಲ್ಲದೇ ಈಹಿಂದಿನ ಬಿ.ಜೆ.ಪಿಯ ರಾಜ್ಯ ಸರಕಾರದ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಆಡಳಿತದಲ್ಲಿ ಕೂಡ ರಾಜ್ಯದ ಕೃಷಿಕರಿಗೆ ಅನೇಕ ಜನಪರ ಯೋಜನೆಗಳನ್ನು ನೀಡಿರುವುದು ಸಹಕಾರಿಯಾಗಿದೆ ಮತ್ತು ಕಳೆದ ಎರಡೂವರೆ ವರ್ಷಗಳಿಂದ ಬಿ.ಜೆ.ಪಿ.ಯ ಬೆಂಬಲಿತ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಜನಪರವಾದ ಮತ್ತು ಭೃಷ್ಟಾಚಾರರಹಿತವಾದ ಆಡಳಿತವನ್ನು ಈ ಕ್ಷೇತ್ರಗಳಲ್ಲಿ ನೀಡಿರುವುದು ಕೃಷಿಕರಿಗೆ ತೃಪ್ತಿದಾಯಕವಾಗಿದೆ.
ರೈತರಿಗೆ ಮೂಲಭೂತ ಸೌಲಭ್ಯ , ಯೋಗ್ಯ ಕೃಷಿ ಉತ್ಪನ್ನಗಳಿಗೆ ಧಾರಣೆ ಹಾಗೂ ವತರ್Àಕರಿಗೆ ಸೌಲಭ್ಯಗಳನ್ನು ಒದಗಿಸಿಕೊಟ್ಟ್ಟು ಕೃಷಿಕರ ದಿನ ನಿತ್ಯದ ಮಾರುಕಟ್ಟೆಯನ್ನಾಗಿಸಲು ಪಣತೊಟ್ಟಿರುವ ನಮ್ಮ ಅಭ್ಯರ್ಥಿಗಳನ್ನು ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಬಹುಮತದೊಂದಿಗೆ ಗೆಲ್ಲಿಸಿ ಈ ಕ್ಷೇತ್ರಗಳಲ್ಲಿ ಆಡಳಿತ ನಡೆಸುವ ಅವಕಾಶವನ್ನು ಮತ್ತೊಮ್ಮೆ ನೀಡಬೇಕಾಗಿ ದ.ಕ ಜಿಲ್ಲಾ ಅಧ್ಯಕ್ಷರಾದ ಸಂಜೀವ ಮಠಂದೂರು ಮನವಿ ಮಾಡಿರುತ್ತಾರೆ.


Spread the love