Home Mangalorean News Kannada News ಎ.ಬಿ.ವಿ.ಪಿ ವತಿಯಿಂದ ವಿವೇಕ ಜಯಂತಿಯ ಪ್ರಯುಕ್ತ ಯುವಜಾಗೃತಿ ಸಮಾವೇಶ

ಎ.ಬಿ.ವಿ.ಪಿ ವತಿಯಿಂದ ವಿವೇಕ ಜಯಂತಿಯ ಪ್ರಯುಕ್ತ ಯುವಜಾಗೃತಿ ಸಮಾವೇಶ

Spread the love

ಎ.ಬಿ.ವಿ.ಪಿ ವತಿಯಿಂದ ವಿವೇಕ ಜಯಂತಿಯ ಪ್ರಯುಕ್ತ ಯುವಜಾಗೃತಿ ಸಮಾವೇಶ

ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಸಿಡಿಲ ಸಂತ ಸ್ವಾಮಿ ವಿವೇಕಾನಂದರ 156ನೇ ಜನ್ಮ ದಿನಾಚರಣೆಯ ಅಂಗವಾಗಿ ಯುವಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾದ ಪ್ರಕಾಶ್ ಮಲ್ಪೆ ಸಮಾಜಿಕ ಕಾರ್ಯಕರ್ತರು ಅವರು ಮಾತನಾಡಿ ವಿವೇಕಾನಂದರು ಭಾರತೀಯ ಸಂಸ್ಕೃತಿಯ ಆತ್ಮವಿದ್ದಂತೆ. ಭಾರತವನ್ನು ಅರ್ಥಮಾಡಿಕೊಳ್ಳಲು ವಿವೇಕಾನಂದರ ಜೀವನ ಮತ್ತು ಸಾಧನೆಗಳನ್ನು ಅರ್ಥಮಾಡಿಕೊಂಡರೆ ಸಾಕು. ಇಡೀ ಜಗತ್ತಿಗೆ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯ ಬಗ್ಗೆ ಅರಿವು ಮಾಡಿಕೊಟ್ಟ ಮಹಾನೀಯರು ವಿವೇಕಾನಂದರು. ಇಡೀ ಪಶ್ಚಿಮದ ಪ್ರಪಂಚದಲ್ಲಿ ಭಾರತದ ಬಗ್ಗೆ ಬ್ರಿಟೀಷರು, ಮಿಷನರಿಗಳು ಮತ್ತಿತರರು ಮಾಡಿಸಿದ ಅತ್ಯಂತ ಹೀನಾಯವಾದ ಭಾವನೆಗಳನ್ನು ತೊಡೆದುಹಾಕಿ ಭಾರತದ ಬಗ್ಗೆ ಗೌರವ ಹುಟ್ಟುವಂತೆ ಮಾಡಿದ್ದರು. ಇಂದಿಗೂ ಕೂಡಾ ಅವರ ವಿಚಾರಗಳು, ಆದರ್ಶಗಳು ಪ್ರಸ್ತುತ ಇವೆ. ಅವುಗಳನ್ನು ಸಹಕಾರಗೊಳಿಸಿದರೆ ಭಾರತದ ಭವಿಷ್ಯ ಉಜ್ವಲವಾಗುವುದು ನಿಶ್ಚಿತ ಎಂದು ತಿಳಿಸಿಕೊಟ್ಟರು.

ಅದೇ ರೀತಿ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದಿರತಕ್ಕಂತಹ ಪ್ರಭಾಕರ್ ಜಿ.ಎಸ್, ಪ್ರಾಂಶುಪಾಲರು ಶಕ್ತಿ ಪಿಯು ಕಾಲೇಜು ಮಂಗಳೂರು ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ “ಏಳಿ, ಎದ್ದೇಳಿ ಗುರಿಮುಟ್ಟುವತನಕ ನಿಲ್ಲದಿರಿ” ಎಂಬ ವಿವೇಕಾನಂದರ ವಾಕ್ಯವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿಕೊಟ್ಟರು ಮತ್ತು ವಿವೇಕಾನಂದರ ಜೀವನ ಶೈಲಿಯನ್ನು ಮತ್ತು ಅವರ ಕಷ್ಟದ ದಿನಗಳನ್ನು ಎಳೆ ಎಳೆಯಾಗಿ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಹೇಳಿದರು.

ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಶಿಶ್ ಅಜ್ಜಿಬೆಟ್ಟು ಜಿಲ್ಲಾಸಂಚಾಲಕರು, ವಿಕಾಸ್ ಕಾಟಿಪಳ್ಳ ನಗರಕಾರ್ಯದರ್ಶಿ, ಗುರುರಾಜ್ ಜಿ. ನಗರಾಧ್ಯಕ್ಷರು ವಂದನಾರ್ಪಣೆಗೈದರು. ಪ್ರಾಸ್ತಾವಿಕವಾಗಿ ಮಣಿಕಂಠ ಗೌಡರವರು ಮಾತನಾಡಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಳೆದ 70 ವರ್ಷಗಳಿಂದ ಸಾಮಾಜಿಕ ಕ್ಷೇತ್ರದಲಿ ಕ್ರಿಯಾಶೀಲವಾಗಿರುವ ವಿದ್ಯಾರ್ಥಿ ಸಂಘಟನೆಯಾಗಿದೆ. ದೇಶಾದ್ಯಂತ ಸುಮಾರು 35ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ವಿಶ್ವದ ಅತ್ಯಂತ ದೊಡ್ಡ ವಿದ್ಯಾರ್ಥಿ ಸಂಘಟನೆ ಎಂಬ ಹಿರಿಮೆಯೂ ಪರಿಷತ್ತಿಗಿದೆ. ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಎಂಬ ಉದಾತ್ತ ಚಿಂತನೆಯೊಂದಿಗೆ ವಿದ್ಯಾರ್ಥಿ ಸಮುದಾಯದಲ್ಲಿ ರಾಷ್ಟ್ರಭಕ್ತಿ, ರಚನಾತ್ಮಕ ದೃಷ್ಟಿಕೋನ ಸಮಾಜಮುಖಿ ಚಿಂತನೆಯನ್ನು ಬಿತ್ತಿ ಎಲ್ಲಿಲ್ಲದ ಪ್ರಶಂಸೆಯ ಮಾತುಗಳು ದೊರೆತಿದೆ ಎಂದು ಮಾತನಾಡಿದರು.

ಈ ಕಾರ್ಯಕ್ರಮಕ್ಕೆ ಯುನಿವರ್ಸಿಟಿ ಕಾಲೇಜು, ಕಾರ್‍ಸ್ಟ್ರೀಟ್ ಸರಕಾರಿ ಪದವಿ ಕಾಲೇಜು, ಶಾರದಾ ವಿದ್ಯಾಲಯ, ಸರಕಾರಿ ಐ.ಟಿ.ಐ, ಸರ್ಕಾರಿ ಕೆ.ಪಿ.ಟಿ ಹಾಗೂ ಡಬ್ಲ್ಯೂಪಿಟಿ ಕಾಲೇಜಿನ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಅಬಾವಿಪದ ಹಿರಿಯರಾದ ಸಿ.ಎನ್ ಶಂಕರ ರಾವ್, ಮನೋಹರ್ ತುಲಜರಾಂ, ಡಾ|ಬಾಲಕೃಷ್ಣ್ಪ ಭಟ್ ಮಾಜಿ ವಿಧಾನ ಪರಿಷತ್ ಸದಸ್ಯರು, ಬಸವೇಶ್ ಕೋರಿ ವಿಭಾಗ ಸಂಘಟನಾ ಕಾರ್ಯದರ್ಶಿ, ಶ್ರೇಯಸ್, ಬ್ರಿಜೇಶ್, ಕಿರಣ್ ಬೇವಿನಹಳ್ಳಿ ನಗರ ಸಂಘಟನಾ ಕಾರ್ಯದರ್ಶಿ, ಶೀತಲ್ ಕುಮಾರ್ ಜೈನ್, ಸುಧಿತ್ ಶೆಟ್ಟಿ, ಮೃನಾಳ್, ಸಂದೇಶ್ ರೈ, ಕೀರ್ತನ್ ದಾಸ್, ಅದ್ವಿಕ್, ನಿತೇಶ್, ಸಾಕ್ಷತ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Spread the love

Exit mobile version