ಎ.14: ಮೋದಿ ರೋಡ್ ಶೋ ಹಿನ್ನೆಲೆ; ಮಂಗಳೂರು ನಗರ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

Spread the love

ಎ.14: ಮೋದಿ ರೋಡ್ ಶೋ ಹಿನ್ನೆಲೆ; ಮಂಗಳೂರು ನಗರ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಎ.14ರಂದು ನಗರದ ಲೇಡಿಹಿಲ್ ಬಳಿಯ ಶ್ರೀ ನಾರಾಯಣಗುರು ವೃತ್ತದಿಂದ ನವಭಾರತ ಸರ್ಕಲ್ವರೆಗೆ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಅಂದು ಮಧ್ಯಾಹ್ನ 2ರಿಂದ ಪ್ರಧಾನಿಯ ಕಾರ್ಯಕ್ರಮ ಮುಗಿಯುವವರೆಗೆ ನಗರದಲ್ಲಿ ವಾಹನಗಳ ಸಂಚಾರಕ್ಕಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ನಗರ ಪೊಲೀಸ್ ಆಯುಕ್ತರ ಪ್ರಕಟನೆ ತಿಳಿಸಿದೆ.

ವಾಹನ ಸಂಚಾರ ನಿಷೇಧಿತ ಮಾರ್ಗಗಳು
1. ಪ್ರಧಾನಮಂತ್ರಿಗಳ ರೋಡ್ ಶೋ ನಡೆಯುವ ಲೇಡಿಹಿಲ್ ಬಳಿಯ ಶ್ರೀ ನಾರಾಯಣಗುರು ವೃತ್ತ – ಲಾಲ್ಬಾಗ್ – ಬಲ್ಲಾಳ್ಬಾಗ್ – ಕೊಡಿಯಾಲ್ ಗುತ್ತು – ಬಿ.ಜಿ ಸ್ಕೂಲ್ ಜಂಕ್ಷನ್ – ಪಿ.ವಿ.ಎಸ್ – ನವಭಾರತ ವೃತ್ತ – ಹಂಪನಕಟ್ಟೆ ವರೆಗೆ ಮಧ್ಯಾಹ್ನದಿಂದ ಪ್ರಧಾನ ಮಂತ್ರಿಗಳ ಕಾರ್ಯಕ್ರಮ ಮುಗಿಯುವ ವರೆಗೆ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
2. ಕಾರ್ ಸ್ಟ್ರೀಟ್ – ಕುದ್ರೋಳಿ – ಕೂಳೂರು ಫೆರ್ರಿ ರಸ್ತೆ ಕಡೆಯಿಂದ ಅಡ್ಡ ರಸ್ತೆ ಮೂಲಕ ಎಂ.ಜಿ ರಸ್ತೆ ಪ್ರವೇಶಿಸುವ ಎಲ್ಲಾ ವಾಹನಗಳ ಸಂಚಾರವನ್ನು ನಿಷೇದಿಸಿದೆ.
3. ಕೆ.ಎಸ್.ಅರ್.ಟಿ.ಸಿ, ಶ್ರೀದೇವಿ ಕಾಲೇಜು ರಸ್ತೆ, ಕೊಡಿಯಾಲ್ ಗುತ್ತು ರಸ್ತೆ, ಜೈಲು ರಸ್ತೆ ಹಾಗೂ ಬಿಜೈ ಚರ್ಚ್ ರಸ್ತೆ ಮೂಲಕ ಎಂ.ಜಿ ರಸ್ತೆಗೆ ಬರುವ ಅಡ್ಡ ರಸ್ತೆ ಹಾಗೂ ಬಂಟ್ಸ್ ಹಾಸ್ಟೆಲ್ ಮೂಲಕ ಪಿ.ವಿ.ಎಸ್ ಕಡೆಗೆ ಎಲ್ಲಾ ವಾಹನಗಳ ಸಂಚಾರವನ್ನು ನಿಷೇದಿಸಿದೆ.
4. ಕೊಟ್ಟಾರ ಚೌಕಿ, ಉರ್ವಾ ಸ್ಟೋರ್, ಕೋಟೆಕಣಿ ಕ್ರಾಸ್ನಿಂದ (ಲೇಡಿಹಿಲ್) ನಾರಾಯಣಗುರು ವೃತ್ತದ ಕಡೆಗೆ ಬರುವ ಎಲ್ಲಾ ತರಹದ ವಾಹನ ಸಂಚಾರವನ್ನು ನಿಷೇಧಿಸಿದೆ.
5. ಮಣ್ಣಗುಡ್ಡ ಜಂಕ್ಷನ್ ನಿಂದ ನಾರಾಯಣ ಗುರು ವೃತ್ತ (ಲೇಡಿಹಿಲ್) ದ ಕಡೆಗೆ ಎಲ್ಲಾ ತರಹದ ವಾಹನ ಸಂಚಾರವನ್ನು ನಿಷೇದಿಸಿದೆ.
6. ಉರ್ವಾ ಮಾರ್ಕೆಟ್ ಕಡೆಯಿಂದ ನಾರಾಯಣ ಗುರು ವೃತ್ತ (ಲೇಡಿಹಿಲ್) ದ ಕಡೆಗೆ ಎಲ್ಲಾ ತರಹದ ವಾಹನ ಸಂಚಾರವನ್ನು ನಿಷೇದಿಸಿದೆ.
7. ಕೆ.ಎಸ್.ಆರ್.ಟಿ.ಸಿ ಯಿಂದ ಲಾಲ್ಬಾಗ್ ಮುಖಾಂತರ ನಾರಾಯಣ ಗುರು ವೃತ್ತ (ಲೇಡಿಹಿಲ್)/ ಪಿವಿಎಸ್ ಕಡೆಗೆ ಎಲ್ಲಾ ತರಹದ ವಾಹನ ಸಂಚಾರವನ್ನು ನಿಷೇದಿಸಿದೆ.
8. ಬಂಟ್ಸ್ ಹಾಸ್ಟೆಲ್, ಕರಂಗಲ್ಪಾಡಿ, ಕೋರ್ಟ್ ಕ್ರಾಸ್ ರಸ್ತೆಯಿಂದ ಪಿವಿಎಸ್, ಎಂ.ಜಿ. ರೋಡ್ ಗೆ ಬರುವ ಎಲ್ಲಾ ವಾಹನದ ಸಂಚಾರ ನಿಷೇಧಿಸಿದೆ.
9. ಕೆ.ಎಸ್.ರಾವ್ ರೋಡ್, ಡೊಂಗರಕೇರಿ ರಸ್ತೆ, ಗದ್ದೆಕೇರಿ ರೋಡ್, ವಿ.ಟಿ. ರೋಡ್, ಶಾರದಾ ವಿದ್ಯಾಲಯ ರಸ್ತೆ ಯಿಂದ ನವಭಾರತ್ ಸರ್ಕಲ್ ಕಡೆಗೆ ಬರುವ ಎಲ್ಲಾ ವಾಹನದ ಸಂಚಾರ ನಿಷೇಧಿಸಿದೆ.
10. ಎಂ.ಜಿ ರಸ್ತೆಯಿಂದ ಜೈಲ್ ರೋಡ್ ಮುಖಾಂತರ ಬಿಜೈ ಚರ್ಚ್ ರೋಡ್ ಕಡೆಗೆ ಬರುವ ಎಲ್ಲಾ ವಾಹನದ ಸಂಚಾರ ನಿಷೇಧಿಸಿದೆ.

ವಾಹನ ಪಾರ್ಕಿಂಗ್ ನಿಷೇಧಿತ ಸ್ಥಳಗಳು:
1.  ಭಾರತದ ಪ್ರಧಾನಮಂತ್ರಿಗಳು ಸಂಚರಿಸುವ ಬಜಪೆ ವಿಮಾನ ನಿಲ್ದಾಣದಿಂದ ಕೆಂಜಾರು – ಮರವೂರು- ಕಾವೂರು- ಬೊಂದೇಲ್- ಮೇರಿಹಿಲ್ – ಕೆ.ಪಿ.ಟಿ – ಕೊಟ್ಟಾರ ಚೌಕಿ – ಉರ್ವ ಸ್ಟೋರ್ – ಶ್ರೀ ನಾರಾಯಣ ಗುರು ವೃತ್ತ (ಲೇಡಿಹಿಲ್) ವರೆಗೆ ರಸ್ತೆಯ ಎರಡು ಬದಿಯಲ್ಲಿ ಪ್ರಧಾನ ಮಂತ್ರಿಗಳ ಕಾರ್ಯಕ್ರಮ ಮುಗಿಯುವವರೆಗೆ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
2. ರೋಡ್ ಶೋ ನಡೆಯುವ ಲೇಡಿಹಿಲ್ ಬಳಿಯ ಶ್ರೀ ನಾರಾಯಣಗುರು ವೃತ್ತ – ಲಾಲ್ಬಾಗ್ – ಬಲ್ಲಾಳ್ಬಾಗ್ – ಕೊಡಿಯಾಲ್ ಗುತ್ತು – ಬಿ.ಜಿ ಸ್ಕೂಲ್ ಜಂಕ್ಷನ್ – ಪಿ.ವಿ.ಎಸ್ – ನವಭಾರತ ವೃತ್ತ – ಸಿಟಿ ಸೆಂಟರ್ – ಹಂಪನಕಟ್ಟೆ ವರೆಗೆ ಪ್ರಧಾನ ಮಂತ್ರಿಗಳ ಕಾರ್ಯಕ್ರಮ ಮುಗಿಯುವ ವರೆಗೆ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
3. ಗೌರವಾನ್ವಿತ ಭಾರತದ ಪ್ರಧಾನಮಂತ್ರಿಗಳು ವಾಪಸ್ಸು ಬಜಪೆ ವಿಮಾನ ನಿಲ್ದಾಣ ಕಡೆಗೆ ಸಂಚರಿಸುವ ರಸ್ತೆಯಾದ ಹಂಪನಕಟ್ಟ – ಎಲ್.ಹೆಚ್.ಹೆಚ್ – ಬಾವುಟಗುಡ್ಡ – ಡಾ.ಅಂಬೇಡ್ಕರ್ ವೃತ್ತ – ಬಂಟ್ಸ್ ಹಾಸ್ಟೆಲ್ – ಭಾರತ್ ಬೀಡಿ – ಕದ್ರಿ ಕಂಬಳ – ಭಟ್ಟಗುಡ್ಡೆ ರಸ್ತೆಯ ಎರಡು ಬದಿಯಲ್ಲಿ ಪ್ರಧಾನ ಮಂತ್ರಿಗಳ ಕಾರ್ಯಕ್ರಮ ಮುಗಿಯುವವರೆಗೆ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
4. ಕಾವೂರು – ಪಂಜಿಮೊಗೆರು – ಕೂಳೂರು – ೪ ನೇ ಮೈಲು – ಕೊಟ್ಟಾರಚೌಕಿ ರವರೆಗೆ ರಸ್ತೆಯ ಎರಡು ಬದಿಯ ಪ್ರಧಾನ ಮಂತ್ರಿಗಳ ಕಾರ್ಯಕ್ರಮ ಮುಗಿಯುವವರೆಗೆ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
5. ಹಂಪನಕಟ್ಟ – ಎಲ್.ಹೆಚ್.ಹೆಚ್ – ಬಲ್ಮಠ ರೋಡ್ – ರೂಪಾ ಹೋಟೆಲ್ ರಸ್ತೆ – ಡಾ.ಅಂಬೇಡ್ಕರ್ ವೃತ್ತ – ಕಲೆಕ್ಟರ್ಸ್್ ಗೇಟ್ ವೃತ್ತ – ಹಾರ್ಟಿಕಲ್ಚರ್ ಜಂಕ್ಷನ್ – ಸೈಂಟ್ ಆಗ್ನೇಸ್ – ಶಿವಭಾಗ್ – ನಂತೂರು ವೃತ್ತ – ಪದುವಾ – ಕೆ.ಪಿ.ಟಿ ವರೆಗೆ ಎರಡು ಬದಿಯ ರಸ್ತೆಗಳಲ್ಲಿ ಪ್ರಧಾನ ಮಂತ್ರಿಗಳ ಕಾರ್ಯಕ್ರಮ ಮುಗಿಯುವವರೆಗೆ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
6. ಬಿ.ಜಿ. ಜಂಕ್ಷನ್ – ಜೈಲ್ ರೋಡ್ – ಬಿಜೈ ಚರ್ಚ್ ರೋಡ್ ರವರೆಗೆ ಎರಡು ಬದಿಯ ರಸ್ತೆಗಳಲ್ಲಿ ಪ್ರಧಾನ ಮಂತ್ರಿಗಳ ಕಾರ್ಯಕ್ರಮ ಮುಗಿಯುವವರೆಗೆ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

ವಾಹನ ಸಂಚಾರದ ಪರ್ಯಾಯ ವ್ಯವಸ್ಥೆಯ ವಿವರ

1. ಉಡುಪಿ ಕಡೆಯಿಂದ ಮಂಗಳೂರು ನಗರಕ್ಕೆ ಬರುವ ಎಲ್ಲಾ ಬಸ್ಸು ಹಾಗೂ ಎಲ್ಲಾ ರೀತಿಯ ವಾಹನಗಳು ಕೊಟ್ಟಾರ ಚೌಕಿ ಜಂಕ್ಷನ್ – ಕೆಪಿಟಿ ಜಂಕ್ಷನ್ – ನಂತೂರು ಜಂಕ್ಷನ್ – ಶಿವಭಾಗ್ ಜಂಕ್ಷನ್ – ಸೆಂಟ್ ಆಗ್ನೇಸ್ – ಹಾರ್ಟಿಕಲ್ಚರ್ ಜಂಕ್ಷನ್ – ಲೋವರ್ ಬೆಂದೂರು – ಕರಾವಳಿ ಜಂಕ್ಷನ್ – ಕಂಕನಾಡಿ ಜಂಕ್ಷನ್ – ಅವೇರಿ ಜಂಕ್ಷನ್ – ಮಿಲಾಗ್ರಿಸ್ ಜಂಕ್ಷನ್ – ಹಂಪನಕಟ್ಟ ಜಂಕ್ಷನ್ – ಕ್ಲಾಕ್ ಟವರ್ ಮೂಲಕ ಚಲಿಸುವುದು ಹಾಗೂ ಮಂಗಳೂರು ನಗರ ಸ್ಟೇಟ್ಬ್ಯಾಂಕ್ ಕಡೆಯಿಂದ ಉಡುಪಿ ಕಡೆಗೆ ಹೋಗುವ ವಾಹನಗಳು ಲೇಡಿ ಗೋಷನ್ – ಕ್ಲಾಕ್ ಟವರ್ – ರೈಲ್ವೇ ಸ್ಟೇಷನ್ ಜಂಕ್ಷನ್ – ನಂದಿಗುಡ್ಡ ರೋಡ್ – ಕೋಟಿಚೆನ್ನಯ್ಯ ಸರ್ಕಲ್ – ಕಂಕನಾಡಿ ಜಂಕ್ಷನ್ ಮೂಲಕ ಮುಂದೆ ಸಂಚರಿಸುವುದು.
2. ಪಂಪುವೆಲ್ ಕಡೆಯಿಂದ ಮಂಗಳೂರು ನಗರಕ್ಕೆ ಬರುವ ಬಸ್ಸು ಹಾಗೂ ಎಲ್ಲಾ ರೀತಿಯ ವಾಹನಗಳು ಕರಾವಳಿ ಜಂಕ್ಷನ್ – ಕಂಕನಾಡಿ ಜಂಕ್ಷನ್ – ಅವೇರಿ ಜಂಕ್ಷನ್ – ಮಿಲಾಗ್ರಿಸ್ ಜಂಕ್ಷನ್ – ಹಂಪನಕಟ್ಟ ಜಂಕ್ಷನ್ – ಕ್ಲಾಕ್ ಟವರ್ ಮೂಲಕ ಚಲಿಸುವುದು ಹಾಗೂ ಮಂಗಳೂರು ನಗರ ಸ್ಟೇಟ್ಬ್ಯಾಂಕ್ ಕಡೆಯಿಂದ ಪಂಪ್ವಲ್ ಕಡೆಗೆ ಹೋಗುವ ವಾಹನಗಳು ಲೇಡಿ ಗೋಷನ್ – ಕ್ಲಾಕ್ ಟವರ್ – ರೈಲ್ವೇ ಸ್ಟೇಷನ್ ಜಂಕ್ಷನ್ – ನಂದಿಗುಡ್ಡ ರೋಡ್ – ಕೋಟಿಚೆನ್ನಯ್ಯ ಸರ್ಕಲ್ – ಕಂಕನಾಡಿ ಜಂಕ್ಷನ್ ಮೂಲಕ ಮುಂದೆ ಸಂಚರಿಸುವುದು.
3. ಕಾರ್ಸ್ಟ್ರೀಟ್ – ಕುದ್ರೋಳಿ ಕಡೆಯಿಂದ ಬರುವ ಎಲ್ಲಾ ವಾಹನಗಳನ್ನು ಮಣ್ಣಗುಡ್ಡೆ, ಉರ್ವಾ ಮಾರ್ಕೆಟ್ ಮುಖಾಂತರ ಅಶೋಕನಗರ ಕೋಡಿಕಲ್ ಕ್ರಾಸ್ ಮೂಲಕ ಸಂಚರಿಸುವುದು.
4. ಬಿಜೈ ಚರ್ಚ್ ಕಡೆಯಿಂದ ಬರುವ ವಾಹನಗಳು ಕೆ.ಎಸ್.ಆರ್.ಟಿ.ಸಿ. ಜಂಕ್ಷನ್ ಮುಖಾಂತರ ಕೊಟ್ಟಾರ ಕ್ರಾಸ್/ ಕುಂಟಿಕಾನದ ಕಡೆಗೆ ಸಂಚರಿಸುವುದು.
5. ಕುಂಟಿಕಾನ ಕೊಟ್ಟಾರ ಕ್ರಾಸ್ ಕಡೆಯಿಂದ ಬರುವ ವಾಹನಗಳನ್ನು ಕೆ.ಎಸ್.ಆರ್.ಟಿ.ಸಿ. ಜಂಕ್ಷನ್ ನ ಮುಖಾಂತರ ಬಿಜೈ ಚರ್ಚ್ ಕಡೆಗೆ ಸಂಚರಿಸುವುದು.

ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ಸಂಜೆ 5-00 ಗಂಟೆಗೆ ಮುಂಚಿತವಾಗಿ ಈ ಕೆಳಕಂಡಂತೆ ಗುರುತಿಸಲಾದ ಪಾರ್ಕಿಂಗ್ ಸ್ಥಳಗಳಲ್ಲಿ ಅವರ ವಾಹನಗಳನ್ನು ನಿಲುಗಡೆಗೊಳಿಸಿ ಪ್ರಧಾನ ಮಂತ್ರಿಯವರ ರೋಡ್ ಶೋವನ್ನು ವೀಕ್ಷಣೆ ಮಾಡಲು ನಿಗದಿಪಡಿಸಿದ ಸ್ಥಳಗಳಲ್ಲಿ ಹಾಜರಿರುವುದು.
1. ಕರಾವಳಿ ಮೈದಾನ
2. ಲೇಡಿಹಿಲ್ ಶಾಲಾ ಮೈದಾನ
3. ಲೇಡಿಹಿಲ್ ಚರ್ಚ್ ಮೈದಾನ
4. ಉರ್ವ ಮಾರ್ಕೆಟ್ ಮೈದಾನ
5. ಉರ್ವ ಸ್ಟೋರ್ ಮೈದಾನ
6. ಉರ್ವ ಕೆನರಾ ಶಾಲಾ ಮೈದಾನ
7. ಕೆನರಾ ಕಾಲೇಜು ಮೈದಾನ
8. ಡೊಂಗರಕೇರಿ ಕೆನರಾ ಶಾಲಾ ಮೈದಾನ
9. ಗಣಪತಿ ಶಾಲಾ ಮೈದಾನ
10. ರಾಮಕೃಷ್ಣ ಶಾಲಾ ಮೈದಾನ, ಬಂಟ್ಸ್ ಹಾಸ್ಟೇಲ್
11. ಸಿ.ವಿ ನಾಯಕ್ ಹಾಲ್ ಮೈದಾನ
12. ಟಿ.ಎಂ.ಎ ಪೈ ಹಾಲ್ ಮೈದಾನ
13. ಬಿ.ಇ.ಎಂ ಶಾಲಾ ಮೈದಾನ
14. ನೆಹರೂ ಮೈದಾನ
15. ಪುರಭವನ ಪಾರ್ಕಿಂಗ್ ಸ್ಥಳ
16. ಕದ್ರಿ ಮೈದಾನ
17. ಕೆಪಿಟಿ ಕಾಲೇಜು ಮೈದಾನ
18. ಕೆಟಿಪಿ ಬಳಿಯ ಆರ್.ಟಿ.ಓ ಮೈದಾನ
19. ಪದುವಾ ಕಾಲೇಜು ಮೈದಾನ
20. ಗೋಲ್ಡ್ ಫಿಂಚ್ ಸಿಟಿ ಮೈದಾನ, ಕೂಳೂರು
21. ಸುಲ್ತಾನ್ ಬತ್ತೇರಿ ಗ್ರೌಂಡ್ಸ್
22. ಗೋಕರ್ಣಥೇಶ್ವರ ಕಾಲೇಜು ಗ್ರೌಂಡ್
23. ಎಮ್ಮೆಕರೆ ಮೈದಾನ
24. ಮಂಗಳೂರು ವಿಶ್ವವಿದ್ಯಾನಿಲಯ ಮೈದಾನ, ಹಂಪನಕಟ್ಟೆ
25. ಮಿಲಾಗ್ರಿಸ್ ಚರ್ಚ್ ಪಾರ್ಕಿಂಗ್ ಗ್ರೌಂಡ್
26. ಮಿಲಾಗ್ರಿಸ್ ಕಾಲೇಜು ಮೈದಾನ
27. ಬಲ್ಮಠ ಶಾಂತಿ ನಿಲಯ ಮೈದಾನ
28. ಸೆಂಟ್ ಸೆಬಾಸ್ಟಿನ್ ಹಾಲ್ ಪಾಕಿಂಗ್ (ಸೆಂಟ್ ಅಗ್ನೇಸ್ ಶಾಲೆ)

ಬ್ಯಾರಿಕೇಡ್ ಪಾಯಿಂಟ್ಗಳ ವಿವರ
ಪ್ರಧಾನಮಂತ್ರಿರವರು ಮಂಗಳೂರಿಗೆ ಆಗಮಿಸುವ ಸಂಬಂಧ ಸಂಜೆ 5-00 ಗಂಟೆಯಿಂದ ಕಾರ್ಯಕ್ರಮ ಮುಗಿಯುವವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇದಿಸಲಾಗಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗವನ್ನು ಉಪಯೋಗಿಸುವಂತೆ ಕೋರಿದೆ.
1. ಚಿಲಿಂಬಿ ಹಿಲ್ ರೋಡ್, ಕೂಳೂರು ಫೆರ್ರಿ ರೋಡ್ (ಲೇಡಿಹಿಲ್ ಕಡೆಗೆ ನಿಷೇಧಿಸಿದೆ)
2. ಸುಲ್ತಾನ್ ಬತ್ತೇರಿ ರೋಡ್ (ಗಾಂಧಿನಗರ ರೋಡ್) (ಲೇಡಿಹಿಲ್ ಕಡೆಗೆ ನಿಷೇಧಿಸಿದೆ)
3. ಮಣ್ಣಗುಡ್ಡೆ ಜಂಕ್ಷನ್ (ಲೇಡಿಹಿಲ್ ಕಡೆಗೆ ನಿಷೇಧಿಸಿದೆ)
4. ಕೆ.ಎಸ್.ಆರ್.ಟಿ.ಸಿ ವೃತ್ತ (ಎಂ.ಜಿ ರೋಡ್ ಕಡೆಗೆ ನಿಷೇಧಿಸಿದೆ)
5. ಬಿಜೈ ಚರ್ಚ್ ಬಳಿ (ಜೈಲ್ ರೋಡ್ ಕಡೆಗೆ ವಾಹನ ಸಂಚಾರ ನಿಷೇಧಿಸಿದೆ)
6. ಭಟ್ಟಗುಡ್ಡ ಜಂಕ್ಷನ್ (ಕದ್ರಿ ಕಂಬಳ ಕಡೆ ನಿಷೇಧಿಸಿದೆ)
7. ಮಲ್ಲಿಕಟ್ಟೆ ಜಂಕ್ಷನ್ (ಕದ್ರಿ ದೇವಸ್ಥಾನದ ದ್ವಾರದ ಬಳಿ) (ಬಂಟ್ಸ್ಹಾಸ್ಟೆಲ್ ಕಡೆಗೆ ಬರುವ ವಾಹನ ಸಂಚಾರ ನಿಷೇಧಿಸಿದೆ)
8. ಕಲೆಕ್ಟರ್ಸ್ವ ಗೇಟ್ (ಡಾ.ಅಂಬೇಡ್ಕರ್ ವೃತ್ತದ ಕಡೆಗೆ ನಿಷೇಧಿಸಿದೆ)
9. ಆವೇರಿ ಜಂಕ್ಷನ್- 1 (ಜ್ಯೋತಿ ಕೆ.ಎಂ.ಸಿ ಆಸ್ಪತ್ರೆ ಕಡೆಗೆ ನಿಷೇಧಿಸಿದೆ)
10. ಆವೇರಿ ಜಂಕ್ಷನ್- 2 (ಬಲ್ಮಠ ರಸ್ತೆ ಕಡೆಗೆ ನಿಷೇಧಿಸಿದೆ)
11. ಮಿಲಾಗ್ರಿಸ್ ಕ್ರಾಸ್ ರೋಡ್ (ಬಲ್ಮಠ ರಸ್ತೆ ಕಡೆಗೆ ನಿಷೇಧಿಸಿದೆ)
12. ಬಂಟ್ಸ್ ಹಾಸ್ಟೆಲ್ (ಪಿ.ವಿ.ಎಸ್ ಜಂಕ್ಷನ್ ಕಡೆಗೆ ನಿಷೇಧಿಸಿದೆ)
13. ಕಾರ್ಸ್ಟ್ರೀಟ್ (ಕೆ.ಎಸ್.ರಾವ್ ರಸ್ತೆ ಕಡೆಗೆ ನಿಷೇಧಿಸಿದೆ)
14. ಡೊಂಗರಿಕೇರಿ ಜಂಕ್ಷನ್ (ದೇವಸ್ಥಾನದ ಬಳಿ) (ನವಭಾರತದ ಕಡೆಗೆ ನಿಷೇಧಿಸಿದೆ)
15. ದುರ್ಗಾ ಮಹಲ್ ಜಂಕ್ಷನ್ (ಬಲ್ಲಾಳ್ಬಾಗ್ ಕಡೆಗೆ)
16. ವೇರ್ಹೌಸ್ ಜಂಕ್ಷನ್ (ಬಲ್ಲಾಳ್ಬಾಗ್ ಕಡೆಗೆ)
17. ಕೆ.ಬಿ ಕಟ್ಟೆ (ಹಂಪನಕಟ್ಟ, ಕೆ.ಎಸ್.ರಾವ್ ರಸ್ತೆ ಮತ್ತು ಎಲ್.ಹೆಚ್.ಹೆಚ್ ಕಡೆಗೆ ನಿಷೇಧಿಸಿದೆ)
18. ಶ್ರೀನಿವಾಸ ಹೋಟೆಲ್ ಬಳಿ (ಜಿ.ಹೆಚ್.ಎಸ್ ರೋಡ್) (ಕೆ.ಎಸ್.ರಾವ್ ರಸ್ತೆ ಕಡೆಗೆ ನಿಷೇಧಿಸಿದೆ)


Spread the love