ಎ. 9-12: ಪಿಪಿಸಿಯಲ್ಲಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಖೋ-ಖೋ ಪಂದ್ಯಾಕೂಟ

Spread the love

ಎ. 9-12: ಪಿಪಿಸಿಯಲ್ಲಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಖೋ-ಖೋ ಪಂದ್ಯಾಕೂಟ

ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಹಯೋಗದೊಂದಿಗೆ ಪೂರ್ಣಪ್ರಜ್ಞ ಕಾಲೇಜು. (ಸ್ವಾಯತ್ತ) ಉಡುಪಿ, ವಿಶೇಷವಾಗಿ ನಿರ್ಮಿಸಲಾದ ಶ್ರೀ ವಿಬುಧೇಶತೀರ್ಥ ಸ್ವಾಮೀಜಿ ಒಳಾಂಗಣ ಕ್ರೀಡಾಂಗಣದಲ್ಲಿ 2024-25ನೇ ಸಾಲಿನ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಖೋ-ಖೋ ಪಂದ್ಯಾಕೂಟವನ್ನು ಎಪ್ರಿಲ್ 9 ರಿಂದ 12ನೇ ತಾರೀಖಿನ ತನಕ ಆಯೋಜಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾಲೇಜು ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ. ಜಿ ಎಸ್ ಚಂದ್ರಶೇಖರ್ ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಉದ್ದೇಶದೊಂದಿಗೆ ವಿವಿಧ ಶಾಖೆ-ವಿಷಯಗಳಲ್ಲಿ ವಿದ್ಯೆಯನ್ನು ನೀಡಲೋಸುಗ ಪೂರ್ಣಪ್ರಜ್ಞ ಕಾಲೇಜು ಆರು ದಶಕಗಳ ಹಿಂದೆ 1960ರಲ್ಲಿ ಸ್ಥಾಪನೆಯಾಗಿದ್ದು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಆಡಳಿತಕ್ಕೊಳಪಟ್ಟಿದೆ.

2022 ರಲ್ಲಿ ನ್ಯಾಕ್ ನಿಂದ ಮರುಮೌಲ್ಯಮಾಪನಕ್ಕೆ ಒಳಪಟ್ಟು ಗುಣಮಟ್ಟದ ಶಿಕ್ಷಣಕ್ಕಾಗಿ ‘A+ ಶ್ರೇಯಾಂಕ ಪಡೆದಿರುವ ಸಂಸ್ಥೆಯು ಉಡುಪಿ ಜಿಲ್ಲೆಯಲ್ಲಿಯೇ ಮೊದಲೆಂಬಂತೆ ಅಖಿಲಭಾರತ ಮಟ್ಟದ ಅನೇಕ ಪಂದ್ಯಾಕೂಟಗಳನ್ನು ಏರ್ಪಡಿಸಿ ಯಶಸ್ವಿಯಾಗಿದೆ. 2018ರ ಅಖಿಲ ಭಾರತ ಅಂತರ್ ವಿ.ವಿ. ನೆಟ್ಬಾಲ್ ಚಾಂಪಿಯನ್ಶಿಪ್, 2019ರ ಅಖಿಲ ಭಾರತ ಅಂತರ್ ವಿ.ವಿ ಕಬಡ್ಡಿ ಪಂದ್ಯಾಟ, 2023ರ ಅಖಿಲ ಭಾರತ ಅಂತರ್ ವಿ.ವಿ. ಕಬಡ್ಡಿ ಪಂದ್ಯಾಕೂಟ, 2024ರ ಅಖಿಲ ಭಾರತ ಅಂತರ್ ವಿ.ವಿ. ಪುರುಷರ ಖೋ-ಖೋ ಪಂದ್ಯಾಕೂಟ 2025 ಆಯೋಜಿಸಿದ್ದು ಇದೇ ಎಪ್ರಿಲ್ 9 ರಿಂದ 12ನೇ ತಾರೀಖಿನ ತನಕ ಪ್ರತಿಷ್ಠಿತ ಪಂದ್ಯಾಟ ನಡೆಯಲಿದೆ.

ಈ ರಾಷ್ಟ್ರೀಯ ಪಂದ್ಯಾಕೂಟವು ‘ಜರ್ಮನ್ ಹ್ಯಾಂಗರ್’ ತಂತ್ರಜ್ಞಾನದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಶ್ರೀ ವಿಬುಧೇಶತೀರ್ಥ ಸ್ವಾಮೀಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಾಕೂಟದಲ್ಲಿ ಒಟ್ಟು ಆಯ್ದ 16 ತಂಡಗಳು ಭಾಗವಹಿಸುತ್ತಿದ್ದು ದಕ್ಷಿಣವಲಯದಿಂದ ನಾಲ್ಕು ತಂಡವು (ಕರ್ನಾಟಕದ ಮಂಗಳೂರು ವಿ.ವಿ., ದಾವಣಗೆರೆ ವಿ.ವಿ.. ತಮಿಳುನಾಡಿನ ಭಾರತಿಯಾರ್ ವಿ.ವಿ. ಕೊಯಮುತ್ತೂರು, ಕೇರಳ ವಿ.ವಿ. ತಿರುವನಂತಪುರ) ಪಶ್ಚಿಮ ವಲಯದಿಂದ ನಾಲ್ಕು ತಂಡಗಳು (ಎಸ್.ಆರ್.ಟಿ.ಎಮ್. ಯು ನಾಂದೆಡ್ ಮಹಾರಾಷ್ಟ್ರ, ಬಿ.ಎ.ಎಮ್.ಯು. ಸಂಬಾಜಿ ನಗರ ಮಹಾರಾಷ್ಟ್ರ, ಮುಂಬಯಿ ವಿ.ವಿ. ಸಾವಿತ್ರಿ ಬಾಯಿ ಪುಲೆ ವಿ.ವಿ. ಪುಣೆ) ಉತ್ತರ ವಲಯದ ನಾಲ್ಕು ತಂಡಗಳು (ಸಿ.ಎಸ್.ಜೆ.ಎಮ್.ಯು. ಕಾನ್ಸುರ, ಉತ್ತರ ಪ್ರದೇಶ, ಎಲ್.ಪಿ.ಯು. ಜಲಂದರ್ ಪಂಜಾಬ್, ದೆಹಲಿ ವಿ.ವಿ., ಜಿ.ಎನ್.ಡಿ.ಯು. ಅಮೃತಸರ ಪಂಜಾಬ್). ಪೂರ್ವ ವಲಯದ ನಾಲ್ಕು ತಂಡಗಳು (ಕೆ.ಐ.ಐ.ಟಿ ಭುವನೇಶ್ವರ ಒಡಿಸ್ಸಾ, ಹೇಮಚಂದಯಾದವ ವಿ.ವಿ. ಚತ್ತೀಸ್ಗಡ್. ಗಂಗಾಧರ ಮೆಹರ್ ವಿ.ವಿ. ಒಡಿಸ್ಸಾ, ಪಂಡಿತ್ ರವಿಶಂಕರ ಶುಕ್ಲ ವಿ.ವಿ. ಚತ್ತೀಸ್ಗಡ್) ಒಳಗೊಂಡಿವೆ. ಪಂದ್ಯಾಟಗಳು ಲೀಗ್ / ನಾಕೌಟ್ ಆಧಾರದಲ್ಲಿ ನಡೆಯಲಿದ್ದು ಭಾರತದ ವಿವಿಧ ಭಾಗಗಳಿಂದ 20 ಅಧಿಕಾರಿಗಳು ಇಡೀ ಪಂದ್ಯಾಕೂಟದಲ್ಲಿ ಹಾಜರಿರುವರು.

ಸ್ಪರ್ಧೆಯ ಸುಗಮ ಕಲಾಪಕ್ಕಾಗಿ ವಿವಿಧ ಉಪಸಮಿತಿಗಳನ್ನು ರಚಿಸಿದ್ದು ಅಧಿಕಾರಿಗಳು, ಆಟಗಾರರು, ತಂಡದ ನಿರ್ವಾಹಕರು ಮತ್ತು ತರಬೇತಿದಾರರಿಗಾಗಿ ಉಚಿತ ವಸತಿ, ಊಟದ ವ್ಯವಸ್ಥೆ ಇದೆ.

ಎಪ್ರಿಲ್ 9ರಂದು ಬೆಳಗ್ಗೆ 10.30ಕ್ಕೆ ಶ್ರೀ ಅದಮಾರು ಮಠದ ಹಿರಿಯ ಯತಿವರ್ಯರಾದ ಪರಮಪೂಜ್ಯ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಸಂಸ್ಥೆಯ ಅಧ್ಯಕ್ಷರಾಗಿರುವ ಪರಮಪೂಜ್ಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿಯವರು ಪಂದ್ಯಾಕೂಟಕ್ಕೆ ಚಾಲನೆ ನೀಡಲಿದ್ದು ಉಡುಪಿ-ಚಿಕ್ಕಮಗಳೂರು ಸಂಸರಾದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ವಿಧಾನಸಭಾ ಸದಸ್ಯರಾದ ಯಶಪಾಲ ಸುವರ್ಣ, ಕಾಪು ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ, ಉಡುಪಿ ಅದಮಾರು ಮಠ ಶಿಕ್ಷಣ ಸಂಸ್ಥೆ ಬೆಂಗಳೂರು ಇದರ ಗೌರವ ಕಾರ್ಯದರ್ಶಿ ಡಾ. ಎ.ಪಿ.ಭಟ್, ಕರ್ನಾಟಕ ಸರಕಾರದ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಕಾಲೇಜು ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ. ಜಿ.ಎಸ್. ಚಂದ್ರಶೇಖರ್, ಗೌರವ ಖಜಾಂಜಿ ಸಿ.ಎ., ಪ್ರಶಾಂತ್ ಹೊಳ್ಳೆ, ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಪ್ರೊ. ಕಿಶೋರ್ ಕುಮಾರ್ ಸಿ.ಕೆ., ಪ್ರಾಂಶುಪಾಲರಾದ ಡಾ. ರಾಮು ಎಲ್.. ಹಾಗೂ ವಿಶೇಷ ಆಹ್ವಾನಿತರಾಗಿ ಕೆ. ಅಣ್ಣಾಮಲೈ, ಮಾಜಿ ಐಪಿಎಸ್ ಅಧಿಕಾರಿ, ಶ್ರೀ ಕೃಷ್ಣನ್ ಹೆಚ್. ಎಂ.ಡಿ.. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕರ್ಣಾಕಟ ಬ್ಯಾಂಕ್ ಲಿಮಿಟೆಡ್, ಮಂಗಳೂರು, ಮಂಗಳೂರು ವಿ.ವಿ. ಉಪಕುಲಪತಿ ಪ್ರೋ. ಪಿ.ಎಲ್.ಧರ್ಮ ಸಮಾರಂಭದ ಅಧ್ಯಕ್ಷತೆ ವಹಿಸುವರು.

ಎಪ್ರಿಲ್ 12 ರಂದು ಬೆಳಗ್ಗೆ 11.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು ಮಂಗಳೂರು ವಿ.ವಿ. ಕುಲಸಚಿವರಾದ ರಾಜುಮೊಗವೀರ, ಕೆಎಎಸ್, ಮಾಜಿ ಮಂತ್ರಿಗಳಾದ ವಿನಯಕುಮಾರ್ ಸೊರಕೆ. ಕೆ. ಜಯಪ್ರಕಾಶ ಹೆಗ್ಡೆ, ಉದ್ಯಮಿ ಪ್ರಸಾದರಾಜ್ ಕಾಂಚನ್, ಗೌರವ ಕಾರ್ಯದರ್ಶಿ ಡಾ. ಜಿ.ಎಸ್. ಚಂದ್ರಶೇಖರ್, ಗೌರವ ಖಜಾಂಜಿ ಸಿ.ಎ., ಪ್ರಶಾಂತ್ ಹೊಳ್ಳ, ಪೂರ್ಣಪ್ರಜ್ಞ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾದ ಡಾ. ಶ್ರೀರಮಣ ಐತಾಳ್, ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಸಂಸ್ಥೆ, ಉಡುಪಿ, ಆಡಳಿತಾಧಿಕಾರಿ ಡಾ. ಶ್ರೀಧರ್ ರಾವ್, ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆ ಅದಮಾರು, ಗೌರವ ಖಜಾಂಜಿ ಸಿ.ಎ.. ಗಣೇಶ್ ಹೆಬ್ಬಾರ್, ಪ್ರಾಂಶುಪಾಲರಾದ ಡಾ.ರಾಮು ಎಲ್., ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಇವರು ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿರುವರು. ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಸಂಸ್ಥೆ ಇದರ ಗೌರವ ಕಾರ್ಯದರ್ಶಿ ಡಾ. ಎ.ಪಿ. ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಜೆರಾಲ್ಡ್ ಸಂತೋಷ್ ಡಿಸೋಜಾ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮು ಎಲ್, ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್ ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments