ಏಪ್ರಿಲ್ 27 ರೊಳಗೆ ಪಡಿತರ ಪಡೆಯಿರಿ- ಜಿಲ್ಲಾಧಿಕಾರಿ ಜಿ.ಜಗದೀಶ್

Spread the love

ಏಪ್ರಿಲ್ 27 ರೊಳಗೆ ಪಡಿತರ ಪಡೆಯಿರಿ- ಜಿಲ್ಲಾಧಿಕಾರಿ ಜಿ.ಜಗದೀಶ್

 ಜಿಲ್ಲೆಯ ಪಡಿತರ ಚೀಟಿದಾರರ ಗಮನಕ್ಕೆ ತರುವುದೇನೆಂದರೆ, ನ್ಯಾಯಬೆಲೆ ಅಂಗಡಿಗಳಲ್ಲಿ ಮೇ 2020 ರ ಮಾಹೆಯಲ್ಲಿ, ಪ್ರಧಾನ ಮಂತ್ರಿ ಗರೀಬ್ ಅನ್ನ ಯೋಜನೆಯಡಿ, ಏಪ್ರಿಲ್ 2020 ಮತ್ತು ಮೇ 2020 ರ ಪಡಿತರವನ್ನು , ಏಪ್ರಿಲ್ 2020 ರ ಮಾಹೆಯ ಅಂತ್ಯದೊಳಗೆ ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಮಾಡಬೇಕಿರುವುದರಿಂದ , ಪಡಿತರ ಚೀಟಿದಾರರು ಏಪ್ರಿಲ್ 27 ರ ಒಳಗೆ , ಏಪ್ರಿಲ್ 2020 ರ ಪಡಿತರವನ್ನು ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೆ ಪಡಿತರ ವಿತರಣೆ- ಜಿಲ್ಲಾಧಿಕಾರಿ ಜಿ.ಜಗದೀಶ್

 ಜಿಲ್ಲೆಯಲ್ಲಿ ಈಗಾಗಲೇ ಆದ್ಯತಾ (ಬಿಪಿಎಲ್) ಮತ್ತು ಆದ್ಯತೇತರ (ಎಪಿಎಲ್) ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ, ವಿಲೇವಾರಿಗೆ ಬಾಕಿ ಇರುವ ಅರ್ಜಿದಾರರು, ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರವನ್ನು ಪಡೆಯಬಹುದಾಗಿದೆ.

ಬಿಪಿಎಲ್ ಪಡಿತರ ಚೀಟಿದಾರರಿಗೆ ಪ್ರತಿ ಅರ್ಜಿಗೆ 10 ಕೆಜಿ ಯಂತೆ ಅಕ್ಕಿಯನ್ನು ಉಚಿತವಾಗಿ ಮತ್ತು ಎಪಿಎಲ್ ಪಡಿತರ ಚೀಟಿ ಅರ್ಜಿದಾರರಿಗೆ ಪ್ರತಿ ಅರ್ಜಿಗೆ 15 ರೂ ದರದಲ್ಲಿ 10 ಕೆಜಿ ಅಕ್ಕಿಯನ್ನು ಪಡೆಯಬಹುದಾಗಿದೆ.
ಅರ್ಜಿದಾರರು ಅರ್ಜಿ ಸಲ್ಲಿಸಿದ ಬಗ್ಗೆ ತಮ್ಮಲ್ಲಿ ಇರುವ ಅರ್ಜಿಯ ಪ್ರತಿಯನ್ನು ಹಾಗೂ ಆಧಾರ್ ಕಾರ್ಡ್ನ್ನು ನ್ಯಾಯಬೆಲೆ ಅಂಗಡಿಗೆ ಹಾಜರುಪಡಿಸಿ ಅಕ್ಕಿಯನ್ನು ಪಡೆಯಬಹುದಾಗಿದೆ.

ಒಂದು ವೇಳೆ ಹಾಜರುಪಡಿಸಿದ ಅರ್ಜಿದಾರರ ಆಧಾರ್ ಸಂಖ್ಯೆ , ಬೇರೆ ಯಾವುದೇ ಚಾಲ್ತಿ ಪಡಿತರ ಚೀಟಿಯಲ್ಲಿ ಜೋಡಣೆಯಾಗಿದ್ದಲ್ಲಿ ಅಂತಹ ಅರ್ಜಿಗಳಿಗೆ ಪಡಿತರವನ್ನು ವಿತರಿಸಲು ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.


Spread the love