Home Mangalorean News Kannada News ಏರ್ ಸ್ರೈಕ್ಟ್ ನಲ್ಲಿದ್ದ ಯೋಧರಿಗೆ ಧನ್ಯವಾದ ಅರ್ಪಿಸಿದ ಶಾಸಕ ವೇದವ್ಯಾಸ ಕಾಮತ್

ಏರ್ ಸ್ರೈಕ್ಟ್ ನಲ್ಲಿದ್ದ ಯೋಧರಿಗೆ ಧನ್ಯವಾದ ಅರ್ಪಿಸಿದ ಶಾಸಕ ವೇದವ್ಯಾಸ ಕಾಮತ್

Spread the love
RedditLinkedinYoutubeEmailFacebook MessengerTelegramWhatsapp

ಏರ್ ಸ್ರೈಕ್ಟ್ ನಲ್ಲಿದ್ದ ಯೋಧರಿಗೆ ಧನ್ಯವಾದ ಅರ್ಪಿಸಿದ ಶಾಸಕ ವೇದವ್ಯಾಸ ಕಾಮತ್

ಮಂಗಳೂರು: ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದಂತೆ ಮಾಡಿ ತೋರಿಸಿದ್ದಾರೆ. ಫೂಲ್ವಾಮಾದಲ್ಲಿ ಯೋಧರ ಬಲಿದಾನವನ್ನು ಸುಮ್ಮನೆ ವ್ಯರ್ಥವಾಗಲು ಬಿಡುವುದಿಲ್ಲ. ಪ್ರತೀಕಾರ ಮಾಡಲು ಬದ್ಧ ಎಂದು ಹೇಳಿದ್ದನ್ನು ಹಾಗೆ ಮಾಡಿ ತೋರಿಸಿದ್ದಾರೆ. ಅವರಿಗೆ ಶತಶತ ನಮನಗಳು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಏರ್ ಸ್ಟ್ರೈಕ್ ನಡೆದ ಯಶಸ್ಸನ್ನು ಬಿಜೆಪಿ ಕಾರ್ಯಕರ್ತರೊಂದಿಗೆ ಹಂಚಿಕೊಂಡು ಸಂಭ್ರಮಿಸಿದ ಬಳಿಕ ಮಾತನಾಡಿದ ಶಾಸಕ ಕಾಮತ್ ಅವರು ಈ ಏರ್ ಸ್ಟ್ರೈಕ್ ನಂತರ ಪಾಕಿಸ್ತಾನಕ್ಕೆ ಭಾರತದ ಸಾಮರ್ತ್ಯದ ಅರಿವಾಗಿದೆ. ಹಿಂದಿನ ಸರಕಾರಗಳು ನಮ್ಮ ಯೋಧರ ಪ್ರಾಣಾರ್ಪಣೆ ಆದಾಗ ಕೇವಲ ಖಂಡನಾ ಹೇಳಿಕೆಗಳನ್ನು ಮಾತ್ರ ನೀಡುತ್ತಿದ್ದವು. ಆದರೆ ಈ ಬಾರಿ ಮೋದಿ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿ ಅದರ ಜಂಘಾಬಲವನ್ನೇ ಹುದುಗಿಸಿಬಿಟ್ಟಿದ್ದಾರೆ. ಇದರಿಂದ ಚೇತರಿಸಿಕೊಳ್ಳಲು ಪಾಕಿಸ್ತಾನಕ್ಕೆ ಸದ್ಯ ಸಾಧ್ಯವಾಗುವುದಿಲ್ಲ. ಮೋದಿಯವರು ತಮ್ಮ 56 ಇಂಚಿನ ಎದೆಯ ಸಾಮರ್ತ್ಯ ಪ್ರಪಂಚಕ್ಕೆ ತೋರಿಸಿಕೊಟ್ಟಿದ್ದಾರೆ. ಈ ಘಟನೆಯ ನಂತರ ಮೋದಿಯವರ ಬಗ್ಗೆ ಜನರಿಗೆ ಇದ್ದ ವಿಶ್ವಾಸ ದ್ವಿಗುಣವಾಗಿದೆ, ಏರ್ ಸ್ಟ್ರೈಕ್ ನಲ್ಲಿ ಭಾಗವಹಿಸಿದ ಎಲ್ಲಾ ಯೋಧರಿಗೆ ಹೃದಯಪೂರ್ವಕ ನಮನಗಳು ಎಂದು ಶಾಸಕ ಕಾಮತ್ ಹೇಳಿದ್ದಾರೆ


Spread the love
RedditLinkedinYoutubeEmailFacebook MessengerTelegramWhatsapp

Exit mobile version