ಏ 5: ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ 29ನೇ ಪದವಿ ಪ್ರದಾನ

Spread the love

ಏ 5: ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ 29ನೇ ಪದವಿ ಪ್ರದಾನ

ಮಂಗಳೂರು : ಫಾದರ್ ಮುಲ್ಲರ್ ಸೇವಾ ಸಂಸ್ಥೆಯಘಟಕವಾಗಿರುವ ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತುಆಸ್ಪತ್ರೆಯಹೋಮಿಯೋಪಥಿ ವೈದ್ಯಕೀಯ ಪದವಿ ಹಾಗೂ ಹೋಮಿಯೋಪಥಿ ಸ್ನಾತಕೋತ್ತರ ವಿದ್ಯಾರ್ಥಿಗಳ 29ನೇ ಪದವಿ ಪ್ರದಾನ ಸಮಾರಂಭವನ್ನುದಿನಾಂಕ: 05-04-2019 ರಂದು ಫಾದರ್ ಮುಲ್ಲರ್ಕನ್ವೆನ್ಸನ್ ಸೆಂಟರ್, ಕಂಕನಾಡಿ, ಮಂಗಳೂರಿನ ಸಭಾಂಗಣದಲ್ಲಿ ಆಯೋಜಿಸಿದೆ.

ಫಾದರ್ ಮುಲ್ಲರ್ ಸೇವಾ ಸಂಸ್ಥೆಯು “ಗುಣಪಡಿಸು ಮತ್ತು ಸಾಂತ್ವನಿಸು” ಎಂಬ ಧ್ಯೇಯೋಕ್ತಿಯೊಂದಿಗೆ ಕಳೆದ 139 ವರ್ಷಗಳಿಂದ ಸಾಮಾಜಿಕ ಹಾಗೂ ಆರೋಗ್ಯ ಸೇವೆಯನ್ನು ನೀಡುತ್ತಿದೆ. ಈ ಮಹಾವಿದ್ಯಾಲಯವು ಹೋಮಿಯೋಪಥಿ ವೈದ್ಯಕೀಯ ಪದವಿ ಹಾಗೂ ಹೋಮಿಯೋಪಥಿ ಸ್ನಾತಕೋತ್ತರ ಪದವಿಯಲ್ಲಿ 7 ವಿಶೇಷತೆಗಳನ್ನು ಹೊಂದಿರುವ ಏಕೈಕ ಮಹಾವಿದ್ಯಾಲಯವಾಗಿದೆ ಹಾಗೂ ಹಲವಾರು ಸಂಶೋಧನಾ ಚಟುವಟಿಕೆಗಳಲ್ಲಿ ಸಂಸ್ಥೆಯ ಶಿಕ್ಷಕ ಸಿಬ್ಬಂದಿ, ಹೋಮಿಯೋಪಥಿ ಸ್ನಾತಕೋತ್ತರರು ಮತ್ತು ಪದವಿ ವಿದ್ಯಾರ್ಥಿಗಳು ತೊಡಗಿಕೊಂಡಿದ್ದು ಹೋಮಿಯೋಪಥಿಯನ್ನು ದೇಶದಾದ್ಯಂತ ಪಸರಿಸಲು ಶ್ರಮಿಸುತ್ತಿದ್ದಾರೆ.

ನ್ಯಾಶನಲ್ಅಸೆಸ್ಮೆಂಟ್ಅಂಡ್ಆ್ಯಕ್ರಿಡೆಶನ್ಕೌನ್ಸಿಲ್ನಿಂದ (ಓಂಂಅ) ‘ಂ” ಗ್ರೇಡ್ ಮಾನ್ಯತೆಯನ್ನು ಪಡೆದಿರುವ ಎಕೈಕ ಹಾಗೂ ರಾಜೀವ್ಗಾಂಧಿಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಅಡಿಯಲ್ಲಿ ಪ್ರಪ್ರಥಮ ಹೋಮಿಯೋಪಥಿ ವೈದ್ಯಕೀಯ ಮಹಾ ವಿದ್ಯಾಲಯವಾಗಿದೆಎಂಬುದುಒಂದು ಹೆಮ್ಮೆಯ ವಿಷಯವಾಗಿದೆ.

ಈ ದಿನದಂದು 73 ಹೋಮಿಯೋಪಥಿ ಪದವಿ ಹಾಗೂ 27 ಹೋಮಿಯೋಪಥಿ ಸ್ನಾತಕೋತ್ತರ ವಿದ್ಯಾರ್ಥಿಗಳು ಪದವಿಯನ್ನು ಸ್ವೀಕರಿಸಲಿರುವರು.ಕರ್ನಾಟಕರಾಜೀವ್ಗಾಂಧಿಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಡೆಸಿದ ಪರೀಕ್ಷೆಯಲ್ಲಿಉತ್ತಮ ಶ್ರೇಣಿಯನ್ನು ಹಾಗೂ ರಾಜೀವ್ಗಾಂಧಿಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಘೋಷಿಸುವ ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು.ಪ್ರಸಕ್ತ ವರ್ಷದಲ್ಲಿ 6 ಹೋಮಿಯೋಪಥಿ ಪದವಿ ವಿದ್ಯಾರ್ಥಿಗಳು ಹಾಗೂ 6 ಹೋಮಿಯೋಪಥಿ ಸ್ನಾತಕೋತ್ತರ ವಿದ್ಯಾರ್ಥಿಗಳು ರ್ಯಾಂಕ್ಗಳನ್ನು ಗಳಿಸಿದ್ದಾರೆ ಮತ್ತು 6 ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಗಳಿಸಿರುತ್ತಾರೆ.ಫಾದರ್ ಮುಲ್ಲರ್ ಹೋಮಿಯೋಪಥಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು 176 ರ್ಯಾಂಕ್ಗಳನ್ನು ಗಳಿಸಿರುತ್ತಾರೆ.

ಈ ಸಮಾರಂಭವು ಮಧ್ಯಾಹ್ನ 2.30 ರಿಂದ ಪ್ರಾರಂಭಗೊಳ್ಳಲಿದ್ದು ಡಾ| ಎಸ್. ಸಚ್ಚಿನಾನಂದ, ಗೌರವಾನ್ವಿತ ಉಪಕುಲಪತಿ, ರಾಜೀವ್ಗಾಂಧಿಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ ಬೆಂಗಳೂರು ಇವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಂಗಳೂರು ಪ್ರಾಂತ್ಯದಧರ್ಮಾಧ್ಯಕ್ಷರು ಹಾಗೂ ಫಾದರ್ಮುಲ್ಲರ್ ಸೇವಾ ಸಂಸ್ಥೆಯಅಧ್ಯಕ್ಷರಾದಅತೀ ವಂದನೀಯಡಾ| ಪೀಟರ್ ಪಾವ್ಲ್ ಸಲ್ದಾನಾ, ಇವರು ಈ ಕಾರ್ಯಕ್ರಮದಅಧ್ಯಕ್ಷತೆ ವಹಿಸಲಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ವಂದನೀಯ ಫಾದರ್ರಿಚರ್ಡ್ ಅಲೋಶಿಯಸ್ ಕುವೆಲ್ಲೊ, ನಿರ್ದೇಶಕರು, ಫಾದರ್ ಮುಲ್ಲರ್ ಸೇವಾ ಸಂಸ್ಥೆ, ಕಂಕನಾಡಿ, ವಂದನೀಯ ಫಾದರ್ ವಿನ್ಸೆಂಟ್ ಸಲ್ದಾನ, ಆಡಳಿತಾಧಿಕಾರಿ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತುಆಸ್ಪತ್ರೆ.ವಂದನೀಯ ಫಾದರ್ ಸಿಲ್ವೆಸ್ಟರ್ ಲೋಬೊ ಉಪ ಆಡಳಿತಾಧಿಕಾರಿ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತುಆಸ್ಪತ್ರೆ, ಡಾ| ಶಿವಪ್ರಸಾದ್ ಕೆ.ಪ್ರಾಂಶುಪಾಲರು, ಡಾ| ಇ.ಎಸ್. ಜೆ.ಪ್ರಭುಕಿರಣ್ ಉಪಪ್ರಾಂಶುಪಾಲರು, ಡಾ| ಗಿರೀಶ್ ನಾವಡ, ಉಪ ವೈದ್ಯಕೀಯಅಧೀಕ್ಷಕರು, ಡಾ| ಶ್ರೀನಾಥ್ ರಾವ್, ಮುಖ್ಯಸ್ಥರು, ಮೇಟಿರಿಯಾ ಮೆಡಿಕ ವಿಭಾಗ, ಡಾ| ಎಂ.ಕೆ.ಕಾಮತ್, ಸಲಹಾಗಾರರು, ಸ್ನಾತಕೋತ್ತರ ಪದವಿ ಶಿಕ್ಷಣ ವಿಭಾಗ,ಡಾ| ಜಸಿಂತ ಮೊಂತೆರೋ, ಸಂಯೋಜಕರು, ಸ್ನಾತಕೋತ್ತರ ಪದವಿ ಶಿಕ್ಷಣ ವಿಭಾಗಹಾಗೂ ಡಾ| ವಿಲ್ಮ ಡಿಸೋಜ, ಪದವಿ ಪ್ರದಾನ ಸಮಾರಂಭದ ಸಂಯೋಜಕರು ಉಪಸ್ಥಿತರಿದ್ದರು.


Spread the love