ಐದು ಮಂದಿ ಅಂತರಾಜ್ಯ ಅಕ್ರಮ ದನದ ಮಾಂಸ ಸಾಗಾಟಗಾರರ ಬಂಧನ
ಮಂಗಳೂರು: ಡಿಸಿಐಬಿ ಪೊಲೀಸ್ ನಿರೀಕ್ಷಕರಾದ ಸುನಿಲ್. ವೈ. ನಾಯ್ಕ್. ರವರ ನೇತೃತ್ವದಲ್ಲಿ ಡಿಸಿಐಬಿ ಸಿಬ್ಬಂದಿಗಳು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 5 ಮಂದಿ ಅಂತರ್ ರಾಜ್ಯ ಅಕ್ರಮ ದನದ ಮಾಂಸ ಸಾಗಾಟಗಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಬಂಟ್ವಾಳ ನಿವಾಸಿ ಮಹಮ್ಮದ್ ಕಬೀರ್, ಕುದ್ರೋಳಿ ನಿವಾಸಿ ಮುಸ್ತಾಕ್ ಮತ್ತು ಅಬ್ದುಲ್ ಜಬ್ಬಾರ್ ಎಂದು ಗುರುತಿಸಲಾಗಿದೆ.
ಡಿಸಿಐಬಿ ಪೊಲೀಸ್ ನಿರೀಕ್ಷಕರಾದ ಸುನಿಲ್. ವೈ. ನಾಯ್ಕ್. ರವರ ನೇತೃತ್ವದಲ್ಲಿ ಡಿಸಿಐಬಿ ಸಿಬ್ಬಂದಿಗಳು ರಾತ್ರಿ ರೌಂಡ್ಸ್ ಕರ್ತವ್ಯ ದಲ್ಲಿ ಬಿಸಿರೋಡ್, ಪುಂಜಾಲಕಟ್ಟೆ,ಸಂಚರಿಸಿ ಕೊಂಡು ಎಪ್ರಿಲ್ 16 ರಂದು ಬೆಳಗ್ಗಿನ ಜಾವ 04.೦೦ ಗಂಟೆಯ ಸಮಯಕ್ಕೆ ಗುರುವಾಯನಕೆರೆ ಜಂಕ್ಷನ್ ಬಳಿ ತಲುಪಿದಾಗ ಬೆಳ್ತಂಗಡಿ ಕಡೆಯಿಂದ ಒಂದು ಮಹಿಂದ್ರ ಝೈಲೋ ಕಾರು ಬರುತ್ತಿದ್ದು ಅದನ್ನು ನಿಲ್ಲಿಸಿ ಪರಿಶೀಲಿಸಿ ನೋಡಿದಾಗ ಅದರಲ್ಲಿ ಮೂರು ಜನರಿದ್ದು.ಅದರಲ್ಲಿ ಅವರುಗಳು ಅಕ್ರಮವಾಗಿ ದನದ ಮಾಂಸವನ್ನು ಸಾಗಾಣಿಕೆ ಮಾಡುವುದಾಗಿ ತಿಳಿಸಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಅವರಿಂದ ಮಹೀಂದ್ರಾ ಝೈಲೊ KA 19 MG9885 ನ್ನು ಮತ್ತು 450 kg ಮಾಂಸವನ್ನು ವಶಕ್ಕೆ ಪಡೆದು ಮುಂದಿನ ಕ್ರಮದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ನಂತರ ರೌಂಡ್ಸ್ ಕರ್ತವ್ಯದಲ್ಲಿ ಬೆಳ್ತಂಗಡಿ. ಗುರುವಾಯನಕೆರೆ ವೇಣೂರು ಕಡೆ ಸಂಚರಿಸಿಕೊಂಡು ಕುಕ್ಕೇಡಿ ತಲುಪಿದಾಗ ಗುರುವಾಯನಕೆರೆ ಕಡೆಯಿಂದ ಒಂದು ಬಿಳಿ ಬಣ್ಣದ ಮಹಿಂದ್ರ ಬೊಲೆರೊ ವಾಹನವೊಂದು ಬಂದದ್ದನ್ನು ನಿಲ್ಲಿಸಿ ಪರಿಶೀಲಿಸಿ ದಾಗ ಅದರಲ್ಲಿ ಎರಡು ಜನರಿದ್ದು ಅವರು ಅಕ್ರಮವಾಗಿ ದನದಮಾಂಸವನ್ನು ಇಟ್ಡುಕೊಂಡು ಸಾಗಾಣಿಕೆ ಮಾಡುತ್ತಿದ್ದ ರಝೀಮ್, ಮತ್ತು ಅಶ್ರಫ್ ಅವರನ್ನು ಬಂಧಿಸಿ ಸದರಿಯವರಿಂದ KA19MF 7653 ನೇ ಬೋಲೆರೋ ವಾಹನ, 400kg ದನದ ಮಾಂಸ, ವನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ವೇಣೂರು ಠಾಣೆಗೆ ಹಸ್ತಾಂತರಿಸಲಾಗಿದೆ
ಸದರಿ ಎರಡು ಪ್ರಕರಣಗಳಲ್ಲಿ ಐದು ಜನ ಆರೋಪಿಗಳನ್ನು ಮತ್ತು ಒಂದು ಮಹಿಂದ್ರ ಝೈಲೋ, ಒಂದು ಮಹಿಂದ್ರ ಬೊಲೋರೊ ವಾಹನ ಮತ್ತು ಸುಮಾರು 850 kg ದನದ ಮಾಂಸ,ಐದು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಡು ಮೌಲ್ಯ ಸುಮಾರು 14.25/- ಲಕ್ಷ ದ ವಸ್ತುಗಳನ್ನು ವಶಕ್ಕೆ ಪಡೆದು ಕೊಂಡಿರುತ್ತಾರೆ.
ಕಾರ್ಯಾಚರಣೆಯಲ್ಲಿ ಡಿಸಿಐಬಿ ಪೊಲೀಸ್ ನಿರೀಕ್ಷಕರಾದ ಸುನಿಲ್ ವೈ ನಾಯಕ್ ,ಸಿಬ್ಬಂದಿ ಗಳಾದ ವಾಸು ನಾಯ್ಕ್, ಲಕ್ಷ್ಮಣ ಕೆಜಿ, ಉದಯ ರೈ, ಪ್ರವೀಣ ಕೆ, ಇಕ್ಬಾಲ್ ಎಇ, ತಾರನಾಥ.ಎಸ್, ಪಳನಿವೇಲು, ಮತ್ತು ಚಾಲಕರಾದ ವಿಜಯಗೌಡ ಭಾಗವಹಿಸಿದ್ದರು.