Home Mangalorean News Kannada News ಐಪಿಎಲ್ ಬೆಟ್ಟಿಂಗ್ ದಂಧೆ: ಪ್ರಕರಣ ದಾಖಲು

ಐಪಿಎಲ್ ಬೆಟ್ಟಿಂಗ್ ದಂಧೆ: ಪ್ರಕರಣ ದಾಖಲು

Spread the love

ಐಪಿಎಲ್ ಬೆಟ್ಟಿಂಗ್ ದಂಧೆ: ಪ್ರಕರಣ ದಾಖಲು

ಉಡುಪಿ: ಮೊಬೈಲ್ ಆ್ಯಪ್ ಮೂಲಕ ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಹಲವು ಮಂದಿಯ ವಿರುದ್ದ ಉಡುಪಿ ಸೆನ್ ಪೊಲೀಸ್ ಠಾಣೆಯ್ಲಲಿ ಪ್ರಕರಣ ದಾಖಲಾಗಿದೆ.

ಮೇ 8 ರಂದು ಉಡುಪಿ ಸೆನ್ ಅಪರಾಧ ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್ ಅವರಿಗೆ ಕುಂದಾಪುರ ನಗರದ ಗಾಂಧಿ ಮೈದಾನದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಸುದರ್ಶನ್ ಮತ್ತು ಕರ್ತವ್ಯ ಇವರು ಜೊತೆಯಾಗಿ ಸೇರಿಕೊಂಡು PARKER ಎಂಬ ಬೆಟ್ಟಿಂಗ್ ಮೊಬೈಲ್ ಅಪ್ಲಿಕೇಶನ್ ಆ್ಯಪ್ನ ಸಹಾಯದಿಂದ ತಮ್ಮಲ್ಲಿರುವ ಸ್ಮಾರ್ಟ್ಫೋನ್ ಮೂಲಕ SRH (ಸನ್ರೈಸರ್ಸ್ ಹೈದರಾಬಾದ್) ಮತ್ತು LSG (ಲಕ್ನೋ ಸೂಪರ್ ಜೈಂಟ್ಸ್) ತಂಡಗಳ ನಡುವೆ ನಡೆಯುವ IPL T20 ಕ್ರಿಕೆಟ್ ಮ್ಯಾಚ್ಗೆ ಸಂಬಂಧಪಟ್ಟು ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಾ ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ಮಾಹಿತಿ ದೊರಕಿದ್ದು, ಅಲ್ಲದೇ ಇವರು ಬೆಟ್ಟಿಂಗ್ನಲ್ಲಿ ಸಂಗ್ರಹ ಮಾಡಿದ ಹಣವನ್ನು ಪಡೆದುಕೊಂಡು ಹೋಗಲು ಸ್ಥಳಕ್ಕೆ ಹೆಬ್ರಿ ನಿವಾಸಿ ತೇಜಸ್ ಎಂಬಾತನು ಬರುವ ಬಗ್ಗೆ ಮಾಹಿತಿ ಇರುತ್ತದೆ. ತೇಜಸ್ ಈತನು ಸುದರ್ಶನ್, ಕರ್ತವ್ಯ ಮತ್ತು ಇನ್ನೂ ಕೆಲವರಿಗೆ ಈ ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನನ್ನು ಡೌನ್ಲೋಡ್ ಮಾಡಿಕೊಡುವ ಬಗ್ಗೆ ಮಾಹಿತಿ ಇರುತ್ತದೆ.

ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 31/2024 ಕಲಂ: 78 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.


Spread the love

Exit mobile version