Home Mangalorean News Kannada News ಐವನ್ ಡಿ’ಸೋಜಾ ಹಿಂದೂವಾಗಿ ಮತಾಂತರವಾಗಿ ದೀಪಾವಳಿ ಆಚರಿಸಲಿ: ವಿಎಚ್ ಪಿ

ಐವನ್ ಡಿ’ಸೋಜಾ ಹಿಂದೂವಾಗಿ ಮತಾಂತರವಾಗಿ ದೀಪಾವಳಿ ಆಚರಿಸಲಿ: ವಿಎಚ್ ಪಿ

Spread the love

ಐವನ್ ಡಿ’ಸೋಜಾ ಹಿಂದೂವಾಗಿ ಮತಾಂತರವಾಗಿ ದೀಪಾವಳಿ ಆಚರಿಸಲಿ: ವಿಎಚ್ ಪಿ
ಮಂಗಳೂರು: ಐವನ್ ಡಿ’ಸೋಜಾ ಅವರಿಗೆ ದೀಪಾವಳಿ ಆಚರಣೆ ಮಾಡಲೇ ಬೇಕೆಂಬ ಅಪೇಕ್ಷೆ ಇದ್ದರೆ ಮೊದಲು ಹಿಂದುವಾಗಿ ಮತಾಂತರವಾಗಿ ಬಳಿಕ ಕದ್ರಿ ಮಂಜುನಾಥೇಶ್ವರ ದೇವಳದಲ್ಲಿ ಭಾವೈಕ್ಯದ ದೀಪಾವಳಿ ಆಚರಿಸಲಿ ಎಂದು ವಿಶ್ವ ಹಿಂದೂ ಪರಿಷದ್ ನಾಯಕ್ ಜಗದೀಶ್ ಶೇಣವ ಸವಾಲು ಹಾಕಿದ್ದಾರೆ.

ಈ ಕುರಿತು ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕದ್ರಿ ದೇವಸ್ಥಾನ ಹಿಂದೂಗಳಿಗೆ ಅತ್ಯಂತ ಪವಿತ್ರ ದೇವಸ್ಥಾನವಾಗಿದ್ದು, ಎರಡು ದಿನಗಳ ಹಿಂದೆ ಹಿಂದೂವಲ್ಲದ ವ್ಯಕ್ತಿಯೋರ್ವರು ಭಾವೈಕ್ಯದ ದೀಪಾವಳಿ ಆಚರಿಸುವುದಾಗಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದೆ. ದೀಪಾವಳಿ ಎಲ್ಲಾ ಸಮುದಾಯದವರು ಆಚರಿಸುವ ಹಬ್ಬ ಆದರೆ ಕೆಲವರು ಅದನ್ನು ರಾಜಕೀಯಗೊಳಿಸಿ ಹಿಂದೂ ಸಮಾಜವನ್ನು ಒಡೆಯುವ ಕೆಲಸ ಮಾಡಲು ಹೊರಟಿದ್ದಾರೆ.

image001vhp-diwali-ivan-pressmeet-mangalorean-com-20161026-001

ರಾಜ್ಯ ಸರಕಾರ ಹಿಂದೂಗಳ ಭಾವನೆಯೊಂದಿಗೆ ಆಟವಾಡುತ್ತಿದೆ. ಉಡುಪಿಯಲ್ಲಿ ಪೇಜಾವರ ಸ್ವಾಮಿಗಳ ಹೆಸರು ಕೆಡಿಸುವ ಕೆಲಸ ಮಾಡಲಾಯಿತು. ನಾವು ದೀಪಾವಳಿ ಆಚರಣೆಯನ್ನು ವಿರೋಧಿಸುತ್ತಿಲ್ಲ ಆದರೆ ಅನ್ಯಧರ್ಮಿಯರು ದೇವಳದಲ್ಲಿ ಇತರ ಧಾರ್ಮಿಕ ನಾಯಕರನ್ನು ಕರೆಸಿ ಆಚರಿಸುವುದನ್ನು ವಿರೋಧಿಸುತ್ತೇವೆ. ಹಾಗಾದರೆ ಕ್ರಿಸ್ಮಸ್ ಮತ್ತು ಈದ್ ಹಬ್ಬವನ್ನು ಚರ್ಚು ಅಥವಾ ಮಸೀದಿಯಲ್ಲಿ ಇತರ ಧರ್ಮದವರನ್ನು ಕರೆದು ಆಚರಿಸಲಿ ಎಂದು ಸವಾಲು ಹಾಕಿದರು. ಯಾವುದೇ ಕಾರಣಕ್ಕೂ ಅನ್ಯಧರ್ಮಿಯ ವ್ಯಕ್ತಿಗೆ ದೇವಳದಲ್ಲಿ ನಾವು ದೀಪಾವಳಿ ಆಚರಣೆಗೆ ಅವಕಾಶ ನೀಡುವುದಿಲ್ಲ. ನಾವು ಕಾರ್ಯಕ್ರಮದ ಬಗ್ಗೆ ದೇವಳದ ಆಡಳಿತ ಮಂಡಳಿಯನ್ನು ವಿಚಾರಿಸಿದಾಗ ಕೇವಲ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ. ಒರ್ವ ಹಿಂದೂ ದೇವಳದಲ್ಲಿ ಆಚರಣೆ ನಡೆಸಿದರೆ ನಮ್ಮ ವಿರೋಧವಿಲ್ಲ ಅದಕ್ಕೆ ಬದಲಾಗಿ ಅನ್ಯಧರ್ಮಿಯರು ದೇವಳದಲ್ಲಿ ಅಕ್ಕಿ ವಿತರಣೆ, ಚಿತ್ರ ಬಿಡಿಸುವ ಸ್ಪರ್ದೇ ಆಯೋಜಿಸುವುದಕ್ಕೆ ನಮ್ಮ ಸ್ಪಷ್ಟ ವಿರೋಧವಿದೆ. ಕೆಲವೊಂದು ರಾಜಕೀಯ ನಾಯಕರು ಹಿಂದೂಗಳ ದೇವಳಗಳ ಲಾಭಪಡೆಯುವ ಯತ್ನ ನಡೆಸುತ್ತಿದ್ದಾರೆ. ಒಂದು ವೇಳೆ ಜಿಲ್ಲಾಧಿಕಾರಿ ಅನ್ಯಧರ್ಮಿಯರಾಗಿದ್ದರೆ ಅವರು ಕೇವಲ ಮುಜರಾಯಿ ದೇವಳದ ಟ್ರಸ್ಟಿಯಾಗಬಹುದೇ ವಿನಃ ಆಡಳಿತದಲ್ಲಿ ಹಸ್ತಕ್ಷೇಪಕ್ಕೆ ಅವಕಾಶ ಇಲ್ಲ ಎಂದರು.

ಒರ್ವ ಹಿಂದೂಯೇತರ ಐವನ್ ಹೇಗೆ ಜನರಿಗೆ ದೇವಸ್ಥಾನದಲ್ಲಿ ದೀಪಾವಳಿ ಆಚರಣೆಗೆ ಕರೆ ನೀಡುವುದು ಹೇಗೆ? ಕದ್ರಿ ದೇವಳ ಕೇವಲ ಹಿಂದೂಗಳಿಗೆ ಮಾತ್ರ ಸೀಮಿತ ವಾಗಿದ್ದು ಅಂತಹ ಆಚರಣೆ ವಿಶೇಷ ಆಸೆಯಿದ್ದರೆ ಐವನ್ ಡಿ’ಸೋಜಾ ಹಿಂದೂವಾಗಿ ಮತಾಂತರವಾಗಲಿ ಆಗ ನಾವು ಅವರಿಗೆ ಅವಕಾಶ ನೀಡುತ್ತೇವೆ. ಕ್ರೈಸ್ತರು ಮೂರ್ತಿ ಪೂಜೆಯ ವಿರೋಧಿಗಳು, ಹಾಗಿದ್ದರೆ ಐವನ್ ದೀಪಾವಳಿಯನ್ನು ಅವರ ಚರ್ಚಿನಲ್ಲಿ ಆಚರಿಸಿ ತೋರಿಸಲಿ ನಾವು ಭಾಗವಹಿಸುತ್ತೇವೆ ಎಂದರು. ರಮಾನಾಥ ರೈ ದೀಪಾವಳಿ ಆಚರಣೆ ಮಾಡುತ್ತೇನೆ ಎಂದು ಹಿಂದೂಗಳನ್ನು ಕರೆಯಲಿ ನಾವು ಭಾಗವಹಿಸುತ್ತೇವೆ ಅದಕ್ಕೆ ಬದಲಾಗಿ ಐವನ್ ನಮ್ಮನ್ನು ಕರೆಯಲು ಯಾರು ಎಂದು ಪ್ರಶ್ನಿಸಿದರು.

ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ಕಾರ್ಯಕ್ರಮ ನಿಲ್ಲಿಸಲು ಸೂಚಿಸಲಾಗಿದೆ. ಅಲ್ಲದೆ ವಿಎಚ್ಪಿ ಹಾಗೂ ಬಜರಂಗದಳ ಸದಸ್ಯರು ಪೋಲಿಸ್ ಆಯುಕ್ತ ಚಂದ್ರಶೇಖರ್ ಅವರಿಗೂ ಕೂಡ ಮಾಹಿತಿ ನೀಡಲಾಗಿದೆ ಎಂದರು.

ಶರಣ್ ಪಂಪ್ ವೆಲ್, ಡಾ ಭರತ್ ಶೆಟ್ಟಿ, ಗೋಪಾಲ್ ಕುತ್ತಾರ್, ಕಿಶೋರ್, ಹರೀಶ್ ಪೂಂಜಾ, ಭುಜಂಗ ಕುಲಾಲ್ ಇತರರು ಉಪಸ್ಥಿತರಿದ್ದರು.


Spread the love
1 Comment
Inline Feedbacks
View all comments
Dsouza
8 years ago

Dear shenava, please don’t try to fool people. Mangalore is a good place, where we always find Unity and diversity, all your people studying in convent and Christians institutions, we have not objected.

Like Hindu or Christian, all religions are one, so don’t destroy the peace and harmony of Mangalore.

wpDiscuz
Exit mobile version