ಐಷಾರಾಮಿ ಬೈಕು ಕಳ್ಳರನ್ನು ಬಂಧಿಸಿದ ಪೋಲಿಸರು; ರೂ. 40ಲಕ್ಷ ಮೌಲ್ಯದ ಸೊತ್ತು ವಶ
ಮಂಗಳೂರು: ಲಕ್ಷಾಂತರ ರೂಪಾಯಿ ಬೆಲೆ ಬಾಳುವ ರಾಯಲ್ ಎನ್ ಫೀಲ್ಡ್ ಬುಲೇಟ್, ಕೆ ಟಿ ಎಮ್ , ಯಮಹಾ, ಬಜಾಜ್ ಪಲ್ಸರ್, ಸುಜುಕಿ ಮೋಟಾರು ಸೈಕಲ್ ಕಂಪನಿಯ ಐಷರಾಮಿ ದ್ವಿ ಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ 3 ಜನ ಆರೋಪಿಗಳು ಮತ್ತು ಕಾನೂನಿನೊಂದಿಗೆ ಸಂಘರ್ಷಕ್ಕಿಳಿದ 5 ಜನರ ಬಾಲಕರನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತರನ್ನು ಕೇರಳದ ಕಣ್ಣೂರು ಜಿಲ್ಲೆಯ ಅರ್ಜುನ್ ಕೆಬಿ (18), ರೋಬಿನ್ ಬೇಬಿ (22) ಮತ್ತು ಟಿಜೋ ಜೋಸೆಪ್ @ ಅಗಸ್ಟಿನ್ (25) ಎಂದು ಗುರುತಿಸಲಾಗಿದೆ. ಇನ್ನುಳಿದ 5 ಹುಡುಗರು ಕಾನೂನಿನೊಂದಿಗೆ ಸಂಘರ್ಷಕ್ಕಿಳಿದ ಬಾಲಕರಾಗಿರುತ್ತಾರೆ.
ಮಂಗಳೂರು ಕೇಂದ್ರ ಉಪ ವಿಭಾಗ ವಿಭಾಗದ ಠಾಣೆಗಳಲ್ಲಿ ಮತ್ತು ನಗರದ ಇತರ ಠಾಣೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ದ್ವಿ ಚಕ್ರ ವಾಹನಗಳ ಕಳವು ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳ ಪತ್ತೆಯ ಕುರಿತಂತೆ ಮಂಗಳೂರು ಕೇಂದ್ರ ಉಪ ವಿಭಾಗದ ಮಂ.ಉತ್ತರ ಪೊಲೀಸ್ ಠಾಣೆ ಮತ್ತು ಮಂ.ಪೂರ್ವ ಪೊಲೀಸ್ ಠಾಣೆಯ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ಕಳೆದ ಒಂದು ವಾರದಿಂದ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕೊಂಡು ಪತ್ತೆ ಕಾರ್ಯದಲ್ಲಿ ನಿರತರಾಗಿ ಬೈಕ್ ಕಳ್ಳತನ ಮಾಡಿದ 3 ಜನ ಆರೋಪಿಗಳನ್ನು ಮತ್ತು ಕಾನೂನಿನೊಂದಿಗೆ ಸಂಘರ್ಷಕ್ಕಿಳಿದ 5 ಜನ ಬಾಲಕರನ್ನು ದಸ್ತಗಿರಿ ಮಾಡಿರುತ್ತಾರೆ.
ಆರೋಪಿಗಳನ್ನು ಮತ್ತು ಬಾಲಕರನ್ನು ವಿಚಾರಿಸಿದಾಗ ಇವರು ಶೋಕಿ ಜೀವನ ನಡೆಸುವ ಸಲುವಾಗಿ ಸುಲಭದಲ್ಲಿ ಹಣ ಗಳಿಸುವ ಉದ್ದೇಶದಿಂದ ದುಬಾರಿ ಬೆಲೆಯ ವಿವಿಧ ಮಾದರಿಯ ಬೈಕ್ ಗಳನ್ನು ಕಳ್ಳತನ ಮಾಡುವ ಉದ್ದೇಶದಿಂದ ವಿವಿಧ ದಿನಗಳಲ್ಲಿ ಬೇರೆ ಬೇರೆ ಬೈಕ್ ಗಳಲ್ಲಿ, ರೈಲ್ ನಲ್ಲಿ ಮತ್ತು ಚವರ್ ಲೇಟ್ ತವೇರಾ ಕಾರು ಮತ್ತು ಇನೋವ ಕಾರಿನಲ್ಲಿ ಎಲ್ಲರೂ ಸೇರಿ ಒಟ್ಟಾಗಿ ಮಂಗಳೂರಿಗೆ ಬಂದು ಮಧ್ಯ ರಾತ್ರಿ ವೇಳೆಯಲ್ಲಿ ಮಂಗಳೂರು ನಗರದ ರಸ್ತೆ ಬದಿಯಲ್ಲಿ ರಾಯಲ್ ಎನ್ ಪೀಲ್ಡ್ ಬೈಕ್, ಕೆ ಟಿ ಎಮ್ ನಂತಹ ಲಕ್ಷಾಂತರ ರೂಪಾಯಿ ಮೌಲ್ಯದ ಬೈಕ್ ಗಳನ್ನು ಕಳವು ಮಾಡಿಕೊಂಡು ಮೋಟಾರು ಸೈಕಲ್ ಗಳನ್ನು ಕೊಂಡು ಹೋಗಿ ಕೇರಳದ ಕಾಂಞಗಾಡ್ ನ ಉನೈಸ್ ಎಂಬಾತನಿಗೆ ಮತ್ತು ಪಯ್ಯವೂರಿನ ಚಂದನಿಕಪಾರ ಎಂಬಲ್ಲಿರುವ ಗ್ಯಾರೇಜ್ ನ ಆಗಸ್ಟೀನ್ @ ಟಿ ಜೋ ಜೋಸೆಪ್ ಮತ್ತು ಎಬಿನ್ ರವರಿಗೆ ಹಾಗೂ ಪಯ್ಯವೂರಿನ ರೋಬಿನ್ ಬೇಬಿ ಎಂಬವರಿಗೆ ಮಾರಾಟ ಮಾಡಿದ್ದು, ಅವರಿಂದ ಬೈಕ ಗಳನ್ನು ಸ್ವಾದೀನ ಪಡಿಸಿ ಕೊಳ್ಳಲಾಗಿದೆ.
ಬಂಧಿತ ಆರೋಪಿಗಳಿಂದ ವಶಪಡಿಸಿಕೊಂಡ ಸೊತ್ತುಗಳು:- 7-ರೋಯಲ್ ಎನ್ ಪೀಲ್ಡ್ ಬುಲೇಟ್ , 2 – ಕೆ ಟಿ ಎಮ್ ಬೈಕ್, 1- ಯಮಹಾ ಆರ್ಒನ್ ಪೈವ್ ಬೈಕ್, 1 – ಸುಜುಕಿ ಜಿಕ್ಷರ್ ಬೈಕ್, 1- ಬಜಾಜ್ ಆರ್ ಎಸ್ ಬೈಕ್ , 2- ಬಜಾಜ್ ಪಲ್ಸರ್ 200 ಬೈಕ್, 2 -ಎಫ್ ಜೆಡ್ ಬೈಕ್, 1- ಯಮಹಾ 135 , ಒಟ್ಟು –17 ದ್ವಿ ಚಕ್ರ ವಾಹನ ಗಳನ್ನು ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ ಚಾವರ್ ಲೇಟ್ ತವೇರಾ ಕಾರು -1 ( ಅಂದಾಜು ಮೌಲ್ಯ 5 ಲಕ್ಷ), ಇನೋವ ಕಾರು-1 (ಅಂದಾಜು ಮೌಲ್ಯ 9 ಲಕ್ಷ) ಸ್ವಾಧೀನ ಪಡಿಸಿದ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ: ಅಂದಾಜು 40 ಲಕ್ಷ ರೂಪಾಯಿಗಳು ಆಗಿರುತ್ತದೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಎಮ್ ಜಗದೀಶ್ ಸಹಾಯಕ ಪೊಲೀಸ್ ಆಯುಕ್ತರು ಮಂಗಳೂರು ಕೇಂದ್ರ ವಿಭಾಗರವರ ನೇತೃತ್ವದಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆ ಮತ್ತು ಉತ್ತರ ಠಾಣೆಯ ವಿಶೇಷ ತಂಡದ ಮಂಗಳೂರು ಉತ್ತರ ಠಾಣಾ ಪೊಲೀಸ್ ನಿರೀಕ್ಷಕರಾದ ಯೋಗಿಶ್ ಕುಮಾರ್ ಬಿಸಿ, ಮಂಗಳೂರು ಪೂರ್ವ ಠಾಣಾ ಪಿಎಸ್ ಐ (ಕ್ರೈಂ) ನೀತು ಆರ್ ಗುಡೆ, ಎ.ಎಸ್.ಐ ಅನಂತ ಮುರುಡೇಶ್ವರ, ಮತ್ತು ಸಿಬ್ಬಂದಿಗಳಾದ ವೆಂಕಟೇಶ್, ಜಯಾನಂದ, ಉಮೇಶ್ ಕೊಟ್ಟಾರಿ, ಗಿರೀಶ್ ಜೋಗಿ, ಗಿರೀಶ್ ಕುಂಬ್ಳೆ, ಅಜಿತ್ ಮಾಥ್ಯೂ, ಆಶಿತ್ ಕಿರಣ್, ಪ್ರಶಾಂತ್ ಶೆಟ್ಟಿ, ಶಿವಪ್ಪ, ಕಿಶೋರ್ ಸುರೇಂದ್ರ, ದೇವಿ ಪ್ರಸಾದ್, ಸತೀಶ್ ಉತ್ತರ ಠಾಣೆಯ ದಯಾನಂದ, ವಾಸು, ಸುಜನ್, ಬಸವರಾಜ್ ಚಾಲಕರಾದ ಗುರುರಾಜ್ ರವರು ಆರೋಪಿಗಳ ಪತ್ತೆ ಕಾರ್ಯದಲ್ಲಿ ಬಾಗವಹಿಸಿದ್ದರು. ಇವರ ಕಾರ್ಯವನ್ನು ಪೊಲೀಸ್ ಆಯುಕ್ತರು ಪ್ರಶಂಸಿರುತ್ತಾರೆ ಹಾಗೂ ಉತ್ತಮ ಕೆಲಸ ಮಾಡಿದ ಈ ತಂಡದವರಿಗೆ ಬಹುಮಾನ ನೀಡುವುದಾಗಿ ತಿಳಿಸಿರುತ್ತಾರೆ.