ಐಸಿವೈಎಮ್ ಉಡುಪಿ ಧರ್ಮಪ್ರಾಂತ್ಯದ ಯುವ ಸಮ್ಮೇಳನ- ಯುವ ದಬಾಜೋ 2024

Spread the love

ಐಸಿವೈಎಮ್ ಉಡುಪಿ ಧರ್ಮಪ್ರಾಂತ್ಯದ ಯುವ ಸಮ್ಮೇಳನ- ಯುವ ದಬಾಜೋ 2024

ಉಡುಪಿ : ಭಾರತೀಯ ಕಥೋಲಿಕ್ ಯುವ ಸಂಚಲನ (ICYM), ಉಡುಪಿ ಧರ್ಮ ಪ್ರಾಂತ್ಯದ ನೇತ್ರತ್ವದಲ್ಲಿ ‘ಯುವ ದಬಾಜೋ 2024’ ಯುವ ಸಮ್ಮೇಳನವನ್ನು ಉದ್ಯಾವರದ ಕ್ಸೇವಿಯರ್ ಸಭಾಭವನದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಈ ವಾರ್ಷಿಕ ಕಾರ್ಯಕ್ರಮವು ಧರ್ಮಪ್ರಾಂತ್ಯದ ವಿವಿಧ ಚರ್ಚುಗಳಿಂದ ಯುವಕರನ್ನು ಒಟ್ಟುಗೂಡಿಸಿ ಪ್ರತಿಭೆಗಳ ಪ್ರದರ್ಶನ ಮತ್ತು ಯುವಕರ ನಡುವೆ ಉತ್ತಮ ಭಾಂದವ್ಯವನ್ನು ರೂಪಿಸುವ ಉದ್ದೇಶ ಹೊಂದಿತ್ತು.

ಉಡುಪಿ ವಲಯದ ಪ್ರಧಾನ ಧರ್ಮ ಗುರುಗಳಾದ ವಂ. ಫಾ. ಚಾರ್ಲ್ಸ್ ಮಿನೇಜಸ್ ಇತರ ಧರ್ಮ ಗುರುಗಳೊಂದಿಗೆ ಪೂಜಾ ವಿಧಿಯ ಮುಖಾಂತರ ಉದ್ಘಾಟಿಸಿದರು.

ಬಳಿಕ ಘಟಕ ಹಂತದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಈ ಸ್ಪರ್ಧೆಗಳು ಸೃಜನಶೀಲತೆ ಮತ್ತು ತಂಡದ ಕೆಲಸವನ್ನು ತೋರಿಸಲು ವಿನ್ಯಾಸಗೊಳ್ಳುತ್ತವೆ. ಬೆಳಿಗ್ಗೆ ಏರ್ಪಡಿಸಲಾದ ಈ ಸ್ಪರ್ಧೆಗಳಲ್ಲಿ ಕ್ರಿಯಾತ್ಮಕ ನಡಿಗೆ (creative walk), ಭವಿಷ್ಯಾವಾಣಿ ಕಲೆ (futuristic art), ಹೂ ಕುಂಡ (flower carpet) ಮತ್ತು ಮೆದುಳಿನ ಅಲೆ (Brain wave)ಎಂಬ ಹಂತಗಳನ್ನು ಒಳಗೊಂಡವು.

ಬಹು ನಿರೀಕ್ಷಿತ ಬ್ಯಾಂಡ್ ಹೋರಾಟ (Battle of Band) ಸ್ಪರ್ಧೆ ನೆರವೇರಿತು. ಸಂಗೀತ ಹಾಗೂ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸಿದರು.

ಯುವ ದಬಾಜೋ ಕಾರ್ಯಕ್ರಮದಲ್ಲಿ ಕಣಜಾರ್ ಘಟಕ ಚಾಂಪಿಯನ್ ಹಾಗೂ ಪೆರಂಪಳ್ಳಿ ಘಟಕ ರನ್ನರ್ಸ್ ವಿಜೇತರಾಗಿ ಹೊರಹೊಮ್ಮಿದವು. ಬ್ಯಾಂಡ್ ಹೋರಾಟದ ಉನ್ನತ ಗೌರವಗಳನ್ನು ಕಲ್ಯಾಣ್ಪುರ ವಲಯ ಪ್ರಥಮ ಸ್ಥಾನ, ಉಡುಪಿ ವಲಯ ಎರಡನೇ ಸ್ಥಾನ ಮತ್ತು ಕಾರ್ಕಳ ವಲಯ ಮೂರನೇ ಸ್ಥಾನ ಪಡೆದವು.

ಸಮಾರೋಪ ಸಮಾರಂಭದಲ್ಲಿ ಉಡುಪಿ ವಲಯದ ಪ್ರಧಾನ ಧರ್ಮಗುರು ವಂ. ಫಾ. ಚಾರ್ಲ್ಸ್ ಮಿನೇಜಸ್, ಉದ್ಯಾವರದ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ವಂ. ಪಾ. ಅನಿಲ್ ಡಿ’ಸೋಜಾ, ಸಹಾಯಕ ಧರ್ಮಗುರು ವಂ. ಸ್ಟೀವನ್ ಫೆರ್ನಾಂಡಿಸ್, ಉಡುಪಿ ಧರ್ಮ ಪ್ರಾಂತ್ಯದ ಐಸಿವೈಎಂ ನಿರ್ದೇಶಕ ವo. ಫಾ. ಸ್ಟೀವನ್ ಫೆರ್ನಾoಡೀಸ್, ಯುವ ನ್ಯಾಯವಾದಿ ರಾಯನ್ ಫೆರ್ನಾಂಡಿಸ್, ಐಸಿವೈಎಂ ಕರ್ನಾಟಕ ಪ್ರದೇಶದ ಅಧ್ಯಕ್ಷೆ ವಿಲೀನ ಗೋನ್ಸಾಲ್ವಿಸ್, ಪಾಲನ ಮಂಡಳಿಯ ಉಪಾಧ್ಯಕ್ಷರಾದ ಲಾರೆನ್ಸ್ ಡೆಸಾ, ಯುವ ಆಯೋಗದ ಸಂಚಾಲಕಿ ಪ್ರಿಯಾ ಫುರ್ಟ್ತಾಡೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಡುಪಿ ಧರ್ಮ ಪ್ರಾಂತ್ಯದ ಐಸಿವೈಎಂ ಅಧ್ಯಕ್ಷ ಗೋಡ್ವಿನ್ ಮಸ್ಕರೇನಸ್ ಸ್ವಾಗತಿಸಿ, ಉಪಾಧ್ಯಕ್ಷ ಮರ್ವಿನ್ ಅಲ್ಮೇಡಾ ಧನ್ಯವಾದ ಸಮರ್ಪಿಸಿದರು. ಕಾರ್ಯದರ್ಶಿ ರಿಯಾ ಅರಾನ್ನ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಉಡುಪಿ ಧರ್ಮ ಪ್ರಾಂತ್ಯದ 800ಕ್ಕೂ ಅಧಿಕ ಯುವಜನರು ಭಾಗವಹಿಸಿದ್ದರು.


Spread the love
Subscribe
Notify of

0 Comments
Inline Feedbacks
View all comments