Home Mangalorean News Gulf News ಐ.ಎಸ್.ಸಿ. ಅಬುಧಾಬಿಯಲ್ಲಿ ಗೌ. ಶೇಖ್‍ ಝಾಯದ್ ಸುಲ್ತಾನ್‍ ಅಲ್ ನಯ್ಯಾನ್‍ ಜನ್ಮಶತಾಬ್ಧಿ ವರ್ಷಾಚರಣೆ ಉದ್ಘಾಟನೆ

ಐ.ಎಸ್.ಸಿ. ಅಬುಧಾಬಿಯಲ್ಲಿ ಗೌ. ಶೇಖ್‍ ಝಾಯದ್ ಸುಲ್ತಾನ್‍ ಅಲ್ ನಯ್ಯಾನ್‍ ಜನ್ಮಶತಾಬ್ಧಿ ವರ್ಷಾಚರಣೆ ಉದ್ಘಾಟನೆ

Spread the love

ಐ.ಎಸ್.ಸಿ. ಅಬುಧಾಬಿಯಲ್ಲಿ ಗೌ. ಶೇಖ್‍ ಝಾಯದ್ ಸುಲ್ತಾನ್‍ ಅಲ್ ನಯ್ಯಾನ್‍ ಜನ್ಮಶತಾಬ್ಧಿ ವರ್ಷಾಚರಣೆ ಉದ್ಘಾಟನೆ

ಇಂಡಿಯಾ ಸೋಶಿಯಲ್ ಅಂಡ್‍ ಕಲ್ಚರಲ್ ಸೆಂಟರ್‍ ಅಬುಧಾಬಿಯಲ್ಲಿ ವರ್ಷಪೂರ್ತಿ ನಡೆಸಲು ಯೋಜಿಸಿದ ಗೌ. ಶೇಖ್‍ ಝಾಯದ್ ಸುಲ್ತಾನ್‍ ಅಲ್ ನಯ್ಯಾನ್‍ ಜನ್ಮಶತಾಬ್ಧಿ ವರ್ಷಾಚರಣೆ ಮತ್ತು ಐ.ಎಸ್.ಸಿ. 51ನೇ ವಾರ್ಷಿಕೋತ್ಸವ 2018 ಮೇ 3ನೇ ತಾರೀಕು ಗುರುವಾರ ರಾತ್ರಿ 8 ಗಂಟೆಗೆ ಜ್ಯೋತಿ ಬೆಳಗುವುದರ ಮೂಲಕ ವರ್ಣರಂಜಿತ ಸಮಾರಂಭದಲ್ಲಿ ಅದ್ಧೂರಿಯಾಗಿ ಉದ್ಘಾಟಿಸಲಾಯಿತು. ಪ್ರಧಾನ ಕಾರ್ಯದರ್ಶಿ ಶ್ರೀ ಈಪನ್ ಮಮ್ಮುಟ್ಟಿ ಸರ್ವರನ್ನು ಸ್ವಾಗತಿಸಿದರು.

ಐ ಎಸ್. ಸಿ. ಆಡಳಿತ ಮಂಡಳಿಯ ಚೇರ್ಮನ್ ಹಾಗೂ ಲುಲು ಗ್ರೂಪ್‍ ಇಂಟನ್ರ್ಯಾಶನಲ್ ವ್ಯವಸ್ಥಾಪಕ ನಿರ್ದೇಶಕರಾದ ಪದ್ಮಶ್ರೀ ಪುರಸ್ಕೃತ ಡಾ. ಯೂಸಫ್ ಎಂ. ಎ. ಹಾಗೂ ವೈಸ್‍ಚೇರ್ಮನ್ ಮತ್ತುಎನ್. ಎನ್.ಎಂ.ಸಿ. ಹೆಲ್ತ್‍ಕೇರ್ ಸ್ತಾಪಕರು, ಚೇರ್ಮನ್ ಪದ್ಮಶ್ರೀ ಪುರಸ್ಕೃತಡಾ. ಬಿ. ಆರ್. ಶೆಟ್ಟಿಯವರ ಸಮ್ಮುಖದಲ್ಲಿ ಭಾರತೀಯ ರಾಯಬಾರಿ ಕಛೇರಿ ಪ್ರಥಮ ಕಾರ್ಯದರ್ಶಿ ಶ್ರೀ ದಿನೇಶ್‍ ಕುಮಾರ್ ಗೌ. ಶೇಖ್‍ ಝಾಯದ್ ಸುಲ್ತಾನ್‍ ಅಲ್ ನಯ್ಯಾನ್‍ ಜನ್ಮಶತಾಬ್ಧಿ ವರ್ಷಾಚರಣೆಗೆ ಚಾಲನೆ ನೀಡಿದರು.

ಐ.ಎಸ್.ಸಿ.ಯ ನೂತನ ಅಧ್ಯಕ್ಷರಾದ ಶ್ರೀ ರಮೇಶ್ ವಿ. ಪಣಿಕರ್‍ತಮ್ಮ ಪ್ರಾಸ್ತವಿಕ ಭಾಷಣದಲ್ಲಿ ಐ.ಎಸ್.ಸಿ. ನಡೆದು ಬಂದ ಹಾದಿ ಮತ್ತು ಮುಂದಿನ ಕಾರ್ಯಯೋಜನೆಗಳ ಬಗ್ಗೆ ಭಾಷಣದಲ್ಲಿ ವಿವರಿಸಿದರು.

ಚೇರ್ಮನ್‍ ಡಾ. ಯೂಸುಫ್ ಎಂ. ಎ. ನೂತನ ಆಡಳಿತ ಮಂಡಳಿಗೆ ಶುಭವನ್ನು ಹಾರೈಸಿದರು. ವೈಸ್‍ ಚೇರ್ಮನ್‍ ಡಾ. ಬಿ. ಆರ್. ಶೆಟ್ಟಿಯವರು ಎಲ್ಲಾ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯಅತಿಥಿಯಾಗಿ ಅಗಮಿಸಿದ ಶ್ರೀ ದಿನೇಶ್‍ ಕುಮಾರ್ ಶುಭ ಸಂದೇಶ ನೀಡಿದರು.

ನೂತನ ಪದಾಧಿಕಾರಿಗಳ ಪದಗ್ರಹಣ

ಚೇರ್ಮನ್‍ಡಾ. ಯೂಸುಫ್ ಎಂ. ಎ. ಪ್ರತಿಜ್ಞಾವಿದಿ ಭೋದಿಸಿದರು.

ಐ.ಎಸ್.ಸಿ.ಯ ನೂತನ ಗೌ. ಅಧ್ಯಕ್ಷರಾದ ಶ್ರೀ ರಮೇಶ್ ವಿ. ಪಣಿಕರ್, ಗೌ. ಉಪಾಧ್ಯಕ್ಷರು ಶ್ರೀ ಜಯರಾಮ್‍ರೈ, ಗೌ. ಪ್ರಧಾನ ಕಾರ್ಯದರ್ಶಿ ಶ್ರೀ ಈಪನ್ ಮಮ್ಮುಟ್ಟಿ, ಗೌ. ಸಹಕಾರ್ಯದರ್ಶಿ ಶ್ರೀ ದಿಲಿಪ್ ಕುಮಾರ್, ಗೌ. ಖಜಾಂಚಿ ಶ್ರೀ ದಿಲಿಪ್ ಕುಮಾರ್, ಸಹಖಜಾಂಚಿ ಶ್ರೀ ಶ್ರೀನಿವಾಸುಲು, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ಶ್ರೀಕುಮಾರ್ ಗೋಪಿನಾಥ್, ಕ್ರೀಡಾ ಕಾರ್ಯದರ್ಶಿ ಶ್ರೀ ರಮೇಶನ್, ಕಾರ್ಯದರ್ಶಿ ಪೂರ್ವ ಪ್ರಾಂತ್ಯ-ಶುಭಾಂಕರ್‍ಘೋಷ್, ಕಾರ್ಯದರ್ಶಿ ಪಶ್ಚಿಮ – ಚೈತನ್ಯ ಮಹಾವೀರ್ ಶಾಹ, ಕಾರ್ಯದರ್ಶಿ ಉತ್ತರ ಪ್ರಾಂತ್ಯ – ಶ್ರೀ ಅಲೋಕ್‍ತುತೆಜಾ, ಕಾರ್ಯದರ್ಶಿ ದಕ್ಷಿಣ ಪ್ರಾಂತ್ಯ – ಮಹಮ್ಮದ್ ರಾಶೀದ್, ಆಡಿಟರ್ ಶ್ರೀ ಜಿ. ಎನ್. ಶಶಿಕುಮಾರ್, ಸಹ ಆಡಿಟರ್ ಶ್ರೀ ಮೆಯಿಅಪ್ಪನ್ ಪಳನಿಯಪ್ಪನ್.

ಸಭಾಕಾರ್ಯಕ್ರಮದ ನಂತರ ಬಾಲಿಹುಡ್‍ ಗಾಯಕಿ ಹಂಸಿಕಾ ಅಯ್ಯರ್ ಮತ್ತು ವಿಪಿನ್ ಅನೆಜ ಸಂಗೀತ ರಸಮಂಜರಿಡಾ. ನವ್ಯಅಯ್ಯರ್‍ತಂಡ ಮತ್ತು ರಾಜಸ್ಥಾನಿ ಜಾನಪದ ನೃತ್ಯ ಕಾರ್ಯಕ್ರಮ ನಡೆಯಿತು.

ಸಾಹಿಲ್ ಮತ್ತು ಡಾ ಅಪರ್ಣಾ ಕಾರ್ಯಕ್ರಮ ನಿರೂಪಣೆ ಮಾಡಿದರು.


Spread the love

Exit mobile version