ಐ.ಸಿವೈ.ಎಮ್. ಪೆರಂಪಳ್ಳಿ ಘಟಕದಿಂದ ಗಿಡ ನೆಡುವ ಕಾರ್ಯಕ್ರಮ
ಉಡುಪಿ: ಐ.ಸಿ.ವೈ.ಎಮ್ ಪೆರಂಪಳ್ಳಿ ಘಟಕ ಹಾಗೂ ಕ್ರಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ ಲಾವ್ದಾತೊ-ಸಿ ಧ್ಯೇಯದಡಿ ಕಾಳು ಮೆಣಸಿನ ಗಿಡ ನೆಡುವ ತರಬೇತಿ ಕಾರ್ಯಗಾರವು ಪೆರಂಪಳ್ಳಿ ಫಾತಿಮಾ ಮಾತೆಯ ದೇವಾಲಯದ ಆವರಣದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷರಾಗಿ ಚರ್ಚಿನ ಧರ್ಮಗುರುಗಳಾದ ವ| ಅನಿಲ್ ಡಿಸೋಜ,ಮುಖ್ಯ ಅಥಿತಿಯಾಗಿ ಪೆರಂಪಳ್ಳಿ ಕ್ರಷಿ ಸಂಘದ ಅಧ್ಯಕ್ಷರು ಸುಬ್ರಹ್ಮಣ್ಯ ಶಿರಿಯಾನ್, ಚರ್ಚ್ ಪಾಲನಾ ಮಂಡಳಿಯ ಸದಸ್ಯರಾದ ರೋಜಿ ವಿಲಿಯಂ ಪಿಂಟೊ, ಜೊಸ್ಸಿ ಪಿಂಟೊ, ಧರ್ಮಭಗಿನಿ ಸಿ| ಲೇನಿಟಾ ಡಿಸೋಜ ಹಾಗೆಯೇ ಐ.ಸಿ.ವೈ. ಎಮ್ ನ ಅಧ್ಯಕ್ಷರಾದ ಬೆನ್ಸನ್ ಡಿಸೋಜ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.
ಲಾವ್ದಾತೊ-ಸಿ ಪರಿಸರ ಸಂರಕ್ಷಣಾ ಧ್ಯೇಯದಡಿ ಐ.ಸಿ.ವೈ.ಎಮ್ ನ ಸದಸ್ಯರು ಸಂಪನ್ಮೂಲ ವ್ಯಕ್ತಿಯ ಸಂಪೂರ್ಣ ಮಾಹಿತಿಯಡಿ ಚರ್ಚ್ನ ತೋಟದಲ್ಲಿ ಕಾಳುಮೆಣಸು ಗಿಡ, ಹಾಗೆಯೇ ಇತರ ತರಕಾರಿಗಳ ಬೀಜ ಬಿತ್ತನೆ ಮಾಡುವ ಮೂಲಕ ಪರಿಸರದ ಕಾಳಜಿ ಹೆಚ್ಚಿಸುವಲ್ಲಿ ಸಫಲರಾದರು.