ಒಂಟಿ ಮಹಿಳೆಯರ ಸರ ಕಳ್ಳತನ ಮಾಡುತಿದ್ದ ಯುವಕರ  ಬಂಧನ

Spread the love

ಒಂಟಿ ಮಹಿಳೆಯರ ಸರ ಕಳ್ಳತನ ಮಾಡುತಿದ್ದ ಯುವಕರ  ಬಂಧನ

ಮಂಗಳೂರು ನಗರದಲ್ಲಿ ಒಂದೆರಡು ವರ್ಷಗಳಿಂದ ಜನರಹಿತ ಪ್ರದೇಶಗಳಲ್ಲಿ ನಡೆದುಕೊಂಡು ಹೋಗುವ ಒಂಟಿ ಮಹಿಳೆಯರ ಸರಗಳ್ಳತನ ಮಾಡುತ್ತಿದ್ದ ಮೂರು ಜನ ಯುವಕರನ್ನು ಬಂಧಿಸುವಲ್ಲಿ ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹದ ದಳದ ಪೊಲೀಸ್ ತಂಡ ಯಶಸ್ವಿಯಾಗಿರುತ್ತಾರೆ.
ಬಂಧೀತರನ್ನು ಮಂಗಳೂರು ಆಕಾಶಭವನ ನಿವಾಸಿ ಆಲ್ವಿನ್ ಡೊಮಿನಿಕ್ ಮಿರಾಂಡಾ (37), ಮನೀಷ್ ರಾಮ್ (20) ಮತ್ತು ದೇರಳಕಟ್ಟೆ ನಿವಾಸಿ ಅಶ್ವಿನ್ ಕೊರೆಯಾ (22) ಎಂದು ಗುರುತಿಸಲಾಗಿದೆ.
ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ದಳದ ಮತ್ತು ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಮತ್ತು ತಂಡವು ಮಂಗಳೂರು ನಗರದ ಜನ/ವಸತಿ ರಹಿತ ಪ್ರದೇಶಗಳಲ್ಲಿ ನಡೆದುಕೊಂಡು ಹೋಗುವ ಒಂಟಿ ಮಹಿಳೆಯರನ್ನು ಕೇಂದ್ರವಾಗಿರಿಸಿಕೊಂಡು, ಮೋಟಾರ್‌ ಸೈಕಲ್‌ಗಳಲ್ಲಿ ದಾರಿ ಕೇಳುವ ನೆಪದಲ್ಲಿ ಅವರ ಬಳಿ ಹೋಗಿ ಅವರ ಕುತ್ತಿಗೆಯಲ್ಲಿರುವ ಚಿನ್ನದ ಕರಿಮಣಿಸರ/ ಸರಗಳನ್ನು ಕಸಿದುಕೊಂಡು ಬೈಕ್‌‌ಗಳಲ್ಲಿ ಪರಾರಿಯಾಗುತ್ತಿದ್ದ ತಂಡದ ದೇರಳಕಟ್ಟೆಯಲ್ಲಿ ಕಾರ್ಯಾಚರಿಸುತ್ತಿದೆ ಎಂಬ ಮಾಹಿತಿಯ ಮೇರೆಗೆ ದೇರಳಕಟ್ಟೆಯ ಬಳಿ  ಆರೋಪಿಗಳನ್ನು ದಸ್ತಗಿರಿ ಮಾಡಿರುತ್ತಾರೆ.
 
ಆರೋಪಿಗಳು ಬೈಕ್‌ ಮತ್ತು ಸ್ಕೂಟರ್‌ಗಳಲ್ಲಿ ಓಡಾಡಿ, ಒಂಟಿ ಮಹಿಳೆಯರು ನಡೆದುಕೊಂಡು ಹೋಗುವಾಗ ಅವರ ಬಳಿಗೆ ದಾರಿ ಕೇಳುವ ನೆಪದಲ್ಲಿ ಹೋಗಿ, ಅವರ ಕುತ್ತಿಗೆಯಿಂದ ಒಡವೆಗಳನ್ನು ಸುಲಿಗೆ ಮಾಡುತ್ತಿದ್ದು, ಮಂಗಳೂರು ಗ್ರಾಮಾಂತರ ಠಾಣೆ, ಕಂಕನಾಡಿ ನಗರ ಠಾಣೆ, ಮಂಗಳೂರು ಪೂರ್ವ ಠಾಣೆ, ಕಾವೂರು ಠಾಣೆ, ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಒಟ್ಟು 6 ಸರ ಸುಲಿಗೆ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಆರೋಪಿಗಳಿಂದ ಚಿನ್ನದ ಕರಿಮಣಿ ಸರ ಮತ್ತು ಚಿನ್ನದ ಸರಗಳು, ಮೋಟಾರ್ ಸೈಕಲ್‌, ಸ್ಕೂಟರ್‌, ಮೊಬೈಲ್‌ ಪೋನ್‌ ಇತ್ಯಾದಿ ಸುಮಾರು 4,57,150 ರೂಪಾಯಿ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಟಿ.ಆರ್‌.ಸುರೇಶ್, ಐ.ಪಿ.ಎಸ್. ರವರ ನಿರ್ದೇಶನದಂತೆ, ಮಾನ್ಯರಾದ ಶ್ರೀ ಹನುಮಂತರಾಯ (ಐಪಿಎಸ್‌) ಡಿ.ಸಿ.ಪಿ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು  ಶ್ರೀಮತಿ ಉಮಾ ಪ್ರಶಾಂತ್, ಡಿ.ಸಿ.ಪಿ (ಅಪರಾಧ ಮತ್ತು ಸಂಚಾರ ವಿಭಾಗ) ರವರ ಮಾರ್ಗದರ್ಶನದಲ್ಲಿ  ಮಂಗಳೂರು ರೌಡಿ ನಿಗ್ರಹ ದಳದ ಎ.ಸಿ.ಪಿ. ಯವರು ಮತ್ತು ಮಂ. ಗ್ರಾಮಾಂತರ ಠಾಣೆಯ ಪಿಎಸ್ಐ ಸುಧಾಕರ್ ಸಿಬ್ಬಂದಿಯವರಾದ ಎ.ಎಸ್.ಐ ಸುಂದರ್ ಆಚಾರ್,  ಹೆಚ್ ಸಿ ಗಳಾದ  ಮೋಹನ್ ಕೆ ವಿ, ಗಿರೀಶ್ ಬೆಂಗ್ರೆ, , ಸುನೀಲ್ ಕುಮಾರ್, ರೆಜಿ ವಿ ಎಂ, ರವಿಚಂದ್ರ , ದಾಮೋದರ ,ರಾಜರಾಮ್ ಕೂಟತ್ತಜೆ, ಮಹೇಶ್ ಪಾಟಾಳಿ, ಮಹಮ್ಮದ್ ಶರೀಪ್ ನಾಟೆಕಲ್,ದಯಾನಂದ ಸಿರಿಯಾರ್, ಸುಧೀರ್  ಶೆಟ್ಟಿ,  ರವಿನಾಥ್, ನಂದೀಶ್  ಮತ್ತು ಮಹಮ್ಮದ್ ಇಕ್ಬಾಲ್   ಪತ್ತೆ ಕಾರ್ಯದಲ್ಲಿ ಬಾಗವಹಿಸಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತರು ರೌಡಿ ನಿಗ್ರಹದಳ ತಂಡದ ಈ ವತ್ತೆ ಕಾರ್ಯವನ್ನು  ಶ್ಲಾಘಿಸಿರುತ್ತಾರೆ.

Spread the love