Home Mangalorean News Kannada News ಒಂಟಿ ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ – ಆರೋಪಿಯ ಬಂಧನ

ಒಂಟಿ ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ – ಆರೋಪಿಯ ಬಂಧನ

Spread the love

ಒಂಟಿ ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ – ಆರೋಪಿಯ ಬಂಧನ

ಮಂಗಳೂರು: ಒಂಟಿ ಮಹಿಳೆಯ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ಹೆಣವನ್ನು ಸುಟ್ಟು ಹಾಕುವ ಪ್ರಯತ್ನ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪಾತೂರು ನಿವಾಸಿ ಮೊಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ.

ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಕಾಣತ್ತೂರು ಬೆಳ್ಳೇರಿಯಾ ಮನೆ ಎಂಬಲ್ಲಿ ವಾಸಿಸುತ್ತಿದ್ದ ಅವಿವಾಹಿತ ಮಹಿಳೆಯೋರ್ವರು ಸಪ್ಟೆಂಬರ್ 24 ರಂದು ಫೋನ್ ಕರೆ ಸ್ವೀಕರಿಸದೇ ಇದ್ದಾಗ, ಅವರ ಸಂಬಂಧಿಕರು ವಾಸದ ಮನೆಗೆ ಬಂದು ನೋಡಿದಾಗ ಮನೆಯ ಎರಡೂ ಬಾಗಿಲು ಭದ್ರವಾಗಿ ಮುಚ್ಚಿದೆ, ಮನೆಯ ಹಿಂಭಾಗದ ಕಿಟಕಿಯಿಂದ ಮಾಡಲಾಗಿ ಸದರಿ ಮಹಿಳೆ ಸುಟ್ಟು ಬಿದ್ದ ಸ್ಥಿತಿಯಲ್ಲಿ ಕಂಡು ಬಂದಿರುತ್ತದೆ.

ಈ ಮಾಹಿತಿ ಪಡೆದ ಕೊಣಾಜೆ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಮನೆಯ ಬಾಗಿಲನ್ನು ಮುರಿದು ಒಳ ಪ್ರವೇಶಿಸಿ ನೋಡಿದಾಗ ಮಹಿಳೆಯು ಮೃತಪಟ್ಟಿದ್ದು, ಯಾವುದೋ ದುರುದ್ದೇಶದಿಂದ ಅಪರಿಚಿತರು ಮಹಿಳೆಯನ್ನು ಕೊಲೆ ಮಾಡಿ ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಈ ಕೃತ ಎಸಗಿರುವುದು ಕಂಡು ಬಂದಿದ್ದು, ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖಾಧಿಕಾರಿ ಯಾದ ರಂಜಿತ್ ಕುಮಾರ್ ಬಂಡಾರು ಐ.ಪಿ.ಎಸ್, ಎ.ಸಿ.ಪಿ, ಮಂಗಳೂರು ದಕ್ಷಿಣ ಉಪವಿಭಾಗದ ರವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ, ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲು ಯಶಸ್ವಿಯಾಗಿರುತ್ತದೆ,

ಈ ಪ್ರಕರಣದ ಆರೋಪಿ ಮೊಹಮ್ಮದ್ ಅಶ್ರಫ್ ಮೃತ ಮಹಿಳೆಯ ಮನೆಯ ಹತ್ತಿರ ಕೆಲಸ ಮಾಡಿಕೊಂಡಿದ್ದು, ಸದರಿ ಮಹಿಳೆಯು ಅವಿವಾಹಿತೆ ಎಂದು ತಿಳಿದು, ಸದರಿಯವರ ಮನೆಯ ಆಸುಪಾಸಿನ ಜನರಿಂದ ಮಹಿಳೆಯ ಚಲನವಲನದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿರುತ್ತಾರೆ.

ಆರೋಪಿಯ ಮೊಹಮ್ಮದ್ ಅಶ್ರಫ್ ಮಹಿಳೆಯ ಮನೆಗೆ ಬಂದು, ಯಾರೂ ಇಲ್ಲದ ಸಮಯದಲ್ಲಿ ಮನೆಯ ಒಳಗೆ ಪ್ರವೇಶಿಸಿ, ಮಹಿಳೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿ ಹೆಣವನ್ನು ಸುಟ್ಟು ಹಾಕುವ ಪ್ರಯತ್ನ ಪಟ್ಟಿರುತ್ತಾರೆ. ನಂತರ ಮನೆಯಲ್ಲಿದ್ದ ಸುಮಾರು 18,000 ರೂ. ನಗದು ಹಣ ಮತ್ತು 2 ಚಿನ್ನದ ಓಲೆಯನ್ನು ತೆಗೆದುಕೊಂಡು ಹೋಗಿರುತ್ತಾನೆ

ಮಂಗಳೂರು ನಗರ ಪೊಲೀಸ್ ಆಯುಕ್ತರಾದ ವಿಕಾಸ್ ಕುಮಾರ್ ಐ.ಪಿ.ಎಸ್ ರವರ ನಿರ್ದೇಶನದಂತೆ, ಡಿ.ಸಿ.ಪಿ ರವರು ಗಳಾದ ಅರುನಾಂಗ್ಸು ಗಿರಿ ಐ.ಪಿ.ಎಸ್ ಮತ್ತು ವಿನಯ್ ಗಾಂವ್ವರ್ ರವರ ಮಾರ್ಗದರ್ಶನದಲ್ಲಿ ಎ.ಸಿ.ಪಿ ದಕ್ಷಿಣ ಉಪ ವಿಭಾಗದ ರಂಜಿತ್ ಬಂಡಾರು ರವರ ನೇತೃತ್ವದ ವಿಶೇಷ ತಂಡ ಈ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತದೆ. ಪ್ರಕರಣ ಆರೋಪಿತರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಇನ್ನು ಸ್ವಾಧೀನ ಪಡಿಸಲು ಹಾಗೂ ಇನ್ನೂ ಇತರ ಮಾಹಿತಿಯನ್ನು ಪಡೆಯಲು ಆರೋಪಿತರನ್ನು ಪ್ರಸ್ತುತ ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಕರಣ ತನಿಖೆಯಲ್ಲಿರುತ್ತದೆ.


Spread the love

Exit mobile version