Spread the love
ಒಂದು ವರ್ಷದ ಮಗುವಿನ ಗಂಟಲಲ್ಲಿ ಚಕ್ಕುಲಿ ಸಿಲುಕಿ ಸಾವು
ಬೆಳ್ತಂಗಡಿ: ಗಂಟಲಲ್ಲಿ ಚಕ್ಕುಲಿ ಸಿಕ್ಕಿ ಒಂದು ವರ್ಷದ ಪುಟ್ಟ ಕಂದ ಮೃತಪಟ್ಟ ಖೇದಕರ ಘಟನೆ ವರದಿಯಾಗಿದೆ. ತಾಲೂಕಿನ ಗೇರುಕಟ್ಟೆ ನಿವಾಸಿ ವಿಠಲ ಎಂಬವರ ಮಗ ಅರುಷ್ ಮೃತ ಬಾಲಕ.
ಮಗ ಅರುಷ್ಗೆ ಪೋಷಕರು ತಿನ್ನಲು ಚಕ್ಕುಲಿ ನೀಡಿದ್ದರು. ಮಗು ಚಕ್ಕುಲಿ ತುಂಡನ್ನು ನುಂಗಿದ ಪರಿಣಾಮ ಗಂಟಲಲ್ಲಿ ಸಿಲುಕಿಕೊಂಡು ಮಗುವಿಗೆ ಉಸಿರಾಟ ಕಷ್ಟವಾಗಿತ್ತು. ಮಗುವನ್ನು ಕೂಡಲೇ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿದರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
Spread the love