ಒಬ್ಬ ಶ್ರೇಷ್ಠ ಗುರುವಿನಿಂದ ಶ್ರೇಷ್ಠ ಶಿಷ್ಯಂದಿರ ನಿರ್ಮಾಣ ಸಾಧ್ಯ: ಅಶೋಕ್ ಕಾಮತ್
ಕುಂದಾಪುರ: ರಾಧಾಕೃಷ್ಣನ್ ಅವರಲ್ಲಿರುವ ಮಾನವೀಯ ಸದ್ಗುಣಗಳನ್ನು ಪ್ರತಿಯೊಬ್ಬ ಶಿಕ್ಷಕರು ಮೈಗೂಢಿಸಿಕೊಳ್ಳಬೇಕು. ಶಿಕ್ಷಕ ದಿನಾಚರಣೆಯಂತಹ ಆಚರಣೆಗಳು ನಮಗೆ ಪ್ರೇರಣೆ, ಪೆÇ್ರೀತ್ಸಾಹದ ಜೊತೆಗೆ ಮತ್ತಷ್ಟು ಸಕ್ರೀಯರಾಗಿ ಕೆಲಸ ಮಾಡಲು ಹುರುಪು ನೀಡಿದೆ. ಒಬ್ಬ ಶ್ರೇಷ್ಠ ಗುರುವಿನಿಂದ ಶ್ರೇಷ್ಠ ಶಿಷ್ಯಂದಿರ ನಿರ್ಮಾಣ ಸಾಧ್ಯ ಎಂದು ಕುಂದಾಪುರದ ನಿಕಟಪೂರ್ವ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಹೇಳಿದರು.
ಅವರು ಶನಿವಾರ ಕುಂದಾಪುರದ ಸರಕಾರಿ ಪ.ಪೂ. ಕಾಲೇಜಿನ (ಬೋರ್ಡ್ ಹೈಸ್ಕೂಲು) ಶ್ರೀ ಲಕ್ಷ್ಮಿ ನರಸಿಂಹ ಸಭಾಭವನದಲ್ಲಿ ಉಡುಪಿ ಜಿ.ಪಂ., ಕುಂದಾಪುರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಡಾ| ಎಸ್. ರಾಧಾಕೃಷ್ಣನ್, ಅಬ್ದುಲ್ ಕಲಾಂ, ಪ್ರಣವ್ ಮುಖರ್ಜಿಯವರು ಶಿಕ್ಷಕರಾಗಿದ್ದುಕೊಂಡು ಕಾರ್ಯಕ್ಷಮತೆ, ಬದ್ಧತೆಯಿಂದ ದೇಶದ ಅತ್ಯುನ್ನತ ಹುದ್ದೆಗೇರಿರುವುದು ಶಿಕ್ಷಕರಾದ ನಮಗೆ ಹೆಮ್ಮೆ. ಅವರಂತೆಯೇ ಪ್ರತಿಯೊಬ್ಬ ಶಿಕ್ಷಕನೂ ಸಹ ಈ ಕೊರೋನಾದಂತಹ ಸಂಕಷ್ಟ ಸಮಯದಲ್ಲಿಯೂ ಆತ್ಮ ಗೌರವವನ್ನು ಹೆಚ್ಚಿಸಿಕೊಳ್ಳುವುದು ಇಂದಿನ ಅವಶ್ಯಕ ಎಂದವರು ಹೇಳಿದರು.
ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ನಿವೃತ್ತಿಯಾದ ಶಿಕ್ಷಕರಾದ ಪ್ರಾಥಮಿಕ ಶಾಲೆಯ ಹೆರಿಯಣ್ಣ ಶೆಟ್ಟಿ ಅಂಪಾರು ಮೂರುಕೈ, ಸುಕನ್ಯಾ ಯಡಾಡಿ- ಮತ್ಯಾಡಿ, ಪ್ರೇಮಾ ಶೆಡ್ತಿ ತೊಂಬಟ್ಟು, ವಿಶಾಲಾಕ್ಷಿ ಬಸ್ರೂರು, ವಾಸುದೇವ ಎಂ.ಕೆ. ನೂಜಿ, ರಮಣಿ ಬಿದ್ಕಲ್‍ಕಟ್ಟೆ, ರೇಹನಾ ಬೇಗಂ ಕೋಡಿ, ಸೂರಪ್ಪ ಹೆಗ್ಡೆ ಹುಣ್ಸೆಮಕ್ಕಿ, ರಾಧಾಕೃಷ್ಣ ಕವರಿ ಹೊಳೆಬಾಗಿಲು, ನರಸಿಂಹ ಸಮಗಾರ ಸಿದ್ದಾಪುರ, ಸುರೇಂದ್ರ ಶೆಟ್ಟಿ ಮರಾತೂರು, ಗೋಪಾಲ ನಾಯ್ಕ್ ಬೆಳ್ವೆ, ಪ್ರತಾಪ್ ಶೆಟ್ಟಿ ಐರೇಬÉೈಲು, ಶ್ಯಾಮಲಾ ವಡೇರಹೋಬಳಿ, ಬೇಬಿ ಕೊರ್ಗಿ, ಸುಜಾತ ಕುಮಾರಿ ಗಂಗೊಳ್ಳಿ, ಸೀತಾಲಕ್ಷ್ಮಿ ತೆಕ್ಕಟ್ಟೆ, ಗೀತಾ ಬಾಯಿ ಶಂಕರನಾರಾಯಣ, ಅನುದಾನಿತ ಶಾಲೆಯ ವಿಶ್ವನಾಥ ಶೆಟ್ಟಿ, ಚೋನಾಳಿ, ಕಿರಣ್ ಹೊಂಬಾಡಿ- ಮಂಡಾಡಿ, ಲತಾ ಕುಂದಾಪುರ, ಯಶೋದಾ ಶೆಟ್ಟಿ ಹಳ್ನಾಡು, ನಾರಾಯಣ ಗಂಗೊಳ್ಳಿ, ಸುಧಾಕರ ಶೆಟ್ಟಿ ಹೊಂಬಾಡಿ- ಮಂಡಾಡಿ, ಸರಕಾರಿ ಪ್ರೌಢಶಾಲೆಯ ಶ್ಯಾಮ್ ಶಾನುಭಾಗ್ ಕುಂದಾಪುರ, ಮೀರಾ ಸಾಹೇಬ್ ವಡೇರಹೋಬಳಿ, ರಾಜಕುಮಾರ ತೆಕ್ಕಟ್ಟೆ, ಕುಸ್ಲು ಗೌಡ್ರು ಬೇಳೂರು, ಸೌಭಾಗ್ಯ ಸಿದ್ದಾಪುರ, ಅನುದಾನಿತ ಪ್ರೌಢಶಾಲೆಯ ಬಾಲಕೃಷ್ಣ ಶೆಟ್ಟಿ ಅಂಪಾರು, ವಿನಯ ಕುಮಾರಿ ಅಂಪಾರು, ಕಳೆದ ಬಾರಿ ಜಿಲ್ಲಾ ಶಿಕ್ಷಕ ಪ್ರಶಸ್ತಿ ಪಡೆದ ಚಂದ್ರಶೇಖರ್ ಶೆಟ್ಟಿ ಸೌಡ, ಶೇಖರ ಯು. ಅಮಾಸೆಬÉೈಲು, ಶ್ರೀಕಾಂತ್ ಬಸ್ರೂರು ಅವರನ್ನು ಸಮ್ಮಾನಿಸಲಾಯಿತು.
ಕುಂದಾಪುರ ತಾ.ಪಂ. ಅಧ್ಯಕ್ಷೆ ಇಂದಿರಾ ಶೆಟ್ಟಿ ಹರ್ಕೂರು ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ, ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ಅಧ್ಯಕ್ಷ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್ ಹಾಗೂ ಎಲ್ಲ ಶಿಕ್ಷಕರ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸೇವೆಯಲ್ಲಿದ್ದಾಗಲೇ ಸಾವನ್ನಪ್ಪಿದ ಸಿದ್ದಾಪುರ ಸಿಆರ್‍ಪಿ ಸತೀಶ್ ಬಳೆಗಾರ್ ಹಾಗೂ ಬಿದ್ಕಲ್‍ಕಟ್ಟೆ ಶಾಲೆಯ ಶಿಕ್ಷಕ ಶಿವ ಪುತ್ರನ್ ಖಾನಾಪುರ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕುಂದಾಪುರದ ಕ್ಷೇತ್ರ ಶಿಕ್ಷಣಾಧಿಕಾರಿ ಅರುಣ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕರಾದ ತೆಕ್ಕಟ್ಟೆಯ ವೇಣುಗೋಪಾಲ ಹೆಗ್ಡೆ ಹಾಗೂ ಶಂಕರನಾರಾಯಣದ ಸಂತೋಷ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.