Spread the love
ಒಮಾನ್ ಸುಲ್ತಾನ್ ನಿಧನ ಶೋಕ: ಜ.13 ಕರಾವಳಿ ಉತ್ಸವ ಕಾರ್ಯಕ್ರಮ ಮುಂದೂಡಿಕೆ
ಸುಲ್ತಾನೇಟ್ ಆಫ್ ಒಮಾನ್ ದೇಶದ ಸುಲ್ತಾನರಾದ ಖಬೂಸ್ ಬಿನ್ ಸಈದ್ ಅಲ್ ಸಈದ್ ಅವರು ಜ. 10 ರಂದು ನಿಧನರಾಗಿದ್ದು, ಅವರ ಗೌರವಾರ್ಥ ಜ. 13 ರಂದು ದೇಶಾದ್ಯಂತ ಶೋಕಾಚರಣೆ ಆಚರಿಸಲು ನಿರ್ಧರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಜ.13 ರಂದು ನಿಗದಿಯಾಗಿದ್ದ ಕರಾವಳಿ ಉತ್ಸವದ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.
Spread the love