Home Mangalorean News Kannada News ‘ಓಶಿಯಾನಸ್ ಫೆಸ್ಟ್’ ನ ಸಮಾರೋಪ ಸಮಾರಂಭ

‘ಓಶಿಯಾನಸ್ ಫೆಸ್ಟ್’ ನ ಸಮಾರೋಪ ಸಮಾರಂಭ

Spread the love

‘ಓಶಿಯಾನಸ್ ಫೆಸ್ಟ್’ ನ ಸಮಾರೋಪ ಸಮಾರಂಭ

ಮೂಡುಬಿದಿರೆ: ಮಾನವಿಕ ಶಾಸ್ತ್ರವು ಜಗತ್ತಿನ ಎಲ್ಲಾ ವಿಷಯಗಳನ್ನು ಅರಿಯಲು ಇರುವ ಬಹುದೊಡ್ಡ ಹೆಬ್ಬಾಗಿಲು ಎಂದು ಕುವೈಟ್‍ನ ವಿಶ್ವಸಂಸ್ಥೆಯ ಪ್ರಾದೇಶಿಕ ಸಮುದ್ರ ಪರಿಸರ ಸಂರಕ್ಷಣೆ ಕಾರ್ಯಾಲಯದ ಹಿರಿಯ ಸಲಹೆಗಾರ ಡಾ ಸುದರ್ಶನ ರಾಮರಾಜು ತಿಳಿಸಿದರು.

ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಹ್ಯುಮ್ಯಾನಿಟಿ ವಿಭಾಗದಿಂದ ಆಯೋಜಿಸಿದ್ದ ಎರಡು ದಿನದ ರಾಷ್ಟ್ರ ಮಟ್ಟದ ‘ಓಶಿಯಾನಸ್ ಫೆಸ್ಟ್’ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮಾನವಿಕ ವಿಭಾಗದ ವಿದ್ಯಾರ್ಥಿಗಳಿಗೆ ಹಲವು ವಿಷಯಗಳನ್ನು ಅರಿಯಲು ವಿಫುಲ ಅವಕಾಶಗಳು ಸಿಗುತ್ತವೆ. ಲಭ್ಯವಿರುವ ಎಲ್ಲಾ ವಿಷಯಗಳನ್ನು ಸಂಯೋಜಿಸಿ ಮನುಕುಲದ ಒಳಿತಿಗಾಗಿ ಶ್ರಮಿಸುವತ್ತಾ ಯುವಜನತೆ ಮುಂದಾಗಬೇಕು. ವಿದ್ಯಾರ್ಥಿಗಳು ಬರಹಗಾರ, ಚಿತ್ರಕಲಾವಿದ, ಇಂಜಿನಿಯರ್ ಗಳಾಗುವುದರ ಜತೆಗೆ ಜೀವನದಲ್ಲಿ ಮಾನವೀಯತೆಯನ್ನ ಆಳವಡಿಸಿಕೊಳ್ಳಬೇಕು ಎಂದರು.

ಹ್ಯೂಮ್ಯಾನಿಟಿ ವಿಭಾಗದಿಂದ ಆಯೋಜಿಸಿದ್ದ ‘’ಓಶಿಯಾನಸ್ ಫೆಸ್ಟ್’’ನಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಬೆಳಗಾವಿಯ ಕೆ.ಎಲ್.ಇ ಯ ಸಿ.ಬಿ.ಎ.ಎಲ್.ಸಿ ಕಾಲೇಜು ರನ್ನರ್ಸ್ ಅಪ್ ಸ್ಥಾನವನ್ನು ಪಡೆಯಿತು.

ಸಮಾರೋಪ ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಕಲಾ ವಿಭಾಗದ ಡೀನ್ ಸಂಧ್ಯಾ ಕೆ.ಎಸ್, ಉಪನ್ಯಾಸಕರಾದ ದಿವ್ಯ, ಜಯಶ್ರಿ, ವಿದ್ಯಾರ್ಥಿ ಸಂಯೋಜಕರಾದ ಸಂಜೀವ್‍ಕುಮಾರ್, ಶ್ರೀಲಕ್ಷ್ಮಿ ಘಾಟೆ ಉಪಸ್ಥಿತರಿದ್ದರು. ಸಂಜೀವ್ ಸ್ವಾಗತಿಸಿ, ಚೈತ್ರ ನಿರೂಪಿಸಿ, ಶ್ರೀಲಕ್ಷ್ಮಿ ಘಾಟೆ ವಂದಿಸಿದರು.


Spread the love

Exit mobile version