Home Mangalorean News Kannada News ‘ಔಷಧ ಪರಂಪರಾ’ ರಾಷ್ಟ್ರೀಯ ವಿಚಾರ ಸಂಕಿರಣ

‘ಔಷಧ ಪರಂಪರಾ’ ರಾಷ್ಟ್ರೀಯ ವಿಚಾರ ಸಂಕಿರಣ

Spread the love

‘ಔಷಧ ಪರಂಪರಾ’ ರಾಷ್ಟ್ರೀಯ ವಿಚಾರ ಸಂಕಿರಣ

ವಿದ್ಯಾಗಿರಿ: ಪ್ರತಿಯೊಂದು ಗಿಡ-ಮರದಲ್ಲೂ ಔಷಧೀಯ ಗುಣಗಳಿದ್ದು, ಇಂತಹ ಸಸ್ಯ ಸಂಪತ್ತಿನ ಆಹಾರ ಹಾಗೂ ಔಷಧೀಯ ಮೌಲ್ಯಗಳನ್ನು ಅರಿತುಕೊಂಡಿದ್ದರಿಂದ ಪರಂಪರಾ ಚಿಕಿತ್ಸಾ ಪದ್ದತಿ ಎಂಬುದು ಜನ್ಮತಳೆಯಿತು ಎಂದು ಹಿರಿಯ ವಿಜ್ಞಾನಿ ಡಾ. ಯು.ಎಮ್‍ಚಂದ್ರಶೇಖರ ಹೇಳಿದರು.

ಇವರು ಆಳ್ವಾಸ್ ಕಾಲೇಜಿನ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಜರುಗಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಆಳ್ವಾಸ್ ಟ್ರೆಡಿಷನಲ್ ಮೆಡಿಸಿನಲ್ ಅರ್ಕೈವ್ ಸಂಶೋಧನಾ ಕೇಂದ್ರ, ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ಭಾರತ ಸರ್ಕಾರ ಆಯುಷ್ ಇಲಾಖೆಯ ಜಂಟಿ ಆಯೋಗದೊಂದಿಗೆ ನಡೆದ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣ `ಔಷಧ ಪರಂಪರಾ’ವನ್ನು ಉದ್ಘಾಟಿಸಿ ಮಾತನಾಡಿದರು.

ವೈವಿಧ್ಯತೆ ಎಂಬುದು ಪರಂಪರಾ ಚಿಕಿತ್ಸೆಯ ಲಕ್ಷಣ. ಈ ಚಿಕಿತ್ಸೆಯಲ್ಲಿಯುನಾನಿ- ಸಿದ್ದೌಷ ಗಳಂತಹ ವಿಭಾಗಗಳಿದ್ದರೂ ಹಳ್ಳಿಯ ಮೂಲವನ್ನು ಹೊಂದಿರುವ ನಾಟಿವೈದ್ಯ ಪದ್ದತಿಯು ಪ್ರಮುಖ ಸ್ಥಾನವನ್ನು ಹೊಂದಿದೆ. ಆದರೆ ಈ ಚಿಕಿತ್ಸೆಯ ಕುರಿತು ಮಾಹಿತಿ ಕೊರತೆಯಿರುವುದರಿಂದ ಸೂಕ್ತ ಸಂಶೋಧನೆಯ ಅವಶ್ಯಕತೆಯಿದೆ. ಹೀಗೆ ಸಂಶೋಧನೆ ನಡೆಸಿದಾಗ ಸಸ್ಯಸಂಪತ್ತು ಹಾಗೂ ಚಿಕಿತ್ಸೆಯ ವೈಜ್ಞಾನಿಕ ಮೌಲ್ಯಗಳನ್ನು ತಿಳಿಯುತ್ತದೆ. ಆ ಮೂಲಕ ಪಾರಂಪರಿಕ ಚಿಕಿತ್ಸಾ ಪದ್ದತಿಯು ಹೆಚ್ಚು ಪ್ರಚಲಿತಕ್ಕೆ ಬರುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಭಾರತ ಸರ್ಕಾರದ ಮಾಜಿ ಕಾರ್ಯದರ್ಶಿ ವಿ.ವಿ ಭಟ್ ಮಾತನಾಡಿ, ಜ್ಞಾನ ಹಾಗೂ ವಿಜ್ಞಾನಗಳು ಎಂದಿಗೂ ಬದಲಾಗುವುದಿಲ್ಲ. ಅವುಗಳ ವ್ಯತ್ಯಾಸವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಅಗಾಧ ಜೀವವೈವಿಧ್ಯತೆಯನ್ನು ಹೊಂದಿರುವ ನಮ್ಮದೇಶದಲ್ಲಿ ಅವುಗಳನ್ನು ಗುರುತಿಸುವಕಾರ್ಯವನ್ನುಆಯುರ್ವೇದ ಸಂಸ್ಥೆಗಳು ನಡೆಸಬೇಕಾಗಿದೆಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್‍ಟ್ರಸ್ಟಿ ಡಾ. ವಿನಯ್ ಆಳ್ವ ಮಾತನಾಡಿ, ವ್ಯೆದ್ಯಕೀಯ ಲೋಕವನ್ನು ಪಾರಂಪರಿಕ ಹಾಗೂ ವೈಜ್ಞಾನಿಕ ವೈದ್ಯ ಪದ್ದತಿಗಳೆಂದು ಬೇರ್ಪಡಿಸಬಾರದು. ಆ ಎರಡು ಪದ್ಧತಿಗಳನ್ನು ಒಂದೇ ಎಂದು ಭಾವಿಸಿದಾಗ ಮಾತ್ರ ವೈದ್ಯಕೀಯಕ್ಷೇತ್ರಅಭಿವೃದ್ದಿ ಹೊಂದುತ್ತದೆಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪಾರಂಪರಿಕ ಔಷಧಿಯಲ್ಲಿಅಪಾರ ಸಾಧನೆಗದೈದ ಬದನಾಜೆ ಶಂಕರ್ ಭಟ್‍ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ನಾಟಿಪದ್ದತಿಯಕುರಿತು ಸತ್ಯನಾರಾಯಣ ಭಟ್ ರಚಿಸಿರುವ `ಮಾಳ ಸುತ್ತಿನ ಮೂಲಿಕಾ ವೈದ್ಯ’ ಎಂಬ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿಕಾಲೇಜಿನ ಟ್ರಸ್ಟಿ ಡಾ.ಹಾನ ಶೆಟ್ಟಿ ಉಪಸ್ಥಿತರಿದ್ದರು. ಆಳ್ವಾಸ್ ಟ್ರೇಡಿಷನಲ್ ಮೆಡಿಸಿನಲ್ ಅರ್ಕೈವ್‍ನ ನಿರ್ದೇಶಕರಾದ ಡಾ ಸುಬ್ರಮಣ್ಯ ಪದ್ಯಾಣ ಪ್ರಾಸ್ತವಿಕ ಮತುಗಳನ್ನಾಡಿದರು. ಆಳ್ವಾಸ್ ಆಯುರ್ವೇದಕಾಲೇಜಿನ ಪ್ರಾಂಶುಪಾಲೆ ಡಾ, ಝನಿಕಾಡಿಸೋಜಾ ಸ್ವಾಗತಿಸಿ, ಡಾ. ಕೃಷ್ಣಮೂರ್ತಿ ವಂದಿಸಿ, ಡಾ. ಗೀತಾ.ಬಿ. ಮಾರ್ಕಾಂಡೆಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version