ಕಂಬಳಕ್ಕೆ ಅಂತಿಮ ನಿಯಮಾವಳಿ ಸಿದ್ಧ: ಶಿಸ್ತು, ಸಮಯ ಪಾಲನೆಗೆ ವಿಶೇಷ ಆದ್ಯತೆ, ಹಲವು ಬದಲಾವಣೆಗೆ ಸಮಿತಿ ಒಪ್ಪಿಗೆ
ಮಂಗಳೂರು: ಜಾನಪದ ಕ್ರೀಡೆಯಾದ ಕಂಬಳದ ಆರಂಭಗೊಳ್ಳುತ್ತಿದೆ. ಈ ಬಾರಿ ಸಮಯ ಪಾಲನೆಗೆ ಆದ್ಯತೆ ನೀಡಲು ನಿಯಮಾವಳಿ ಸೂತ್ರ ಅನುಷ್ಠಾನಕ್ಕೆ ಜಿಲ್ಲಾ ಕಂಬಳ ಸಮಿತಿ ನಿರ್ಧರಿಸಿದೆ.
ಇಲ್ಲಿಯವರೆಗೆ ಒಂದು ವಿಭಾಗದ ಕೋಣಗಳು ಕರೆಗೆ ಇಳಿಯಲು ಸುದೀರ್ಘ ಸಮಯ ತಗಲುತ್ತಿತ್ತು. ಇನ್ನು ಮುಂದೆ 30 ನಿಮಿಷಗಳೊಳಗೆ ಮುಕ್ತಾಯಗೊಳಿಸಬೇಕು. ಇದನ್ನು ಇಳಿದೆ. ಕೋಣಗಳನ್ನು ನಿಗದಿನ ಸಮಯದ ಒಳಗೆ ಬಿಡಬೇಕು. ಗಂತಿನಲ್ಲಿ ವಿನಾಕಾರಣ ಕಾಲ ಹರಣ ಮಾಡುವಂತಿಲ್ಲ. ಜೂನಿಯರ್ 2 ನಿಮಿಷ ಹಾಗು ಸೀನಿಯರ್ 5 ನಿಮಿಶಗಳ ಒಳಗೆ ಕೆರೆಗೆ ಬಾರದಿದ್ದಲ್ಲಿ ಇದ್ದ ಕೋಣಗಳಿಗೆ ವಾಕ್ ಓವರ್ ನೀಡಲಾಗುವುದು.
ಒಬ್ಬ ಓಟಗಾರ ಒಂದು ವಿಭಾಗದಲ್ಲಿ ಒಂದು ಜತೆ ಕೋಣಗಳನ್ನು ಓಡಿಸಿದಲ್ಲಿ 4 ವಿಭಾಗಗಳಲ್ಲಿ ಭಾಗವಹಿಸಲು ಮಾತ್ರ ಅವಕಾಶ. ಒಂದು ವಿಭಾಗದಲ್ಲಿ “ಎ’, ‘ಬಿ’ (ಒಂದೇ ಯಜಮಾನರ) ಕೋಣಗಳನ್ನು ಓಡಿಸಿದ್ದಲ್ಲಿ 3 ವಿಭಾಗಕ್ಕೆ ಸೀಮಿತಗೊಳಿಸಲಾಗುತ್ತದೆ. “ಎ’, “ಬಿ’, “ಸಿ’ ಮೂರು ಕೋಣಗಳನ್ನು ಓಡಿಸಿದ್ದಲ್ಲಿ ಮತ್ತೆ ಒಂದು ಜತೆ ಕೋಣ ಓಡಿಸಲು ಅವಕಾಶವಿರಲಿದೆ. ಕೋಣ ಬಿಡುವವರೂ ಒಂದು ವಿಭಾಗದಲ್ಲಿ ಒಂದು ಜತೆ ಬಿಡಬೇಕು. ಗರಿಷ್ಠ 4 ಜತೆ ಮಾತ್ರ (“ಎ. “ದಿ ಅವಕಾಶ) ಇರುತ್ತದೆ. ಪ್ರತಿಯೊಂದು ವಿಭಾಗದ ಸ್ಪರ್ಧೆಗಳು ಮುಗಿದ 10 ನಿಮಿಷಗಳಲ್ಲಿ ಮುಂದಿನ ಸ್ಪರ್ಧೆಗೆ ಚೀಟಿ ಹಾಕಬೇಕು. ಆ ಹೊತ್ತಿನಲ್ಲೇ ಯಾವ ಹೊತ್ತಿಗೆ ಸ್ಪರ್ಧೆ ಎಂಬುದನ್ನು ತಿಳಿಸಬೇಕು.
ಹಿಂದಿನ ಕಂಬಳದ ಬಹುಮಾನ ವಿಜೇತ ಜೋಡಿ ಕೋಣಕ್ಕೆ ಯಾವುದೇ ಹೆಸರಿನಲ್ಲಿ ಓಡಿಸಿದರೂ “ಶೀಡಿಂಗ್’ (ಅದೇ ರೀತಿಯ ಸ್ಪರ್ಧೆ ಈ ಬಾರಿ ಸಿಗದಂತೆ ಮಾಡುವ ಕ್ರಮ) ಇರುತ್ತದೆ. ಒಂದು ಕೋಣ ಹಿಂದಿನ ಕಂಬಳದ ಯಜಮಾನನ ಹೆಸರು ಇದ್ದರೆ ಶೇಡಿಂಗ್ ನೀಡಬೇಕು. ಒಂದು ಕೋಣ ಇದ್ದು, ಬೇರೆಯವರ ಹೆಸರಿನಲ್ಲಿ ಓಡಿಸಿದರೆ ಶೇಡಿಂಗ್ ನೀಡುವುದಿಲ್ಲ.
ಕಿರಿಯ ವಿಭಾಗದಲ್ಲಿ ಅತಿ ಹೆಚ್ಚು ಕೋಣಗಳು ಇರುವುದರಿಂದ ಈ ವ್ಯವಸ್ಥೆಗೆ “ಆ್ಯಪ್ ಬಳಸಿ ಸಾಲು ನಿರ್ಣಯಿಸಲಾ ಗುತ್ತದೆ. ಅನುಕೂಲಕ್ಕಾಗಿ ಕರೆಗೆ ಇಳಿಯುವ ಸಂದರ್ಭ ಮಂಜೊಟ್ಟಿಯಲ್ಲೇ ಹೆಸರು ನೋಂದಣಿ ಮಾಡಿಸಬೇಕು. ಎಲ್ಇಡಿ ಟೈಮರ್ ಸ್ಟಾರ್ಟಿಂಗ್ನಲ್ಲಿ ಅಳವಡಿಸಿ ಕೋಣಗಳ ಸಮಯ ಪಾಲನೆಗೆ ಸೈರನ್ ವ್ಯವಸ್ಥೆ ಜಾರಿಗೆ ಬರಲಿದೆ.
ಕಂಬಳ ಪ್ರಾರಂಭದ 30 ನಿಮಿಷ ಮೊದಲು ಗಂತಿನ ತೀರ್ಪು ಗಾರರು 2 ಜನ, ಮಂಜೊಟ್ಟಿ ತೀರ್ಪುಗಾರರು 3 ಜನ, 1 ಬರವಣಿಗೆದಾರರು ಹಾಜರಿರಬೇಕು. ರೊಟೇಶನ್ ಪದ್ಧತಿಯಂತೆ ಈ ತೀರ್ಪುಗಾರರು ಕಾರ್ಯನಿರ್ವಹಿಸಬೇಕು. ಬೆಳಗ್ಗೆ 8.30ರಿಂದ 12ರ ವರೆಗೆ ಈ ತೀರ್ಪುಗಾರರರಿಗೆ ಕೆಲಸ. ಅನಂತರ 2 ಗಂಟೆಗೊಬ್ಬರಂತೆ ಕಾರ್ಯನಿರ್ವಹಿಸಬೇಕು. ಮಂಜೊಟ್ಟಿ ತೀರ್ಪುಗಾರರು ಸೆನ್ಸಾರ್ ಲೈಟ್ ಹಾಗೂ ಟೈಮಿಂಗ್ಸ್ ನೋಡಿ ತೀರ್ಪು ನೀಡಬೇಕು. ಆಗ ಕೇವಲ ಲೈಟ್ ಮಾತ್ರ ಪರಿಗಣಿಸಬಾರದು. ಅಗತ್ಯ ಬಿದ್ದಲ್ಲಿ ಧರ್ಡ್ ಅಂಪಾಯರ್ ನಿರ್ಧಾರ ಪಡೆದುಕೊಳ್ಳಬೇಕು.